ತುಮಕೂರು(ಅ.26): ಬೈಕ್ ಸವಾರರನ್ನೆಲ್ಲಾ ನಿಲ್ಲಿಸಿ ಕುಡಿದು ಬಂದಿದ್ದೀಯಾ ಎನ್ನುತ್ತಿದ್ದ ಪೊಲೀಸ್‌ ಬಾಯಿಗೆ ತುಮಕೂರಿನ ಜನ ಅಲ್ಕೋ ಮೀಟರ್ ಇಟ್ಟಿದ್ದಾರೆ. ಸಾರ್ವಜನಿಕರಿಗೆ ಸುಖಾಸುಮ್ಮನೆ ಕಿರಿಕ್ ಮಾಡುತಿದ್ದ ಪೊಲೀಸಪ್ಪನಿಗೆ ಆಲ್ಕೋ ಮೀಟರ್ ಊದುವ ಶಿಕ್ಷೆಯನ್ನು ಕೊಟ್ಟಿದ್ದಾರೆ. ತುಮಕೂರು ವಿಶ್ವವಿದ್ಯಾಲಯದ ಗೇಟ್ ಬಳಿ ಘಟನೆ ನಡೆದಿದೆ

ಮಟಮಟ ಮಧ್ಯಾಹ್ನವೇ ಬೈಕ್ ಸವಾರರನ್ನು ಅಡ್ಡಗಟ್ಟಿ ಏನ್, ಎಷ್ಟು ಕುಡಿದಿದ್ಯಾ ಎಂದು ಕಿರಿಕ್ ಮಾಡುತಿದ್ದ ಎಎಸ್ಐಗೆ ತೀವ್ರ ಮುಖಭಂಗವಾಗಿದೆ. ತುಮಕೂರು ನಗರದ ಸಂಚಾರಿ ಪೊಲೀಸ್ ಠಾಣೆ ಎ.ಎಸ್.ಐ ಕಾಂತರಾಜುಗೆ ಜನ ಆಲ್ಕೋ ಮೀಟರ್ ಪರೀಕ್ಷೆ ನಡೆಸಿದ್ದಾರೆ. ಸ್ವತಃ ಎಎಸ್ ಗೆ ಅಲ್ಕೋ ಮೀಟರ್ ಪರೀಕ್ಷೆ ಮಾಡಿಸಿದ ಸಾರ್ವಜನಿಕರು ಊದುವಂತೆ ಹೇಳಿದ್ದಾರೆ.

ನಡೆದಿದ್ದೇನು..?

ಚಿನಕವಜ್ರ ಗ್ರಾಮದ ಲೋಕೇಶ್ ಎನ್ನುವವರು ಬೈಕ್ನಲ್ಲಿ ಬರುತ್ತಿದ್ದ ವೇಳೆ ಎ.ಎಸ್.ಐ ಕಾಂತರಾಜು ತಡೆದಿದ್ದಾರೆ. ಇಷ್ಟೇ ಅಲ್ಲದೆ, ಎಣ್ಣೆ ಕುಡಿದು ಗಾಡಿ ಓಡಿಸ್ತಿಯಾ...ಕೇಸ್ ಹಾಕ್ತಿನಿ ಎಂದು ಕಿರಿಕ್ ಮಾಡಿದ್ದಾರೆ. ಪೊಲೀಸ್ ವರ್ತನೆಯಿಂದ ರೋಸಿ ಹೋದ ಬೈಕ್ ಸವಾರ ನಾನು ಕುಡಿದಿಲ್ಲ, ನೀವು ಕುಡಿದಿರಬೇಕು ಎಂದು ಮರು ಉತ್ತರ ನೀಡಿದ್ದಾರೆ.ಹೌದು. ಏನಿವಾಗ..? ನಾನು 10 ಬಾಟಲ್ ಕುಡಿದಿದ್ದಿನಿ ಎಂದು ಹೇಳಿದ ಸಂಚಾರಿ ಪೊಲೀಸ್ ಬಾಯಿಗೆ ಜನ ಅಲ್ಕೋ ಮೀಟರ್ ಇಟ್ಟು ಊದಿಸಿದ್ದಾರೆ.

ಹೆಲ್ಮೆಟ್‌ ಧರಿಸಿ ದೆಹಲಿಗರ ಗಮನ ಸೆಳೆದ ಶ್ವಾನ!...

ಹೌದು ನಾನು ಕುಡಿದಿದ್ದೀನಿ, ಏನ್ ಮಾಡ್ಕೋತಿಯಾ ಎಂದು‌ ದರ್ಪ ತೋರಿದ ಎಎಸ್ಐ ಕಾಂತರಾಜು ಅವರಿಗೆ ಆಲ್ಕೋಹಾಲ್ ಪರೀಕ್ಷೆ ಮಾಡಿಸುವಂತೆ ಒತ್ತಾಯಿಸಿದ್ದಾರೆ. ಸಾರ್ವಜನಿಕರ ಒತ್ತಾಯದಂತೆ ಎಎಸ್ಐ ಕಾಂತರಾಜುಗೆ ನಡುರಸ್ತೆಯಲ್ಲಿ ಆಲ್ಕೋ ಹಾಲ್ ಪರೀಕ್ಷೆ ನಡೆದಿದೆ. ಆಲ್ಕೋ ಮೀಟರ್ ಸರಿಯಾಗಿ ಊದದೇ ಇದ್ದಾಗ ಮತ್ತೆ ಸಾರ್ವಜನಿಕರಿಂದ ತರಾಟೆಗೊಳಗಾಗಿದ್ದಾರೆ. ಪೊಲೀಸಪ್ಪ ಎಣ್ಣೆ ಕುಡಿದಿಲ್ಲ ಎಂದು ಸಾಬೀತಾದಾಗ ಕಾಂತರಾಜು ಅವರನ್ನು ಜನ ಕಳುಹಿಸಿಕೊಟ್ಟಿದ್ದಾರೆ.

ಸ್ಮಾರ್ಟ್‌ಸಿಟಿ: ಎಷ್ಟನೇ ಸ್ಥಾನದಲ್ಲಿದೆ ತುಮಕೂರು..?