ಸೆಕ್ಯುರಿಟಿ ಸಿಬ್ಬಂದಿಯನ್ನ ಹೊಟ್ಟೆಯಿಂದ ದೂಡಿ ಅವಾಜ್ ಹಾಕಿದ ಲಾಯರ್; ಈ ಜಗ್ಗಂದು ಯಾಕೋ ಅತಿ ಆಯಿತು ಎಂದ ನೆಟ್ಟಿಗರು
ಬಿಗ್‌ಬಾಸ್ ಖ್ಯಾತಿಯ ಲಾಯರ್ ಜಗದೀಶ್, ಬೆಂಗಳೂರಿನ ಪಾಸ್‌ಪೋರ್ಟ್ ಕಚೇರಿಯ ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಬೆಂಗಳೂರು: ಬಿಗ್‌ಬಾಸ್ ಖ್ಯಾತಿಯ ಲಾಯರ್ ಜಗದೀಶ್ ಅವಾಜ್ ಹಾಕಿದ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಬೆಂಗಳೂರಿನ ಪಾಸ್‌ಪೋರ್ಟ್ ಕಚೇರಿ ಸಿಬ್ಬಂದಿ ಮೇಲೆ ಲಾಯರ್ ಜಗದೀಶ್ ಹಲ್ಲೆಗೆ ಮುಂದಾಗಿರುವ ದೃಶ್ಯಗಳು ಸಾರ್ವಜನಿಕರ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು, ಈ ಜಗ್ಗಂದು ಯಾಕೋ ಅತಿ ಆಯಿತು ಕಂಡ ಕಂಡಲ್ಲಿ ರೌಡಿಸಂ ಮಾಡ್ತಾ ಇದ್ದಾನೆ. ಮೈ ಮರೆತು ದುರಂಕಾರದಲ್ಲಿ ಮೆರೆಯುತ್ತಿದ್ದಾನೆ ಎಂದು ಕಮೆಂಟ್ ಮಾಡಿದ್ದಾರೆ. ಒಬ್ಬ ವ್ಯಕ್ತಿಯಮೇಲೆ ಯಾವುದೇ ಕಾರಣವಿಲ್ಲದೆ ಅದು ಸಾರ್ವಜನಿಕವಾಗಿ ಹಲ್ಲೆ ಮತ್ತು ಮಾನನಷ್ಟ ಮಾಡ್ತಿದ್ದಾನೆ ಅಂತ ಆ ಜಗ್ಗನ ಮೇಲೆ ಕೇಸ್ ಮಾಡಿ. ಅದಕ್ಕೆ ಸಾಕ್ಷಿಯಾಗಿ ವಿಡಿಯೋ ಇದೆ ಎಂದು ನೆಟ್ಟಿಗರೊಬ್ಬರು ಆಗ್ರಹಿಸಿದ್ದಾರೆ.
ವೈರಲ್ ಆಗಿರುವ ಲಾಯರ್ ಜಗದೀಶ್ ವಿಡಿಯೋವನ್ನು ನಿರ್ಮಲಾ ಶೆಟ್ಟಿ (Nirmala Shetty, nimmu___doll) ಎಂಬ ಹೆಸರಿನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿಕೊಳ್ಳಲಾಗಿದೆ. ಜನವರಿ 21ರಂದು ಹಂಚಿಕೊಳ್ಳಲಾದ ಈ ವಿಡಿಯೋಗೆ ಇದುವರೆಗೂ 2 ಸಾವಿರಕ್ಕೂ ಅಧಿಕ ಲೈಕ್ಸ್ ಬಂದಿವೆ. ವಿಡಿಯೋ ನೋಡಿದ ನೆಟ್ಟಿಗರು ಲಾಯರ್ ಜಗದೀಶ್ ಅವರ ಅತಿರೇಕದ ವರ್ತನೆ ಬಗ್ಗೆ ತಮ್ಮ ಅಭಿಪ್ರಾಯವನ್ನು ಕಮೆಮಟ್ ಬಾಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ.
ವೈರಲ್ ವಿಡಿಯೋದಲ್ಲಿ ಏನಿದೆ?
ಪಾಸ್‌ಪೋರ್ಟ್ ಕಚೇರಿ ಮುಂಭಾಗ ಗೇಟ್ ಬಳಿ ಭದ್ರತಾ ಸಿಬ್ಬಂದಿ ಮತ್ತು ಲಾಯರ್ ಜಗದೀಶ್ ನಡುವೆ ಮಾತಿನ ಚಕಮಕಿ ನಡೆಯುತ್ತಿರೋದನ್ನು ಗಮನಿಸಬಹುದು. ಭದ್ರತಾ ಸಿಬ್ಬಂದಿ ಕಾರ್ ತೆಗೆದುಕೊಂಡು ಮತ್ತೊಂದು ಗೇಟ್‌ಗೆ ಬನ್ನಿ ಎಂದು ಹೇಳುತ್ತಾರೆ. ಇದಕ್ಕೆ ಕೋಪಗೊಂಡ ಜಗದೀಶ್, ಏನ್ ಹೇಳಿದ್ದೀಯಾ ನೀನು? ಏಯ್ ಯಾರೋ ನೀನು? ಐಡಿ ಕಾರ್ಡ್ ಎಲ್ಲಿ ನಿಂದು? ಮೊದಲು ಐಡಿ ಕಾರ್ಡ್ ಹಾಕಿ ಮಾತನಾಡು. Who are You? ಯಾರೋ ನೀನು? ಏಯ್ ನಾನು ಸಿಟಿಜನ್ ಎಂದು ಹೇಳಿ ಹೊಟ್ಟೆಯಿಂದ ಭದ್ರತಾ ಸಿಬ್ಬಂದಿಯನ್ನು ತಮ್ಮ ಹೊಟ್ಟೆಯಿಂದ ದೂಡುತ್ತಾ ಜಗದೀಶ್ ಮುಂದೆ ಬರುತ್ತಾರೆ.
ಇದನ್ನೂ ಓದಿ: ಜಗದೀಶ್ ಕೊಟ್ಟ ಕಿರುಕುಳ ಮರೆಯಲ್ಲ; ರೋಲ್ ಕಾಲ್ ಲಾಯರ್ ಎಂದಿದ್ದಕ್ಕೆ ಕ್ಲಾರಿಟಿ ಕೊಟ್ಟ ಚೈತ್ರಾ ಕುಂದಾಪುರ
ನಾನು ಸಿಟಿಜನ್, ನನಗೆ ಇಲ್ಲಿ ಅಪಾಯಿಂಟ್‌ಮೆಂಟ್ ಇದೆ. ನೀನು ಯಾವನೋ ಹೇಳೋದಕ್ಕೆ ಎಂದು ಭದ್ರತಾ ಸಿಬ್ಬಂದಿಗೆ ಸಾರ್ವಜನಿಕವಾಗಿಯೇ ಲಾಯರ್ ಜಗದೀಶ್ ಬೆದರಿಕೆ ಹಾಕಿದ್ದಾರೆ. ಕಾರ್ ಪಾರ್ಕ್ ಮಾಡುವ ವಿಷಯಕ್ಕಾಗಿ ಭದ್ರತಾ ಸಿಬ್ಬಂದಿಯೊಂದಿಗೆ ಲಾಯರ್ ಜಗದೀಶ್ ದರ್ಪ ಮರೆದಿದ್ದಾರೆ ಎಂದು ಶೀರ್ಷಿಕೆಯಡಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.
ಬಿಗ್‌ಬಾಸ್ ಕನ್ನಡ ಸೀಸನ್ 11 ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದ ಲಾಯರ್ ಜಗದೀಶ್ ಅಲ್ಲಿಯೂ ಕಿರಿಕ್ ಮಾಡಿಕೊಂಡು ಹೊರ ಬಂದಿದ್ದರು. ಬಿಗ್‌ಬಾಸ್ ಶೋ ಆರಂಭವಾದ ಮೊದಲ ದಿನದಿಂದಲೂ ಜಗದೀಶ್ ಕಿರಿಕ್ ಮಾಡಿಕೊಳ್ಳುತ್ತಲೇ ಸದ್ದು ಮಾಡಿದ್ದರು. ಮತ್ತೋರ್ವ ಸ್ಪರ್ಧಿ ರಂಜಿತ್ ಜೊತೆ ಜಗಳ ಮಾಡಿಕೊಂಡಿದ್ದರಿಂದ ಇಬ್ಬರು ಬಿಗ್‌ಬಾಸ್ ಮನೆಯಿಂದ ಹೊರ ಬಂದಿದ್ದರು.
ಇದನ್ನೂ ಓದಿ: ಮದುವೆ ಆದಮೇಲೆ ಅದಾಗಲೇ ಇಲ್ಲ ಒಂದು ವರ್ಷ ಎಂದ ಲಾಯರ್ ಜಗದೀಶ್! ಮತ್ತೇನಾಯ್ತಂತೆ ಗೊತ್ತಾ?