Asianet Suvarna News Asianet Suvarna News

ನಿರ್ಜನ ದ್ವೀಪದಲ್ಲಿ ಒಬ್ಬಂಟಿ ಈ ಹುಡುಗಿ, ಊಟಕ್ಕೆ, ಇಂಟರ್ನೆಟ್ ಏನು ಮಾಡ್ತಾರೆ?

ಕೆಲವರ ಜೀವನ ಶೈಲಿ ಭಿನ್ನವಾಗಿರುತ್ತದೆ. ಎಲ್ಲವನ್ನು, ಎಲ್ಲರನ್ನು ಬಿಟ್ಟು ಒಂಟಿಯಾಗಿ ವಾಸಿಸುತ್ತಾರೆ. ಅವರಿಗೆ ಯಾರ ಭಯವೂ ಇರೋದಿಲ್ಲ. ತಮ್ಮಿಷ್ಟದಂತೆ ಜೀವನ ಮಾಡುವ ಜನರಲ್ಲಿ ಈ ಹುಡುಗಿ ಕೂಡ ಒಬ್ಬಳು. ದ್ವೀಪದಲ್ಲಿ ಏಕಾಂಗಿಯಾಗಿರುವ ಈಕೆ ಗಮನ ಸೆಳೆದಿದ್ದಾಳೆ. 
 

Girl Lives On A Deserted Island Told How Food Is Arranged  roo
Author
First Published Jan 9, 2024, 3:18 PM IST | Last Updated Jan 9, 2024, 3:18 PM IST

ಮನುಷ್ಯ ಸಂಘ ಜೀವಿ. ಆತ ತನ್ನ ಸುತ್ತ ಮುತ್ತ ನೆರೆಹೊರೆಯವರು ಇರಬೇಕೆಂದು ಬಯಸುತ್ತಾನೆ. ಸುತ್ತ ಜನರಿದ್ದರೆ ತಾನು ಸುರಕ್ಷಿತವಾಗಿರುತ್ತೇನೆ ಎನ್ನುವ ಧೈರ್ಯ ಮನುಷ್ಯನಿಗೆ ಇರುತ್ತದೆ. ಒಂಟಿಯಾಗಿ ವಾಸ ಮಾಡಲು ಬಯಸುವವರು ಕೂಡ ತಮ್ಮ ವಾಸಸ್ಥಳ ಎಲ್ಲ ರೀತಿಯಿಂದಲೂ ಸೇಫ್ ಆಗಿದ್ಯಾ, ಅಲ್ಲಿ ಎಲ್ಲ ರೀತಿಯ ಸೌಲಭ್ಯಗಳು ಇದೆಯಾ ಎನ್ನುವುದನ್ನು ಮೊದಲು ನೋಡಿಕೊಳ್ಳುತ್ತಾರೆ. ಯಾವುದೇ ಸೌಲಭ್ಯಗಳಿಲ್ಲದ, ಜನಸಂಚಾರವಿಲ್ಲದ ಪ್ರದೇಶದಲ್ಲಿ ವಾಸ ಮಾಡಲು ಬಯಸುವವರು ತೀರ ವಿರಳ. ಜನರ ಮಧ್ಯೆ ನಾವಿರಬೇಕು ಎಂದು ಬಯಸುವವರ ಮಧ್ಯೆ ಇಲ್ಲೊಬ್ಬ ಯುವತಿ ವಿಭಿನ್ನವಾಗಿ ನಿಲ್ಲುತ್ತಾಳೆ. ಈಕೆ ಒಂಟಿ ಜೀವನ ಎಲ್ಲರ ಗಮನ ಸೆಳೆದಿದೆ. ಈಕೆ ದ್ವೀಪವೊಂದರಲ್ಲಿ ಒಂಟಿ ಬದುಕು ನಡೆಸುತ್ತಿದ್ದಾಳೆ. ಈಕೆ ಇರುವ ದ್ವೀಪದಲ್ಲಿ ಎಷ್ಟು ದೂರ ಕಣ್ಣು ಹಾಯಿಸಿದರೂ ಮನುಷ್ಯರು ಕಾಣುವುದಿಲ್ಲ. ಇಲ್ಲಿ ವಿಮಾನ ಹಾರುವುದಿಲ್ಲ, ದೊಡ್ಡ ಕಟ್ಟಡಗಳು ಕಚೇರಿಗಳು ಕೂಡ ಇಲ್ಲ. 

ದ್ವೀಪ (Island) ಜೀವನದ ಬಗ್ಗೆ ಈಕೆ ಏನಂತಾಳೆ ಗೊತ್ತಾ? : ಈ ಯುವತಿಯ ಹೆಸರು ಟೋರಿಕಾ ಕ್ರಿಶ್ಚಿಯನ್ (Torica Christian). ಈಕೆ ಬ್ರಿಟಿಷ್ (British) ಪ್ರವಾಸಿ ಕ್ಷೇತ್ರ ಪಿಟ್ಕೈರ್ನ್ ದ್ವೀಪದಲ್ಲಿ ನೆಲೆಸಿದ್ದಾಳೆ. 21 ವರ್ಷದ ಟೋರಿಕಾ ಈ ದ್ವೀಪ ನನಗೆ ಸ್ವರ್ಗದಂತೆ ಕಾಣಿಸುತ್ತದೆ ಎನ್ನುತ್ತಾಳೆ. ಸ್ವಲ್ಪ ಸಮಯ ಇಲ್ಲಿರಬೇಕು ಎಂದು ಬಂದ ನನಗೆ ಇಲ್ಲಿಂದ ಹೋಗುವ ಮನಸ್ಸಾಗಲೇ ಇಲ್ಲ. ಆದ್ದರಿಂದ ನಾನು ಇಲ್ಲೇ ಉಳಿದುಕೊಂಡೆ ಎನ್ನುತ್ತಾಳೆ ಟೋರಿಕಾ ಕ್ರಿಶ್ಚಿಯನ್. ಟೋರಿಕಾ ತನ್ನ ಹೊಸ ಜೀವನಶೈಲಿಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾಳೆ. ಟೋರಿಕಾ ತನ್ನ ವಿನೂತನ ಲೈಫ್ ಸ್ಟೈಲ್ ಬಗ್ಗೆ ಜನರಿಗೆ ಮಾಹಿತಿ ನೀಡಿದ್ದಾಳೆ.

ಲಕ್ಷದ್ವೀಪದಲ್ಲಿ ತಾಜ್‌ ಬ್ರ್ಯಾಂಡ್‌ನ ಎರಡು ಐಷಾರಾಮಿ ಹೋಟೆಲ್‌ ನಿರ್ಮಿಸಲು ಟಾಟಾ ನಿರ್ಧಾರ

ಟೋರಿಕಾ ನೆಲೆಸಿರುವ ಪಿಟ್ ಕೈರ್ನ್ ಕೇವಲ 2 ಮೈಲಿ ಉದ್ದ ಮತ್ತು 1 ಮೈಲಿ ಅಗಲ ಇದೆ. ಈ ದ್ವೀಪ ಯಾವುದೇ ಏರ್ ಸ್ಕ್ರಿಪ್ಟ್ ಕೂಡ ಹೊಂದಿಲ್ಲ. ಆದ್ದರಿಂದ ಇಲ್ಲಿನ ಜನರು, ಸರಬರಾಜು ಹಡಗಿನ ಮೂಲಕವೇ ಪ್ರಯಾಣ ಮಾಡುತ್ತಾರೆ. ಈ ಹಡಗು ವಾರಕ್ಕೆ ಒಮ್ಮೆ ಮಾತ್ರ ಪಿಟ್ ಕೈರ್ನ್ ದ್ವೀಪಕ್ಕೆ ಬರುತ್ತದೆ. ಪ್ರತಿವಾರ ಈ ಹಡಗು  ಪಿಟ್ ಕೈರ್ನ್ ಮತ್ತು ಗ್ಯಾಂಬಿಯರ್ ದ್ವೀಪದ ನಡುವೆ ಚಲಿಸುತ್ತದೆ. ಪ್ರತಿ ಗುರುವಾರ ಬರುವ ಈ ಹಡಗು ಭಾನುವಾರದಂದು ಪ್ರವಾಸಿಗರು ಮತ್ತು ಸ್ಥಳೀಯ ಜನರನ್ನು ಕರೆದುಕೊಂಡು ಹೋಗುತ್ತದೆ.

ಟೋರಿಕಾ ತಾನು 1789ರಲ್ಲಿ ದಕ್ಷಿಣ ಸಮುದ್ರದಲ್ಲಿ ಎಚ್ಎಮ್ಎಸ್ ಬೌಂಟಿಯಲ್ಲಿ ದಂಗೆಯ ನೇತೃತ್ವ ವಹಿಸಿದ್ದ ಬ್ರಿಟಿಷ್ ನಾವಿಕ ಫ್ಲೆಚರ್ ಕ್ರಿಶ್ಚಿಯನ್ ಅವರ ವಂಶಸ್ಥೆ ಎಂದು ಹೇಳಿಕೊಂಡಿದ್ದಾಳೆ. ದಂಗೆಯ ನಂತರ ಅವರು ಪಿಟ್ ಕೈರ್ನ್ ಗೆ ಬಂದು ನೆಲೆಸಿದರು ಎಂದು ಟೋರಿಕಾ ಹೇಳಿದ್ದಾಳೆ. ಈ ದ್ವೀಪವು ದೊಡ್ಡ ಪಿಟ್ ಕೈರ್ನ್ ದ್ವೀಪದ ಒಂದು ಭಾಗವಾಗಿದೆ. ಇದು ಹೆಂಡರ್ಸನ್, ಡ್ಯೂಸಿ ಮತ್ತು ಒನೊ ದ್ವೀಪಗಳನ್ನು ಒಳಗೊಂಡಿದೆ ಎಂದು ಟೋರಿಕಾ ಹೇಳಿದ್ದಾಳೆ.

ಮಾಲ್ಡೀವ್ಸ್‌ ಶೂಟ್‌ ಕ್ಯಾನ್ಸಲ್‌ ಮಾಡಿದ ಹಾಟ್‌ ನಟಿ, 'ನಿಮ್ಮ ಬಟ್ಟೆ ಅಲ್ಲ, ನನ್ನ ಯೋಚನೆಯೇ ಸಣ್ಣದು' ಎಂದ ಅಭಿಮಾನಿ!

ಟೋರಿಕಾ ಮೀನುಗಾರಿಕೆಯ ಕೆಲಸ ಮಾಡುತ್ತಾಳೆ. ಇದರ ಜೊತೆಗೆ ಜೋ ಮಾಡೆಲ್ ಶಿಪ್ಸ್, ಫಿಶ್ ವಾಲ್ ಹ್ಯಾಂಗಿಂಗ್ ಹಾಗೂ ಐಲ್ಯಾಂಡ್ ಸ್ಟ್ಯಾಂಪ್ ಗಳನ್ನು ಮಾರಾಟ ಮಾಡುತ್ತಾಳೆ. ಇವುಗಳ ಜೊತೆಗೆ ಪ್ರವಾಸಿಗರಿಗೆ ಒಂದು ಚಿಕ್ಕ ಮನೆಯನ್ನು ಬಾಡಿಗೆಗೆ ಕೂಡ ಕೊಡುತ್ತಾಳೆ. ಈ ದ್ವೀಪದಲ್ಲಿ ಅಂಗಡಿ, ಪ್ರವಾಸೋದ್ಯಮ, ಗ್ರಂಥಾಲಯ, ಜಿಮ್ ಹಾಗೂ ವೈದ್ಯಕೀಯ ಕೇಂದ್ರವಿದೆ. ಇಲ್ಲಿ ಪ್ಲಂಬರ್, ಎಲೆಕ್ಟ್ರೀಶಿಯನ್, ಮೆಕಾನಿಕ್ ಮತ್ತು ಬಿಲ್ಡರ್ ಗಳಿದ್ದಾರೆ ಎಂದು ಪಿಟ್ ಕೈರ್ನ್ ದ್ವೀಪದಲ್ಲಿರುವ ಸೌಲಭ್ಯಗಳ ಬಗ್ಗೆ ಟೋರಿಕಾ ಹೇಳಿದ್ದಾಳೆ.

Latest Videos
Follow Us:
Download App:
  • android
  • ios