ತುಮಕೂರು(ಅ.30): ರಾಜ್ಯದಲ್ಲಿ ಉತ್ತಮ ಮಳೆಯಾಗಿದ್ದು, ಶಾಸಕರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ತುಂಬಿದ ಕೆರೆಗಳಿಗೆ ಬಾಗಿನ ಅರ್ಪಿಸುವ ಕಾರ್ಯಕ್ರಮಗಳು ನಡೆಯುತ್ತಲೇ ಇವೆ. ತುಮಕೂರಿನಲ್ಲಿ ಶಾಸಕರೊಬ್ಬರು ಭಿನ್ನವಾಗಿ ಬಾಗಿನ ಅರ್ಪಿಸುವ ಮೂಲಕ ಸುದ್ದಿಯಲ್ಲಿದ್ದಾರೆ. ಬಾಗಿನ ಅರ್ಪಿಸುವುದಕ್ಕೂ ಸ್ಪೆಷಲ್ ಆಗಿ ಬಂದ ಶಾಸಕರು ತಮ್ಮದೇ ಸ್ಟೈಲ್‌ ನಲ್ಲಿ ಬಂದು ಬಾಗಿನ ಅರ್ಪಿಸಿದ್ದಾರೆ. ಬಾಗಿನ ಅರ್ಪಿಸುವುದಕ್ಕೆ ಶಾಸಕರು ಬಂದ ವಾಹನವೇ ಸುದ್ದಿ ಮಾಡಿದೆ.

ಕಾರಿನಲ್ಲೋ, ನಡೆದುಕೊಂಡೋ ಬರದೆ ಕುದುರೆ ಏರಿಕೊಂಡು ಬಂದ ತುರುವೇಕೆರೆ ಶಾಸಕರು ಕೆರೆಗಳಿಗೆ ಬಾಗಿನ ಅರ್ಪಿಸಿದ್ದಾರೆ. ತುಂಬಿದ ಕೆರೆಗೆ ಬಾಗಿನ ಅರ್ಪಿಸುವುದಕ್ಕೆ ಶಾಸಕರೊಬ್ಬರು ಕುದುರೆ ಏರಿ ಬಂದ ಅಪರೂಪದ ಘಟನೆ ತುಮಕೂರು ಜಿಲ್ಲೆಯ ತುರುವೇಕೆರೆಯಲ್ಲಿ ನಡೆದಿದೆ. ಸ್ಥಳೀಯ ಬಿಜೆಪಿ ಶಾಸಕ ಮಸಾಲ ಜಯರಾಮ್‌ ಕುದುರೆ ಏರಿ ಬಂದವರು.

ಚಳ್ಳಕೆರೆ: ಚೌಳೂರು ಬ್ಯಾರೇಜ್‌ಗೆ ಶಾಸಕ ರಘುಮೂರ್ತಿ ಬಾಗಿನ

ತುರುವೇಕೆರೆ ತಾಲೂಕಿನ ಸಿ.ಎಸ್‌.ಪುರ ಹೋಬಳಿಯ ಚೆಂಗಾವಿ ಕೆರೆ ಇತ್ತೀಚೆಗೆ ಸುರಿದ ಮಳೆಗೆ ಪೂರ್ಣಪ್ರಮಾಣದಲ್ಲಿ ತುಂಬಿ ಕೋಡಿ ಬಿದ್ದಿತ್ತು. ಈ ಹಿನ್ನೆಲೆಯಲ್ಲಿ ಬಾಗಿನ ಮಂಗಳವಾರ ಬಾಗಿನ ಅರ್ಪಿಸಲು ಶಾಸಕ ಮಸಾಲ ಜಯರಾಮ. ಕುದುರೆಯಲ್ಲಿ ಬಂದರು. ಶಾಸಕರ ಈ ಹೊಸ ಗೆಟಪ್‌ ನೋಡಿದ ಗ್ರಾಮಸ್ಥರು ಹಾಗೂ ಕಾರ್ಯಕರ್ತರು ಆಶ್ಚರ್ಯಕ್ಕೊಳಗಾದರು.

ಬಸವಕಲ್ಯಾಣ: ಪರತಾಪೂರ ಗ್ರಾಪಂನ 19 ಸದಸ್ಯರ ಸದಸ್ಯತ್ವ ರದ್ದು