ಇತ್ತೀಚಿನ ದಿನಗಳಲ್ಲಿ ಭಾರೀ ಟ್ರಾಫಿಕ್ ದಂಡ ಬೀಳುತ್ತಿರುವ ಕಾರಣ ನಿಯಮ ಉಲ್ಲಂಘನೆ ಪ್ರಮಾಣ ಕೊಂಚ ಕಮ್ಮಿಯಾಗಿದೆ. ಇದೀಗ ದಿಲ್ಲಿಯಲ್ಲಿ ನಾಯಯೊಂದು ಹೆಲ್ಮೆಟ್ ಧರಿಸಿರುವುದು ವೈರಲ್ ಆಗಿದೆ. 

ದೆಹಲಿ [ಅ.24]: ನೂತನ ಮೋಟಾರ್‌ ವಾಹನ ಕಾಯ್ದೆಯ ಅಡಿ ಭಾರೀ ದಂಡ ವಿಧಿಸಲಾಗುತ್ತಿದೆ. ದಂಡದ ಭಯದಿಂದ ಜನರು ರಸ್ತೆ ನಿಯಮಗಳನ್ನು ಪಾಲಿಸುತ್ತಿದ್ದಾರೆ. 

ಆದರೆ, ದೆಹಲಿಯಲ್ಲಿ ಶ್ವಾನವೊಂದು ಹೆಲ್ಮೆಟ್‌ ಧರಿಸಿದ್ದು, ಭಾರೀ ಸುದ್ದಿಯಾಗಿದೆ. ಹೆಲ್ಮೆಟ್‌ ಧರಿಸಿ ಸ್ಕೂಟರ್‌ನ ಹಿಂಭಾಗದಲ್ಲಿ ಕುಳಿತ ಶ್ವಾನದ ಚಿತ್ರವನ್ನು ಪ್ರೇಮಾ ಸಿಂಗ್‌ ಬಿಂದ್ರಾ ಎನ್ನುವವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ಭಾರೀ ವೈರಲ್‌ ಆಗಿದೆ.

ಪುದುಚೇರಿ ಸಿಎಂ, ಗೌರ್ನರ್‌ ನಡುವೆ ಹೆಲ್ಮೆಟ್‌ ಜಟಾಪಟಿ...

ಇತ್ತೀಚೆಗೆ ಹಸುವೊಂದು ಟ್ರಾಫಿಕ್ ಸಿಗ್ನಲ್ ನಲ್ಲಿ ನಿಂತು ವಾಹನಗಳು ದಾಟುವವರೆಗೂ ಕಾದಿದ್ದು ಸುದ್ದಿಯಾಗಿತ್ತು. ಇದೀಗ ಶ್ವಾನದ ಸವಾರಿ ಸುದ್ದಿಯಾಗಿದೆ.