ಸಾಮಾಜಿಕ ಜಾಲತಾಣದಲ್ಲಿ ಯಾರಿಗೆ ಯಾವ ವೀಡಿಯೋ ಇಷ್ಟವಾಗುತ್ತದೆಯೋ ಗೊತ್ತಿಲ್ಲ. ಆದರೆ, ಇಲ್ಲೊಬ್ಬ ನೆಟ್ಟಿಗ ವಕೀಲ ಜಗದೀಶ್ ಅವರಿಗೆ ಸಂಬಂಧಿಸಿದ ವಿಡಿಯೋಗೆ 2025ರಲ್ಲಿ ಮೊದಲ ಬಾರಿಗೆ ಅತ್ಯಂತ ಖುಷಿ ಕೊಟ್ಟ ವಿಡಿಯೋ ಎಂಬ ಕ್ರೆಡಿಟ್ ಕೊಟ್ಟಿದ್ದಾನೆ.
ಬೆಂಗಳೂರು (ಜ.24): ಸಾಮಾಜಿಕ ಜಾಲತಾಣದಲ್ಲಿ ಯಾರಾರಿಗೆ ಯಾವ ವೈರಲ್ ವಿಡಿಯೋಗಳು ಇಷ್ಟವಾಗುತ್ತವೆಯೋ ಗೊತ್ತಿಲ್ಲ. ಆದರೆ, ಇಲ್ಲೊಬ್ಬ ನೆಟ್ಟಿಗ ವೈರಲ್ ವಿಡಿಯೋವೊಂದಕ್ಕೆ 2025ರ ವರ್ಷಾರಂಭದಲ್ಲಿಯೇ ಮನಸ್ಸಿಗೆ ಅತ್ಯಂತ ಖುಷಿ ಕೊಟ್ಟ ವಿಡಿಯೋ ಎಂದು ಕಾಮೆಂಟ್ ಮಾಡಿದ್ದಾರೆ.
2020ರ ನಂತರ ಎಲ್ಲರ ಕೈಗಳಿಗೂ ಮೊಬೈಲ್ ಲಭ್ಯವಾಗಿದೆ. ಇದೀಗ ಎಲ್ಲರೂ ಸಾಮಾಜಿಕ ಜಾಲತಾಣದ ಒಂದಲ್ಲಾ ಒಂದು ಖಾತೆಯನ್ನು ಹೊಂದಿದ್ದಾರೆ. ಪ್ರತಿದಿನ ಒಂದಲ್ಲಾ ಒಂದು ವಿಡಿಯೋಗಳು ಭಾರೀ ವೈರಲ್ ಆಗುತ್ತವೆ. ಹೀಗಾಗಿ, ಯಾರಿಗೆ ಯಾವ ವಿಡಿಯೋಗಳು ಇಷ್ಟವಾಗುತ್ತವೆಯೋ ಗೊತ್ತಿಲ್ಲ. ಆದರೆ, ಇಲ್ಲೊಬ್ಬ ವ್ಯಕ್ತಿ ದಿ ನೇಮ್ ಈಸ್ ಮೀಡಿಯಾ ಕಿಂಗ್ ಎಂಬ ಇನ್‌ಸ್ಟಾಗ್ರಾಮ್ ಖಾತೆಯಿಂದ ಹಂಚಿಕೊಂಡಿರುವ ವಿಡಿಯೋವನ್ನು ಸುಧೀರ್ ಎನ್ನುವ ವ್ಯಕ್ತಿ ತುಂಬಾ ಇಷ್ಟಪಟ್ಟಿದ್ದಾರೆ. ಈ ವಿಡಿಯೋಗೆ ಸುಧೀರ್ ಅವರು 'ಆಹಾ 2025 ರಲ್ಲಿ ಮೊದಲ ಸಲ ಮನಸ್ಸಿಗೆ ಖುಷಿ ಕೊಟ್ಟಿರೋ ವೀಡಿಯೋ' ಎಂದು ಕಾಮೆಂಟ್ ಮಾಡಿದ್ದಾರೆ. ಇವರ ಕಾಮೆಂಟ್‌ಗೂ ಕೂಡ ತರಹೇವಾರಿ ಪ್ರತಿಕ್ರಿಯೆಗಳು ಬಂದಿವೆ.
ಅಷ್ಟಕ್ಕೂ ಇನ್‌ಸ್ಟಾಗ್ರಾಮ್‌ನಲ್ಲಿ ಇಷ್ಟವಾಗಿರುವ ವಿಡಿಯೋ ಯಾವುದೆಂದರೆ ಬಿಗ್ ಬಾಸ್ ಕನ್ನಡ ಸೀಸನ್ 11ರ ಖ್ಯಾತಿಯ ಲಾಯರ್ ಜಗದೀಶ್ ಅವರಿಗೆ ಸಂಬಂಧಿಸಿದ್ದಾಗಿದೆ. ವಕೀಲ ಜಗದೀಶ್ ಹೋಗಿ, ಬಂದಲ್ಲೆಲ್ಲಾ ಕಿರಿಕ್ ಮಾಡಿಕೊಳ್ಳದೇ ಸುಮ್ಮನಿರುವುದಿಲ್ಲ. ಅವರ ಮಾತನ್ನು ಅನುಸರಿಸಿಕೊಂಡು ಹೋದಲ್ಲಿ ಮಾತ್ರ ಅಲ್ಲಿನ ವಾತಾವರಣ ಶಾಂತವಾಗಿರುತ್ತದೆ. ಇಲ್ಲವೆಂದರೆ ಅಲ್ಲಿ ರಣಾಂಗಣವೇ ಸೃಷ್ಟಿ ಆಗಿರುತ್ತದೆ. ಅದೇ ರೀತಿ ಕೋಡಿಗೇಹಳ್ಳಿಯಲ್ಲಿ ವಕೀಲ್ ಜಗದೀಶ್ ಅವರು ಕಿರಿಕ್ ಮಾಡಿಕೊಂಡಿದ್ದು, ಕೆಲವು ವ್ಯಕ್ತಿಗಳು ಅವರ ಮೇಲೆ ಹಲ್ಲೆ ಮಾಡಿದ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದೇ ವಿಡಿಯೋಗೆ ಸುದೀರ್ ಎನ್ನುವ ವ್ಯಕ್ತಿ 2025ರ ಅತ್ಯಂತ ಖುಷಿ ಕೊಡುವ ವಿಡಿಯೋ ಎಂದು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ಡಿಬಾಸ್ ಬಾಯ್ಸ್ ನೀವೊಬ್ಬರೇ ಗಂಡ್ಸಾ? ನಾವೇನು ಬಳೆ ತೊಟ್ಟುಕೊಂಡಿದ್ದೀವಾ? ವಕೀಲ ಜಗದೀಶ್!
ಘಟನೆಯ ಹಿನ್ನೆಲೆಯೇನು?
ಬೆಂಗಳೂರಿನ ಕೋಡಿಗೇಹಳ್ಳಿಯ ವಿರೂಪಾಕ್ಷ ನಗರದಲ್ಲಿ ವಕೀಲ ಜಗದೀಶ್ ಅವರಿಗೆ ಸೇರಿದ ಒಂದು ಕಾಂಪ್ಲೆಕ್ಸ್ ಇದೆ. ಈ ರಸ್ತೆಯಲ್ಲಿ ಸ್ಥಳೀಯರು ಅಣ್ಣಮ್ಮ ದೇವಿಯನ್ನು ಕೂರಿಸಲು ಮುಂದಾಗಿ, ಪೆಂಡಾಲ್ ಹಾಕುವುದಕ್ಕೆ ಬಂದಾಗ ಜಗದೀಶ್ ಆಕ್ಷೇಪ ತೆಗೆದಿದ್ದಾರೆ. ಜೊತೆಗೆ, ಪೆಂಡಾಲ್ ತೆರವು ಮಾಡುವಂತೆ ಪೊಲೀಸ್ ಠಾಣೆಗೂ ದೂರು ನೀಡಿದ್ದಾರೆ. ಆದರೂ ಸ್ಥಳೀಯರು ಪೆಂಡಾಲ್ ತೆಗೆಯುವುದಕ್ಕೆ ಒಪ್ಪದೇ ಜಗದೀಶ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ನಂತರ, ಸುಮಾರು ನಾಲ್ಕೈದು ಜನರ ಗುಂಪಿನೊಂದಿಗೆ ಬಂದಿದ್ದವರಿಗೆ ವಕೀಲ ಜಗದೀಶ್ ಹಲ್ಲೆಗೆ ಮುಂದಾದಾಗ ಅವರು ಎಲ್ಲರೂ ಸೇರಿಕೊಂಡು ವಾಪಸ್ ಜಗದೀಶ್ ಅವರ ಮೇಲೆಯೇ ಹಲ್ಲೆ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಬಹುಪಾಲು ನೆಟ್ಟಿಗರು ಸುಖಾಸುಮ್ಮನೆ ಕಿರಿಕ್ ಮಾಡಿದರೆ ಹೀಗೆ ಆಗೋದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಸೆಕ್ಯುರಿಟಿ ಸಿಬ್ಬಂದಿಯನ್ನ ಹೊಟ್ಟೆಯಿಂದ ದೂಡಿ ಅವಾಜ್ ಹಾಕಿದ ಲಾಯರ್; ಈ ಜಗ್ಗಂದು ಯಾಕೋ ಅತಿ ಆಯಿತು ಎಂದ ನೆಟ್ಟಿಗರು
ಬಿಗ್ ಬಾಸ್ ಸೀಸನ್ 11ರ ಸ್ಪರ್ಧಿಯಾಗಿದ್ದ ವಕೀಲ ಜಗದೀಶ್ ಅವರು ಅಲ್ಲಿಯೂ ಸುಖಾಸುಮ್ಮನೇ ಕಿರಕ್ ಮಾಡಿಕೊಳ್ಳುತ್ತಿದ್ದರು. ಮಹಿಳೆಯರಿಗೆ ಅವ್ಯಾಚ್ಯವಾಗಿ ಮಾತನಾಡಿದ್ದಾರೆ ಎಂಬ ಹಿನ್ನೆಲೆಯಲ್ಲಿ ಅವರನ್ನು ಕೇವಲ 3 ವಾರದಲ್ಲಿಯೇ ಮಧ್ಯಂತರದಲ್ಲಿ ಬಿಗ್ ಬಾಸ್ ಮನೆಯಿಂದ ಹೊರಗೆ ಹಾಕಲಾಯಿತು. ಇದೇ ವೇಳೆ ವಕೀಲ ಜಗದೀಶ್ ಅವರಿಗೂ ಹಲ್ಲೆ ಮಾಡಿದ್ದಾರೆಂಬ ಕಾರಣಕ್ಕೆ ಸಹ ಸ್ಪರ್ಧಿ ರಂಜಿತ್ ಸೂರ್ಯ ಅವರನ್ನೂ ಬಿಗ್ ಬಾಸ್ ಮನೆಯಿಂದ ಹೊರಗೆ ಹಾಕಲಾಗಿತ್ತು. ಇದೀಗ ಇದೇ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಲಿರುವ ಬಾರ್ಸ್ Vs ಗರ್ಲ್ಸ್ ರಿಯಾಲಿಟಿ ಶೋನಲ್ಲಿ ವಕೀಲ್ ಜಗದೀಶ್ ಕೂಡ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದಾರೆ.

