ಒಲಿಂಪಿಕ್ಸ್ ಪಂದ್ಯಕ್ಕೂ ಮುನ್ನ ಭಾರತೀಯ ಗಾಲ್ಫರ್ ದೀಕ್ಷಾ ಸಂಚರಿಸುತ್ತಿದ್ದ ಕಾರು ಅಪಘಾತ!
ಭಾರತೀಯ ಗಾಲ್ಫರ್ ದೀಕ್ಷಾ ದಾಗರ್ ಸಂಚರಿಸುತ್ತಿದ್ದ ಕಾರು ಪ್ಯಾರಿಸ್‌ನಲ್ಲಿ ಅಪಘಾತಕ್ಕೀಡಾಗಿದೆ. ಆಗಸ್ಟ್ 7 ರಂದು ದೀಕ್ಷಾ ದಾಗರ್ ಗಾಲ್ಫ್ ಪಂದ್ಯದಲ್ಲಿ ಪಾಲ್ಗೊಳ್ಳಬೇಕಿದೆ. ಆದರೆ ಇದಕ್ಕೂ ದೀಕ್ಷಾ ಹಾಗೂ ಕುಟುಂಬ ಸದಸ್ಯರಿದ್ದ ಕಾರು ಡಿಕ್ಕಿಯಾಗಿದೆ.
ಪ್ಯಾರಿಸ್(ಆ.01) ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತ 3ನೇ ಕಂಚಿನ ಪದಕ ಗೆದ್ದುಕೊಂಡು ದಾಖಲೆ ಬರೆದಿದೆ. ಇದೀಗ ಇತರ ವಿಭಾಗದಲ್ಲಿ ಭಾರತ ಪದಕಕ್ಕೆ ಗುರಿ ಇಟ್ಟಿದೆ. ಈ ಬಾರಿ ಭಾರತ ಗಾಲ್ಫ್ ವಿಭಾಗದಲ್ಲೂ ಪದಕ ಗೆಲ್ಲುವ ಭರವಸೆ ಮೂಡಿಸಿದೆ. ಆದರೆ ಗಾಲ್ಫ್ ವಿಭಾಗದ ಪಂದ್ಯ ಆಗಸ್ಟ್ 7 ರಿಂದ ಆರಂಭಗೊಳ್ಳುತ್ತಿದೆ. ಇದಕ್ಕೂ ಮುನ್ನ ಭಾರತೀಯ ಗಾಲ್ಫರ್ ದೀಕ್ಷಾ ದಾಗರ್ ಸಂಚರಿಸುತ್ತಿದ್ದ ಕಾರು ಪ್ಯಾರಿಸ್‌ನಲ್ಲಿ ಅಪಘಾತಕ್ಕೀಡಾಗಿದೆ. ದೀಕ್ಷಾ, ಆಕೆಯ ತಂದೆ ತಾಯಿ ಹಾಗೂ ಸಹೋದರ ಸಂಚರಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ. ಅದೃಷ್ಠವಶಾತ್ ಎಲ್ಲರೂ ಪಾರಾಗಿದ್ದಾರೆ. ದೀಕ್ಷಾ ತಾಯಿಗೆ ಗಾಯವಾಗಿದ್ದು ಆಸ್ಪತ್ರೆ ದಾಖಲಾಗಿದ್ದಾರೆ.
ನಾಲ್ವರು ಪ್ರಯಾಣಿಸುತ್ತಿದ್ದ ವೇಳೆ ಅವಘಡ ಸಂಭವಿಸಿದೆ. ದೀಕ್ಷಾ ತಾಯಿಗೆ ಬೆನ್ನಿಗೆ ಗಾಯವಾಗಿದೆ. ಇನ್ನು ಸಹೋದರನಿಗೂ ಸಣ್ಣ ಪುಟ್ಟ ಗಾಯವಾಗಿದೆ. ಇಬ್ಬರನ್ನು ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಇತ್ತ ದೀಕ್ಷಾ ಹಾಗೂ ದೀಕ್ಷಾ ತಂದೆಗೆ ಯಾವುದೇ ಗಾಯವಾಗಿಲ್ಲ. ಅಪಘಾತದಿಂದ ದೀಕ್ಷಾ ಕುಟುಂಬ ಆಘಾತಕ್ಕೀಡಾಗಿದೆ. ಸದ್ಯ ನಿಧನವಾಗಿ ಚೇತರಿಸಿಕೊಳ್ಳುತ್ತಿದ್ದು, ಪಂದ್ಯಕ್ಕೆ ತಯಾರಿ ಆರಂಭಿಸಿದ್ದಾರೆ.
ಕಂಚಿನ ಪದಕ ಬೇಟೆಯಾಡಿದ ಸ್ವಪ್ನಿಲ್ ಕುಶಾಲೆ; ಭಾರತಕ್ಕೆ ಒಲಿದ ಮೂರನೇ ಒಲಿಂಪಿಕ್ ಪದಕ
ಆಗಸ್ಟ್ 7ರಿಂದ ಗಾಲ್ಫ್ ಗೇಮ್ ನಡೆಯಲಿದೆ. ಮಹಿಳಾ ವಿಭಾಗದಲ್ಲಿ ದೀಕ್ಷಾ ದಾಗರ್ ಸ್ಪರ್ಧಿಸುತ್ತಿದ್ದರೆ, ಪುರುಷರ ವಿಭಾಗದಲ್ಲಿ ಶುಭಾಂಕರ್ ಶರ್ಮಾ ಹಾಗೂ ಗಗನಜೀತ್ ಭುಲ್ಲರ್ ಸ್ಪರ್ಧಿಸುತ್ತಿದ್ದಾರೆ. ಈ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ದೀಕ್ಷಾ ದಾಗರ್ ಅಂತಿಮ ಕ್ಷಣದಲ್ಲಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದರು. ಇದಕ್ಕೆ ಮುಖ್ಯ ಕಾರಣ ಸೌತ್ ಆಫ್ರಿಕಾ ಗಾಲ್ಫರ್ ಕ್ರೀಡಾಕೂಟದಿಂದ ಹಿಂದೆ ಸರಿದಿದ್ದರು. ದಕ್ಷಿಣ ಆಫ್ರಿಕಾದ ಗಾಲ್ಫರ್ ಪೌಲೋ ರೆಟೋ ಒಲಿಂಪಿಕ್ಸ್ ಸ್ಪರ್ಧೆಯಿಂದ ಹಿಂದೆ ಸರಿದಿದ್ದರು. ಹೀಗಾಗಿ ದೀಕ್ಷಾ ದಾಗರ್ ಅವಕಾಶ ಗಿಟ್ಟಿಸಿಕೊಂಡಿದ್ದರು.
ಟೋಕಿಯೋ ಒಲಿಂಪಿಕ್ಸ್‌ನಲ್ಲಿ ದೀಕ್ಷಾ ದಾಗರ್ ಟಿ-50ಗೆ ತೃಪ್ತಿಪಟ್ಟುಕೊಂಡಿದ್ದರು. ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ದೀಕ್ಷಾ ಪದಕದ ಮೇಲೆ ಗುರಿ ಇಟ್ಟಿದ್ದಾರೆ. ಇದಕ್ಕಾಗಿ ಭರ್ಜರಿ ತಯಾರಿ ನಡೆಸಿದ್ದಾರೆ. ಇದರ ನಡುವೆ ಅಪಘಾತ ಆಘಾತವೂ ಎದುರಾಗಿದೆ. ಹಲವು ಸವಾಲು ಸಂಕಷ್ಟದ ನಡುವೆ ದೀಕ್ಷಾ ದಾಗರ್ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದ್ದಾರೆ.
124 ವರ್ಷಗಳ ಒಲಿಂಪಿಕ್ಸ್ ಇತಿಹಾಸದಲ್ಲಿ ಭಾರತದ ಯಾರೂ ಮಾಡದ ಸಾಧನೆ ಮಾಡಿದ ಮನು ಭಾಕರ್..!
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತ ಇದುವರೆಗೆ 3 ಕಂಚಿನ ಪದಕ ಗೆದ್ದುಕೊಂಡಿದೆ. 10 ಮೀಟರ್ ಏರ್ ಪಿಸ್ತೂಲ್ ಶೂಟಿಂಗ್‌ನಲ್ಲಿ ಮನು ಭಾಕರ್ ಕಂಚಿನ ಪದಕ ಗೆದ್ದು ಸಾಧನೆ ಮಾಡಿದ್ದರು. ಮನು ಭಾಕರ್ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಮೊದಲ ಭಾರತದ ಕ್ರೀಡಾಪಟು ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದರೆ. ಈ ಪದಕ ಬಳಿಕ ಮನು ಭಾಕರ್ ಮಿಶ್ರ ಏರ್ ಪಿಸ್ತೂಲ್ ವಿಭಾಗದಲ್ಲಿ ಸರಬ್ಜೋತ್ ಸಿಂಗ್ ಜೊತೆ ಸೇರಿ ಕಂದಿನ ಪದಕ ಗೆದ್ದಿದ್ದಾರೆ. ಒಂದೇ ಒಲಿಂಪಿಕ್ಸ್‌ನಲ್ಲಿ ಮನು ಭಾಕರ್ ಎರಡು ಪದಕ ಸಾಧನೆ ಮಾಡಿದ ಭಾರತೀಯ ಮಹಿಳಾ ಕ್ರೀಡಾಪಟು ಅನ್ನೋ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಇನ್ನು 50 ಮೀಟರ್ ಏರ್ ಪಿಸ್ತೂಲ್ ಶೂಟಿಂಗ್‌ನಲ್ಲಿ ಸ್ವಿಪ್ನಿಲ್ ಕುಶಾಲೆ ಕಂಚಿನ ಪದಕ ಗೆದ್ದಿದ್ದಾರೆ.