ಬಸವಕಲ್ಯಾಣ: ಪರತಾಪೂರ ಗ್ರಾಪಂನ 19 ಸದಸ್ಯರ ಸದಸ್ಯತ್ವ ರದ್ದು

ಗ್ರಾಪಂನಲ್ಲಿ ಅವ್ಯವಹಾರ ನಡೆಸಿದ ಆರೋಪ ಸಾಬೀತು| ಪರತಾಪೂರ ಗ್ರಾಪಂನ 19 ಸದಸ್ಯರ ಸದಸ್ಯತ್ವ ರದ್ದು| ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆಯ ಉಪನಿರ್ದೇಶಕ ಡಿ.ಜಿ. ನಾರಾಯಣ ಆದೇಶ|ದೂರಿನ ಹಿನ್ನೆಲೆಯಲಿ ತಾಪಂ ಲೆಕ್ಕಾಧಿಕಾರಿ ನೇತೃತ್ವದಲ್ಲಿ ತನಿಖೆ ನಡೆಸಲಾಗಿತ್ತು| ಈ ತನಿಖೆ ವೇಳೆ ಆರೋಪಿಗಳ ಮೇಲಿನ ಆರೋಪ ಸಾಬೀತಾಗಿದೆ ಎಂದು ವರದಿಯಲ್ಲಿ ಉಲ್ಲೇಖ| 

Cancellation of Membership in Paratapur Gram Panchayt

ಬಸವಕಲ್ಯಾಣ[ಅ.30]:  ಗ್ರಾಪಂನಲ್ಲಿ ಅವ್ಯವಹಾರ ನಡೆಸಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ತಾಲೂಕಿನ ಪರತಾಪೂರ ಗ್ರಾಪಂನ 21 ಜನ ಸದಸ್ಯರ ಪೈಕಿ 19 ಸದಸ್ಯರ ಸದಸ್ಯತ್ವವನ್ನು ರದ್ದುಗೊಳಿಸಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆಯ ಉಪನಿರ್ದೇಶಕ ಡಿ.ಜಿ. ನಾರಾಯಣ ಅವರು ಆದೇಶ ಹೊರಡಿಸಿದ್ದಾರೆ. 

ಗ್ರಾಪಂ ಸದಸ್ಯರಾದ ಧನರಾಜ ಮುಗಳೆ ಮತ್ತು ಗ್ರಾಮದ ಮುಖಂಡ ಮಕ್ಬೂಲ್ ಎನ್ನುವರು ಪಂಚಾಯತ್‌ನ ಸದಸ್ಯರು ಹಣ ದುರುಪಯೋಗದಲ್ಲಿ ತೊಡಗಿದ್ದಾರೆ ಎಂದು ನೀಡಿದ ದೂರಿನ ಹಿನ್ನೆಲೆಯಲ್ಲಿ ಗ್ರಾಪಂ ಉಪಾಧ್ಯಕ್ಷರು ಸೇರಿದಂತೆ 19 ಜನ ಸದಸ್ಯರ ಸದಸ್ಯತ್ವ ರದ್ದು ಗೊಳಿಸಲಾಗಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ದೂರಿನ ಹಿನ್ನೆಲೆಯಲಿ ತಾಪಂ ಲೆಕ್ಕಾಧಿಕಾರಿ ನೇತೃತ್ವದಲ್ಲಿ ತನಿಖೆ ನಡೆಸಲಾಗಿತ್ತು. ಈ ತನಿಖೆ ವೇಳೆ ಆರೋಪಿಗಳ ಮೇಲಿನ ಆರೋಪ ಸಾಬೀತಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.  ಗ್ರಾಪಂನ 13 ನೇ ಮತ್ತು 14 ನೇ ಹಣಕಾಸು ಯೋಜನೆಯಡಿ,ನೀರು ಸರಬರಾಜು ಯೋಜನೆಯಡಿ ಮತ್ತು ಹಣಕಾಸಿನ ವ್ಯವಹಾರದಲ್ಲಿ ಸದಸ್ಯರು ತಮ್ಮ ಸಂಬಂಧಿಕರ ಹೆಸರಿನಲ್ಲಿ ಚೆಕ್ ಪಡೆದು ದುರುಪಯೋಗ ಮಾಡಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ ರಾಜ್ ಅಧಿನಿಯಮ 1993 ರ ಪ್ರಕಾರ 43 (ಎ) ಮತ್ತು 48(4) ಮತ್ತು 48(5) ರಡಿಯಲ್ಲಿ ಸದಸ್ಯರ ಸದಸ್ಯತ್ವ ರದ್ದುಗೊಳಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

Latest Videos
Follow Us:
Download App:
  • android
  • ios