ಭಾಗ್ಯಲಕ್ಷ್ಮೀ ಸೀರಿಯಲ್‌ನಲ್ಲಿ ಭಾಗ್ಯ ಸ್ಕೂಲ್‌ನಲ್ಲಿ ಬೇರೆ ಮಕ್ಕಳ ಜೊತೆ ಮುಜುಗರದಿಂದ ಕೂತಿದ್ದಾಳೆ. ಕ್ಲಾಸ್‌ಮೇಟ್ ಆಂಟಿ ಕಾಲೆಳೆತಿದ್ದಾರೆ ಮಕ್ಕಳು. ಆದರೆ ಮಗಳು ತನ್ವಿ ಪಾಲಿಗೆ ಭಾಗ್ಯ ದುರ್ಗಿ ಆಗ್ತಾಳ?

ನೀವೇ ಇಮ್ಯಾಜಿನ್‌ ಮಾಡ್ಕೊಳ್ಳಿ. ಹದಿನಾಲ್ಕು ಹದಿನೈದರ ಹರೆಯದ ಹುಡುಗ ಹುಡುಗೀರಿರೋ ಕ್ಲಾಸಿನಲ್ಲಿ ಮೂವತ್ತೈದರ ಹರೆಯದ ಆಂಟಿಯೊಬ್ಬರು ಬಂದು ನಾನು ನಿಮ್ಮ ಕ್ಲಾಸ್‌ಮೇಟ್‌ ಅಂದರೆ ಸೀನ್ ಹೇಗಿರುತ್ತೆ.. ಅಂಥದ್ದೇ ಸೀನ್ ಭಾಗ್ಯಲಕ್ಷ್ಮೀ ಸೀರಿಯಲ್‌ನಲ್ಲಿ ಕ್ರಿಯೇಟ್ ಆಗಿದೆ. ಅತ್ತೆ ಕುಸುಮಾ ಚಾಲೆಂಜ್‌ಗೆ ಮಣಿದು ಭಾಗ್ಯ ಸ್ಕೂಲ್ ಮೆಟ್ಟಿಲು ಹತ್ತಿದ್ದಾಳೆ. ಅತ್ತೆ ಸೊಸೆ ಹೇಗೋ ಹೋರಾಟ ಮಾಡಿ ಭಾಗ್ಯಳಿಗೆ ಸೀಟು ಗಿಟ್ಟೋ ಹಾಗೆ ಮಾಡಿದ್ದಾರೆ. ಇದಾದರೂ ಓಕೆ. ಆದರೆ ತನ್ನ ಮಗಳ ವಯಸ್ಸಿನ ಮಕ್ಕಳ ಜೊತೆ ಕ್ಲಾಸ್‌ಮೇಟ್ ಥರ ಕ್ಲಾಸಲ್ಲಿ ಕೂರೋ ಕಷ್ಟ ಹೇಗಿರಬಹುದು ಅನ್ನೋದನ್ನು ನೋಡ್ಬೇಕು ಅಂದರೆ ಭಾಗ್ಯಲಕ್ಷ್ಮೀ ಸೀರಿಯಲ್ ನೋಡ್ಬೇಕು. ಯೂನಿಫಾರ್ಮ್‌ ಹಾಕಿಕೊಂಡು ಶಾಲೆಗೆ ಬರುವ ಮಕ್ಕಳ ನಡುವೆ ಸೀರೆ ಹಾಕಿಕೊಂಡ ನಾನು ಹೇಗೆ ಓದುವುದು ಎಂದುಕೊಳ್ಳುತ್ತಲೇ ಕ್ಲಾಸ್‌ರೂಮ್‌ ಒಳಗೆ ಅಡಿ ಇಡುತ್ತಾಳೆ. ಭಾಗ್ಯಳನ್ನು ನೋಡಿದ ಮಕ್ಕಳು ಹೊಸ ಟೀಸರ್‌ ಬಂದ್ರು ಎಂದು ಎದ್ದು ನಿಂತು ಗುಡ್‌ ಮಾರ್ನಿಂಗ್‌ ಹೇಳುತ್ತಾರೆ. ಆಗ ಭಾಗ್ಯ ಗಾಬರಿ ಆಗುತ್ತಾಳೆ. ನಾನು ಮ್ಯಾಮ್‌ ಅಲ್ಲ ಎನ್ನುತ್ತಲೇ ಭಾಗ್ಯ ಒಂದು ಕಡೆ ಹೋಗಿ ಕೂರುತ್ತಾಳೆ. ಅಷ್ಟರಲ್ಲಿ ಕ್ಲಾಸ್‌ ಟೀಚರ್‌ ಬರುತ್ತಾರೆ. ಭಾಗ್ಯ ಕ್ಲಾಸ್‌ಗೆ ಬಂದಿರುವುದನ್ನು ತಿಳಿದು ಪರಿಚಯ ಮಾಡಿಕೊಳ್ಳುವಂತೆ ಹೇಳುತ್ತಾರೆ.

ಭಾಗ್ಯ ಅಂಜುತ್ತಲೇ ಮುಂದೆ ಬಂದು ನಿಂತು ತನ್ನ, ಕುಟುಂಬದವರ ಪರಿಚಯ ಮಾಡಿಕೊಳ್ಳುತ್ತಾಳೆ, ತನ್ನ ಹವ್ಯಾಸ ಇಷ್ಟವನ್ನು ಹೇಳಿಕೊಳ್ಳುತ್ತಾಳೆ. ಭಾಗ್ಯ ಮಾತನಾಡುವಾಗ ಆಕೆಯ ಕಾಲೆಳೆಯುವ ಮಕ್ಕಳಿಗೆ ಟೀಚರ್‌ ಬೈದು ಸುಮ್ಮನಿರಿಸುತ್ತಾರೆ. ಈಗಾಗಲೇ ಪೋಷನ್‌ ಮುಗಿದಿರುವುದರಿಂದ ಯಾರಾದರೂ ಭಾಗ್ಯಳಿಗೆ ನೋಟ್ಸ್‌ ಕೊಡುವಂತೆ ಮ್ಯಾಡಮ್‌ ಹೇಳುತ್ತಾರೆ. ಆದರೆ ಯಾರೂ ಭಾಗ್ಯಗೆ ನೋಟ್ಸ್‌ ಕೊಡಲು ಒಪ್ಪುವುದಿಲ್ಲ. ಕೊನೆಗೆ ಶಿವಾನಿ ಎಂಬ ಹುಡುಗಿಗೆ, ಭಾಗ್ಯಗೆ ನೋಟ್ಸ್‌ ಕೊಡಲು ಹೇಳಿ ಆಕೆಯ ಪಕ್ಕದಲ್ಲೇ ಕೂರುವಂತೆ ಸೂಚಿಸುತ್ತಾರೆ.

ಆ್ಯಂಕರ್ ಅನುಶ್ರೀಗೆ ಇಷ್ಟು ದಿನ ಮದುವೆ ಯಾವಾಗ ಅಂತಿದ್ದ ಫ್ಯಾನ್ಸ್​ , ಈಗ ಸಿನಿಮಾ ಯಾವಾಗ ಕೇಳ್ತಿದ್ದಾರೆ!

ಟೀಚರ್‌ ಅಟೆಂಡೆನ್ಸ್‌ (Attendance) ತೆಗೆದುಕೊಳ್ಳುವಾಗ ತನ್ವಿ ಇನ್ನೂ ಶಾಲೆಗೆ ಬರದಿದ್ದನ್ನು ತಿಳಿದು ಭಾಗ್ಯ ಕಂಗಾಲಾಗುತ್ತಾಳೆ. ಈ ಹುಡುಗಿ ಕಳೆದ ಕೆಲವು ದಿನಗಳಿಂದ ಸ್ಕೂಲ್‌ಗೆ ಬಂದಿಲ್ಲ ಎಂದು ತಿಳಿದು ಭಾಗ್ಯ ಗಾಬರಿ ಆಗುತ್ತಾಳೆ. ಆಕೆ ನನ್ನ ಮಗಳು ಎಂದು ಹೇಳದ ಭಾಗ್ಯ, ಆಕೆ ಸ್ಕೂಲ್‌ಗೆ ಬಂದಿದ್ದಾಳೆ ನನಗೆ ಗೊತ್ತು, ಅವಳನ್ನು ಹುಡುಕಿ ಬರುತ್ತೇನೆ ಎಂದು ಹೇಳಿ ಅಲ್ಲಿಂದ ಹೊರ ಓಡಿ ಬರುತ್ತಾಳೆ, ಆದರೆ ಎಲ್ಲಿ ಹುಡುಕಿದರೂ, ಯಾರ ಬಳಿ ಕೇಳಿದರೂ ತನ್ವಿ ಬಗ್ಗೆ ಗೊತ್ತಿಲ್ಲ ಎಂದು ಹೇಳುತ್ತಾರೆ. ತಾಂಡವ್‌ಗೆ ಕರೆ ಮಾಡಿದರೂ ಆತ ಫೋನ್‌ ರಿಸೀವ್‌ ಮಾಡುವುದಿಲ್ಲ.

ಪಾರ್ಕ್‌ನಲ್ಲಿ ಕೆಟ್ಟ ಮನಸ್ಥಿತಿಯ ಮಕ್ಕಳ ಜೊತೆ ಕೂತು ತನ್ವಿ ತಾಯಿ ಭಾಗ್ಯಾಗೆ ಬೈಯ್ಯುತ್ತಿದ್ದಾಳೆ. ನನ್ನ ತಂದೆ ಪ್ಯಾಕೆಟ್‌ ಮನಿ (Pocket Money) ನೀಡುತ್ತಾರೆ, ಅವರು ದೊಡ್ಡ ಆಫೀಸರ್‌, ಅಮ್ಮ ಎಂದರೆ ನನಗೆ ಇಷ್ಟವಿಲ್ಲ ಎಂದು ಸ್ನೇಹಿತರ ಬಳಿ ಮಗಳು ಹೇಳುವುದನ್ನು ನೋಡಿ ಭಾಗ್ಯ ಗಾಬರಿ ಆಗುತ್ತಾಳೆ, ಅಲ್ಲದೆ ಆ ಸ್ನೇಹಿತರು ತನ್ವಿಯ ದುಡ್ಡಿಗಾಗಿ ಆಸೆ ಪಡುವವರು ಎಂದು ತಿಳಿದು ಅವಳಿಗೆ ಬೇಸರವಾಗುತ್ತದೆ. ತನ್ನಮ್ಮ ದಡ್ಡಿ, ಅವಳು ಪಾಸಾಗೋದಿಲ್ಲ ಅನ್ನೋ ಮಾತನ್ನೆಲ್ಲ ತನ್ನ ಅಮ್ಮನ ಎದುರೇ ತನ್ವಿ ಹೇಳುತ್ತಿರುವಾಗ ಭಾಗ್ಯಾಗೆ ಅವಧೂತರೊಬ್ಬರು ಹೇಳಿದ ಮಾತು ನೆನಪಾಗುತ್ತೆ. ಅವರು, ತಾಯಿ ಅಂದರೆ ಸೌಮ್ಯ ಸರಸ್ವತಿ ಅಷ್ಟೇ ಅಲ್ಲ, ಅವಳು ದುರ್ಗಿಯೂ ಆಗಬೇಕು ಅನ್ನೋ ಮಾತು ಹೇಳಿದ್ದಾರೆ. ಇಲ್ಲೀವರೆಗೆ ಸಿಕ್ಕಾಪಟ್ಟೆ ಪಾಪದ ಸೌಮ್ಯ ಮನಸ್ಸಿನವಳಾಗಿದ್ದ ಭಾಗ್ಯ ಇನ್ನುಮೇಲೆ ದುರ್ಗೆ ಅವತಾರ ತಾಳ್ತಾಳ ಅಂತ ನೋಡ್ಬೇಕು. ಭಾಗ್ಯ ಪಾತ್ರದಲ್ಲಿ ಸುಷ್ಮಾ ನಟನೆಯನ್ನು ಜನ ಮನಸಾರೆ ಮೆಚ್ಚಿಕೊಂಡಿದ್ದಾರೆ.

ಪವರ್ ಆಫ್ ಅಟರ್ನಿ ಅಂದ್ರೇನು ಅಂತ ಗೊತ್ತಾ? ಲಕ್ಷಣ ಸೀರಿಯಲ್ ನಿರ್ದೇಶಕರಿಗೆ ವೀಕ್ಷಕರ ಕ್ಲಾಸ್!