ಸಹನಾ ಬಾಳಲ್ಲಿ ವಿದೇಶಿಗನೊಬ್ಬನ ಆಗಮನವಾಗಿದ್ದರೆ, ಸ್ನೇಹಾ ಪರೀಕ್ಷೆಗೆ ಹೋಗುವಾಗ ಆ್ಯಕ್ಸಿಡೆಂಟ್​  ಆಗಿದೆ. ಇಬ್ಬರ ಬದುಕಲ್ಲಿ ಏನಿದು ಟ್ವಿಸ್ಟ್​? 

ಪುಟ್ಟಕ್ಕನ ಮಕ್ಕಳು ಸೀರಿಯಲ್​ ಇದೀಗ ದಿನದಿಂದ ದಿನಕ್ಕೆ ಟ್ವಿಸ್ಟ್​ ಪಡೆದುಕೊಳ್ಳುತ್ತಿದೆ. ಸ್ನೇಹಾ ಮತ್ತು ಕಂಠಿ ಯಾವಾಗ ಒಂದಾಗ್ತರೆ ಎಂದು ಕಾಯ್ತಿದ್ದವರಿಗೆ ಯಾವಾಗಲೋ ಆಸೆ ಈಡೇರಿದೆ. ಅತ್ತೆ-ಸೊಸೆ ಒಂದಾಗಲಿ ಎಂದು ವೇಟ್​ ಮಾಡುತ್ತಿದ್ದವರಿಗೆ ಆ ದಿನವೂ ಬಂದಾಗಿದೆ. ವಿಲನ್​ ರಾಜಿಗೆ ಬುದ್ಧಿ ಬರಲಿ ಎಂದುಕೊಳ್ಳುತ್ತಿದ್ದವರಿಗೆ ಅದೂ ಸಿಕ್ಕಿಬಿಟ್ಟಿದೆ. ಈಗೇನಿದ್ದರೂ ಸಹನಾ ವಾಪಸಾಗಬೇಕು, ಸ್ನೇಹಾ ಐಎಎಸ್​ ಪಾಸಾಗಬೇಕು. ಆದರೆ ಇದೀಗ ಸಹನಾ ಮತ್ತು ಸ್ನೇಹಾಳ ಬಾಳಲ್ಲಿ ಬೇರೆಯದ್ದೇ ಆಗಿದೆ.

ಸಹನಾ ಸಾಧನಾ ಎನ್ನುವ ಹೆಸರಿನಲ್ಲಿ ರಸ್ತೆ ಬದಿಯಲ್ಲಿ ತಿಂಡಿ ಮಾರುತ್ತಿದ್ದಾಳೆ. ವಿದೇಶಿಗ ಫುಡ್​ ಬ್ಲಾಗರ್​ ಒಬ್ಬ ವಿಡಿಯೋ ಮಾಡುತ್ತಾ ಬರುತ್ತಾನೆ. ಸಹನಾ ಪ್ರಸಾದ ನೀಡುತ್ತಿರುವಾಗ, ಅದನ್ನು ಸ್ವೀಕರಿಸಲು ಮುಂದಾಗುತ್ತಾನೆ. ಆಗ ಸಹನಾ ಅಂಗಡಿಯಲ್ಲಿ ಇರುವ ಹುಡುಗ ಶೂಸ್​ ತೆಗೆಯುವಂತೆ ಹೇಳುತ್ತಾನೆ. ಶೂಸ್​ ತೆಗೆಯುವುದಕ್ಕಾಗಿ ಆತ ಕ್ಯಾಮೆರಾ ಮತ್ತು ಬ್ಯಾಗ್​ ಅನ್ನು ಖುರ್ಚಿಯ ಮೇಲೆ ಇಟ್ಟಾಗ ಯಾರೋ ಅದನ್ನು ಕದ್ದುಕೊಂಡು ಹೋಗುತ್ತಾರೆ. ಕೊನೆಗೆ ಅವನಿಗೆ ಸಹನಾ ಊಟ ಬಡಿಸುತ್ತಾಳೆ. ಅವನು ಅವಳನ್ನೇ ದಿಟ್ಟಿಸುತ್ತಾನೆ. ನಂತರ ಅವನ ಬಗ್ಗೆ ಪೊಲೀಸಪ್ಪನ ಬಳಿ ಹೇಳಿ ಬ್ಯಾಗ್​ ಕೊಡಿಸುವಂತೆ ಹೇಳುತ್ತಾಳೆ. ಆ ವಿದೇಶಿಗ ತನ್ನ ಹೆಸರನ್ನು ಮ್ಯಾಕ್ಸ್​ ಎನ್ನುತ್ತಾನೆ. ಅವನಿಗೆ ಕನ್ನಡ ಬರಲ್ಲ, ಇವಳಿಗೆ ಇಂಗ್ಲಿಷ್​ ಬರಲ್ಲ. ಒಟ್ಟಿನಲ್ಲಿ ಅವನಿಗೆ ಸಹನಾ ಮೇಲೆ ಅದೇನೋ ಮೋಹ ಆಗುತ್ತದೆ. ಒಟ್ಟಿನಲ್ಲಿ ಸಹನಾ ಬಾಳಲ್ಲಿ ವಿದೇಶಿಗನ ಎಂಟ್ರಿ ಆದಂತೆ ತೋರಿಸಲಾಗಿದೆ.

ರಾಜಾ ರಾಣಿ ಷೋ ಶೂಟಿಂಗ್​ ವೇಳೆ ಆ್ಯಂಕರ್​ ಅನುಪಮಾ ಬೆಳಿಗ್ಗೆಯಿಂದ ಏನೆಲ್ಲಾ ಮಾಡ್ತಾರೆ?

ಅದೇ ಇನ್ನೊಂದೆಡೆ, ಸೊಸೆ ಸಹನಾಳಿಗೆ ಖುದ್ದು ಬಂಗಾರಮ್ಮ ಕಾರಿನಲ್ಲಿ ಕರೆದುಕೊಂಡು ಹೋಗುತ್ತಾಳೆ. ಪರೀಕ್ಷೆ ಬರೆಯಲು ಸಹನಾಳನ್ನು ಕರೆದುಕೊಂಡು ಹೋಗುವಾಗ ರಸ್ತೆಯಿಂದಾಗಿ ಕಾರು ಮರಕ್ಕೆ ಡಿಕ್ಕಿ ಹೊಡೆಯುತ್ತದೆ. ಇತ್ತ ಪುಟ್ಟಕ್ಕ ಸಹನಾಳ ಪರೀಕ್ಷೆ ಚೆನ್ನಾಗಿ ಆಗಲಿ ಎಂದು ದೇವರಲ್ಲಿ ಬೇಡಿಕೊಳ್ಳುವಾಗ ದೀಪ ಆರಿ ಹೋಗುತ್ತದೆ. ಇದರ ಪ್ರೊಮೋ ಬಿಡುಗಡೆ ಮಾಡಲಾಗಿದೆ. ಇದೀಗ ಪುಟ್ಟಕ್ಕನ ಇಬ್ಬರು ಮಕ್ಕಳ ಜೀವನದಲ್ಲಿ ಏನೇನೋ ನಡೆಯುತ್ತಿದೆ. ಮುಂದೇನಾಗುತ್ತೋ ಕಾದು ನೋಡಬೇಕಿದೆ.

ಸಹನಾಳ ವಿಡಿಯೊ ಅನ್ನು ಬ್ಲಾಗರ್​ ತನ್ನ ಚಾನೆಲ್​ನಲ್ಲಿ ಹಾಕಿದಾಗ ಅದನ್ನು ಸುಮಾ ನೋಡಿ ಸಹನಾ ಬದುಕಿರುವ ವಿಷಯ ತಿಳಿಯುತ್ತದೆ ಎಂದು ಕೆಲವರು ಕಥೆಯನ್ನು ತಾವೇ ಬರೆದಿದ್ದಾರೆ. ಇತ್ತ ಸ್ನೇಹಾ ಅಪಘಾತವಾದರೂ ಪರೀಕ್ಷೆ ಬರೆಯುತ್ತಾಳೆ, ನೋವಿನಲ್ಲಿಯೂ ಬಂಗಾರಮ್ಮ ಸೊಸೆಗೆ ಪರೀಕ್ಷೆ ಬರೆಸುತ್ತಾಳೆ ಎಂದು ಹೇಳುತ್ತಿದ್ದಾರೆ. ಸೀರಿಯಲ್​ ಪ್ರೇಮಿಗಳು ಹೇಳುತ್ತಿರುವ ಈ ಕಥೆ ಹಾಗೆಯೇ ಸಾಗುತ್ತದೆಯೆ? ಸಹನಾ, ಸ್ನೇಹಾ ಬಾಳಲ್ಲಿ ಇನ್ನೇನು ಆಗಲಿದೆ ಎನ್ನುವುದು ಈಗಿರುವ ಕುತೂಹಲ. 

ಹಂದಿ ಇದ್ದರೆ ಕೇರಿ ಹ್ಯಾಂಗೆ ಶುದ್ಧಿಯೋ ಹಂಗೆ ನಿಂದಕರಿರಬೇಕು... ಎಂದು ದಾಸರು ಹೇಳಿದ್ದು ಇದಕ್ಕೇ ಅಲ್ವೆ?