ಮುಂಬೈ[ಮಾ.05]: 33 ವರ್ಷಗಳ ಹಿಂದೆ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಪ್ರಸಿದ್ಧ ರಾಮಾಯಣ ಧಾರಾವಾಹಿಯ ಕಲಾವಿದರು ಕಪಿಲ್‌ ಶರ್ಮಾ ನಡೆಸಿಕೊಡುವ ಕಾಮಿಡಿ ಶೋನಲ್ಲಿ ಭಾಗವಹಿಸಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಧಾರಾವಾಹಿಯಲ್ಲಿ ರಾಮನ ಪಾತ್ರಧಾರಿ ಅರುಣ್‌ ಗೋವಿಲ್‌, ಸೀತಾ ಪಾತ್ರಧಾರಿ ದೀಪಿಕಾ ಹಾಗೂ ಲಕ್ಷ್ಮಣ ಪಾತ್ರ ನಿಭಾಯಿಸಿದ್ದ ಸುನಿಲ್‌, ಕಪಿಲ್‌ಶರ್ಮಾ ಶೋನಲ್ಲಿ ಭಾಗವಹಿಸಿದ್ದಾರೆ. ಕಾರ್ಯಕ್ರಮದ ಪ್ರೊಮೋ ಹಾಗೂ ಈ ಮೂರು ಪಾತ್ರಧಾರಿಗಳ ಅಂದಿನ ಹಾಗೂ ಇಂದಿನ ಫೋಟೋವನ್ನೂ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದೆ.

ಇದು ವೀಕ್ಷಕರ ಮೆಚ್ಚುಗೆ ಗಳಿಸಿದೆ. ಈಗಾಗಲೇ ಸಂಚಿಕೆಯ ಚಿತ್ರೀಕರಣ ಮುಗಿದಿದ್ದು, ಈ ವಾರಾಂತ್ಯದಲ್ಲಿ ಪ್ರಸಾರವಾಗಲಿದೆ.