ಬಾತ್​ರೂಮ್​ನ ಟೈಲ್ಸ್​ ಒಡೆದಾಗ ಚಿನ್ನದ ನಾಣ್ಯಗಳು, ನೋಟು, ಆಭರಣಗಳು​ ಸಿಕ್ಕಿರುವ ವಿಡಿಯೋ ವೈರಲ್​ ಆಗಿದೆ. ಲಾಕ್​ ಆಗಿದ್ದ ಪೆಟ್ಟಿಗೆಯನ್ನು ಒಡೆದಾಗ ಇವೆಲ್ಲವೂ ಪತ್ತೆಯಾಗಿದೆ. ಆದರೆ ವೀಕ್ಷಣೆಗಾಗಿ ಯೋಜಿತವಾಗಿ ಸೃಷ್ಟಿಸಲಾದ ನಕಲಿ ವಿಡಿಯೋ ಎಂಬ ಅನುಮಾನ ವ್ಯಕ್ತವಾಗಿದೆ. ಕೋಟ್ಯಂತರ ವೀಕ್ಷಣೆ ಪಡೆದು ವೈರಲ್​ ಆಗಿದೆ.

ಮನೆಯ ಬಾತ್​ರೂಮ್​ನಿಂದ ಕೋಣೆಯ ಟೈಲ್ಸ್​ ಒಡೆದಾಗ ಚಿನ್ನದ ನಾಣ್ಯಗಳ ಸುರಿಮಳೆಯಾಗುತ್ತಿರುವ ಕುತೂಹಲದ ವಿಡಿಯೋ ಒಂದು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದ್ದು, ಎಲ್ಲರ ಹುಬ್ಬೇರಿಸುತ್ತಿದೆ. ಈ ವಿಡಿಯೋದಲ್ಲಿ ಓರ್ವ ವ್ಯಕ್ತಿ ಬಾತ್​ರೂಮ್​ಗೆ ಹೋಗಿ ಸುತ್ತಿಗೆಯಿಂದ ಗೋಡೆಯನ್ನು ಒಡೆಯುವುದನ್ನು ನೋಡಬಹುದಾಗಿದೆ. ಟೈಲ್ಸ್‌ಗಳು ತುಂಡು ತುಂಡಾಗುತ್ತಿದ್ದಂತೆಯೇ, ಒಳಗಡೆಯಿಮದ ಚಿನ್ನದ ನಾಣ್ಯಗಳ ಸುರಿಮಳೆಯಾಗುತ್ತಿದೆ. ಟೈಲ್ಸ್​ ಸಂಪೂರ್ಣ ತೆಗೆದಾಗ ಅಲ್ಲೊಂದು ಕಬ್ಬಿಣದ ಪೆಟ್ಟಿಗೆ ಇರುವುದನ್ನು ನೋಡಬಹುದು. ಅದನ್ನು ನೋಡಿದ ವ್ಯಕ್ತಿ ಹೆಚ್ಚು ಆಘಾತಕ್ಕೊಳಗಾಗುತ್ತಾನೆ. 

ಆ ಪೆಟ್ಟಿಗೆಯನ್ನು ಲಾಕ್​ ಆಗಿದ್ದು, ಅದರ ಮೇಲೆ ಸಂಖ್ಯೆಗಳನ್ನು ನೋಡಬಹುದಾಗಿದೆ. ಸಂಖ್ಯೆಗಳ ಮೇಲೆ ಎಷ್ಟು ಬಾರಿ ಕ್ಲಿಕ್ ಮಾಡಿದರೂ ಬಾಗಿಲು ತೆರೆಯುವುದಿಲ್ಲ. ಹಾಗಾಗಿ ಕೊನೆಗೆ ಕಷ್ಟಪಟ್ಟು ಅದನ್ನು ಹೊರತೆಗೆದು ನೆಲಕ್ಕೆ ಅಪ್ಪಳಿಸುತ್ತಾನೆ ಆ ವ್ಯಕ್ತಿ. ನಂತರ ಅದರ ಮೇಲೆ ದೊಡ್ಡ ಇಟ್ಟಿಗೆಗಳನ್ನೂ ಇಡುತ್ತಾನೆ. ಈ ಕಾರಣದಿಂದಾಗಿ, ಪೆಟ್ಟಿಗೆಯ ಬಾಗಿಲು ಸ್ವಲ್ಪ ಬಾಗುತ್ತದೆ. ಒಳಗೆ ಕರೆನ್ಸಿ ನೋಟುಗಳನ್ನು ಕಾಣಬಹುದು. ಕೊನೆಗೆ ಡಬ್ಬದ ಬಾಗಿಲು ತೆರೆದು ನೋಡಿದಾಗ ನೋಟಿನ ಬಂಡಲ್, ಚಿನ್ನ ಬೆಳ್ಳಿ ಆಭರಣಗಳು, ಫೋಟೋ, ಮೊಬೈಲ್ ಫೋನ್ ಇತ್ತು. ಅಲ್ಲದೆ ಇನ್ನೊಂದು ಚಿಕ್ಕ ಪೆಟ್ಟಿಗೆಯನ್ನು ಒಡೆದು ನೋಡಿದಾಗ ವಜ್ರ, ನಗದು ಹಾಗೂ ಚಿಕ್ಕ ಗನ್ ಪತ್ತೆಯಾಗಿದೆ.

ಸಾವರ್ಕರ್​ರನ್ನು ಹೊಗಳಿ ಅಂಚೆ ಚೀಟಿ ಬಿಡುಗಡೆಗೊಳಿಸಿದ್ದ ಇಂದಿರಾ ಗಾಂಧಿ! ಸದನದಲ್ಲಿ ಕೋಲಾಹಲ ಸೃಷ್ಟಿಸಿದ್ದ ಪತ್ರ ವೈರಲ್​

ನೋಡಲು ಅಸಲಿಯಂತೆ ಕಂಡರೂ ಇದು ಫೇಕ್​ ವಿಡಿಯೋ ಎಂದೇ ಹಲವರು ಹೇಳುತ್ತಿದ್ದಾರೆ. ಒಬ್ಬನೇ ವ್ಯಕ್ತಿ ಹೀಗೆ ಟೈಲ್ಸ್​ ತೆಗೆಯಲು ಹೋಗಿದ್ದು, ಆತನ ರಿಯಾಕ್ಷನ್​ ಎಲ್ಲವೂ ಫೇಕ್​ ಅಂತೆ ಅನ್ನಿಸುತ್ತಿದೆ ಎನ್ನುವುದೇ ಬಹುತೇಕ ಅನಿಸಿಕೆ. ಏಕೆಂದರೆ, ಇಡೀ ವಿಡಿಯೋ ಸೂಕ್ಷ್ಮವಾಗಿ ಗಮನಿಸಿದರೆ, ವೀಕ್ಷಣೆ ಮತ್ತು ಲೈಕ್‌ಗಳಿಗಾಗಿ ಇದನ್ನು ಯೋಜಿಸಿ ತೆಗೆದುಕೊಳ್ಳಲಾಗಿದೆ ಎನ್ನುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. 

ಅದೇನೇ ಇದ್ದರೂ ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದಕ್ಕೆ ನೆಟಿಜನ್‌ಗಳು ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಕೆಲವರು "ಇದು ನಕಲಿ ಚಿನ್ನ.. ವೀಕ್ಷಣೆಗಾಗಿ ಮಾಡಲಾಗಿದೆ" ಎಂದು ಹೇಳಿದರು. ಈ ವೀಡಿಯೊ ಪ್ರಸ್ತುತ 40 ವಿರಕ್ಕೂ ಹೆಚ್ಚು ಇಷ್ಟಗಳು ಮತ್ತು ಕೋಟಿಯಷ್ಟು ವೀಕ್ಷಣೆಗಳನ್ನು ಹೊಂದಿದೆ. ಸತ್ಯನೋ, ಸುಳ್ಳೋ ಒಟ್ಟಿನಲ್ಲಿ ಈ ರೀಲ್ಸ್​ ಅಪ್​ಲೋಡ್​ ಮಾಡಿದವನಿಗೆ ಮಾಲಾಮಾಲ್​ ಆಗಿದ್ದಂತೂ ದಿಟ. ಏಕೆಂದರೆ ಇದಾಗಲೇ ಕೋಟ್ಯಂತರ ಮಂದಿ ಇದನ್ನು ವೀಕ್ಷಿಸಿದ್ದಾರೆ. ಇನ್ನೇನು ಬೇಕು ಹೇಳಿ? 

ತಂದೆ ಸರಸ್ವತಿ ಆರಾಧಕರು: ಇಸ್ಲಾಂನಂತೆ ಪ್ರಾರ್ಥನೆ ಹೇಳಲೇ ಇಲ್ಲ.. ಜಾಕೀರ್​ ಹುಸೇನ್​ ಕುತೂಹಲದ ವಿಡಿಯೋ ವೈರಲ್​

View post on Instagram