ಎಡವಟ್ಟು ಮೌಲ್ಯಮಾಪನಕ್ಕೆ ಬರೀ 400 ದಂಡ: ತಪ್ಪೊಪ್ಪಿಕೊಂಡ ಸಚಿವ ನಾಗೇಶ್
* 777 ಪಿಯು ವಿದ್ಯಾರ್ಥಿಗಳಿಗೆ ತೊಂದರೆ
* ಕೇವಲ 4 ಶಿಕ್ಷಕರಿಗೆ ದಂಡ: ನಾಗೇಶ್
* ಮೃದು ಧೋರಣೆಯ ಶಿಕ್ಷಕರ ಪ್ರತಿನಿಧಿಗಳು
ಬೆಂಗಳೂರು(ಮಾ.29): ಕಳೆದ ಮೂರು ವರ್ಷದಲ್ಲಿ ಪಿಯುಸಿ(PUC) ಉತ್ತರ ಪತ್ರಿಕೆಗಳ ಅಸಮರ್ಪಕ ಮೌಲ್ಯಮಾಪನದಿಂದ 2777 ವಿದ್ಯಾರ್ಥಿಗಳಿಗೆ(Students) ತೊಂದರೆಯಾಗಿದ್ದರೂ, ತಪ್ಪು ಮಾಡಿದ ಮೌಲ್ಯಮಾಪಕರ ಪೈಕಿ ಕೇವಲ ನಾಲ್ವರಿಂದ ಕೇವಲ 400 ರು. ದಂಡ ವಸೂಲು ಮಾಡಲಾಗಿದೆ. ತಪ್ಪು ಮಾಡಿದ ಮೌಲ್ಯಮಾಪಕರಿಂದ ದಂಡ ವಸೂಲು ಮಾಡಲು ಅವಕಾಶವಿದ್ದರೂ ಇಲಾಖಾ ಅಧಿಕಾರಿಗಳು ಆ ಕೆಲಸ ಮಾಡದೇ ಇರುವುದು ತಪ್ಪಾಗಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್(BC Nagesh) ಒಪ್ಪಿಕೊಂಡಿದ್ದಾರೆ.
ಬಿಜೆಪಿಯ(BJP) ಎನ್.ರವಿಕುಮಾರ್ ಅವರ ಪರವಾಗಿ ಎಸ್.ವಿ. ಸಂಕನೂರು ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, 2018-19ನೇ ಸಾಲಿನಲ್ಲಿ ಯಾರಿಗೂ ದಂಡ(Fine) ವಿಧಿಸಿಲ್ಲ. 2019-20ನೇ ಸಾಲಿನಲ್ಲಿ ನಾಲ್ಕು ಮಂದಿ ಮೌಲ್ಯಮಾಪಕರಿಂದ 400 ರು. ದಂಡ ವಸೂಲಿ ಮಾಡಲಾಗಿದೆ. 2021-22ನೇ ಸಾಲಿನಲ್ಲಿ ವಾರ್ಷಿಕ ಪರೀಕ್ಷೆ(Exam) ನಡೆಸಿಲ್ಲ, ಖಾಸಗಿ ಅಭ್ಯರ್ಥಿಗಳು ಹಾಗೂ ಸರ್ಕಾರದ ಫಲಿತಾಂಶ ಒಪ್ಪದೆ ಇದ್ದ ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆ ನಡೆಸಲಾಗಿದೆ. ಈ ಸಾಲಿನಲ್ಲೂ ಮೌಲ್ಯಮಾಪಕರಿಂದ ದಂಡ ವಸೂಲಿ ಮಾಡಿಲ್ಲ. ಆದರೆ 2021-22ನೇ ಸಾಲಿನಿಂದ ಇಂತಹ ಪ್ರಕರಣಗಳಿಗೆ ದಂಡ ವಸೂಲು ಮಾಡಲಾಗುವುದು ಎಂದು ವಿವರಿಸಿದರು.
SSLC 2022 Exam: ಯಾವುದೇ ಉದ್ದೇಶದಿಂದ ಪರೀಕ್ಷೆಗೆ ಗೈರಾದ್ರೆ ಮತ್ತೆ ಅವಕಾಶವಿಲ್ಲ
2019ರಲ್ಲಿ 6ಕ್ಕಿಂತ ಹೆಚ್ಚು ಅಂಕ ಪಡೆದ ಪ್ರಕರಣಗಳ ಸಂಖ್ಯೆ 1008, 6ಕ್ಕಿಂತ ಕಡಿಮೆ ಪಡೆದ ಪ್ರಕರಣ 66, 2020ರಲ್ಲಿ 6ಕ್ಕಿಂತ ಹೆಚ್ಚು ಅಂಕ ಪಡೆದ ಪ್ರಕರಣ 1540, 6ಕ್ಕಿಂತ ಕಡಿಮೆ ಅಂಕ ಪಡೆದ ಪ್ರಕರಣ 124 ಹಾಗೂ 2021ರಲ್ಲಿ 6ಕ್ಕಿಂತ ಹೆಚ್ಚು ಅಂಕ ಪಡೆದ ಪ್ರಕರಣ 31 ಹಾಗೂ 6ಕ್ಕಿಂತ ಕಡಿಮೆ ಅಂಕ ಪಡೆದ ಪ್ರಕರಣ 8 ಇದೆ ಎಂದು ಸಚಿವರು ವಿವರಿಸಿದರು.
ಅಸಮರ್ಪಕ ಮೌಲ್ಯಮಾಪನ(Evaluation) ಮಾಡಿದವರಿಗೆ ದಂಡ ವಿಧಿಸುವ, ಕಠಿಣ ಕ್ರಮ ಕೈಗೊಳ್ಳುವ ಸಂಬಂಧ ಶಿಕ್ಷಕರ ಕ್ಷೇತ್ರದ ಪ್ರತಿನಿಧಿಗಳ ಜೊತೆ ಚರ್ಚಿಸಲಾಗುವುದು ಎಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಇದಕ್ಕೂ ಮುನ್ನ ಮಾತನಾಡಿದ ಎಸ್.ವಿ. ಸಂಕನೂರು, ಉತ್ತರ ಪತ್ರಿಕೆಗಳ ಅಸಮರ್ಪಕ ಮೌಲ್ಯಮಾಪನ ಮಾಡಿದ ಮೌಲ್ಯಮಾಪಕರನ್ನು ಕಪ್ಪುಪಟ್ಟಿಗೆ ಸೇರಿಸಬೇಕು, ಮರು ಮೌಲ್ಯಮಾಪನದ ವೇಳೆ 10ರಿಂದ 19 ಅಂಕ ವ್ಯತ್ಯಾಸ ಕಂಡು ಬಂದಿರುವ ಬೇಕಾದಷ್ಟು ಪ್ರಕರಣಗಳು ನಡೆದಿವೆ. ಹಾಗಾಗಿ ಮಕ್ಕಳನ್ನು ಆತಂಕಕ್ಕೆ ದೂಡಲು ಕಾರಣರಾದ ಮೌಲ್ಯಮಾಪಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಮೃದು ಧೋರಣೆಯ ಶಿಕ್ಷಕರ ಪ್ರತಿನಿಧಿಗಳು:
ಮಧ್ಯ ಪ್ರವೇಶಿಸಿದ ಬಿಜೆಪಿಯ ಸದಸ್ಯ ಲಕ್ಷ್ಮಣ ಸವದಿ, ಶಿಕ್ಷಕರ ಕ್ಷೇತ್ರದ 14 ಪ್ರತಿನಿಧಿಗಳು ಸದನದಲ್ಲಿ ಇದ್ದಾರೆ, ಸರ್ಕಾರಿ ನೌಕರರು ತಪ್ಪು ಮಾಡಿದ್ದಲ್ಲಿ ಕಠಿಣ ಕ್ರಮ ಕೈಗೊಳ್ಳಿ, ದಂಡಿಸಿ ಎಂದು ಒತ್ತಾಯ ಮಾಡುತ್ತಿದ್ದರು, ಆದರೆ ಅಸಮರ್ಪಕ ಮೌಲ್ಯಮಾಪನ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವ ವಿಷಯದಲ್ಲಿ ಮೃದು ಧೋರಣೆ ಅನುಸರಿಸುತ್ತಿದ್ದಾರೆ. ವಿಷಯ ಪ್ರಸ್ತಾಪವಾಗಬೇಕು, ಮೌಲ್ಯಮಾಪಕರಿಗೂ ತೊಂದರೆಯಾಗಬಾರದೆಂಬ ನಿಮ್ಮ ಧೋರಣೆಯಾಗಿದೆ ಎಂದು ಚುಚ್ಚಿದರು.
Hijab Row ಮುಸ್ಲಿಂ ಧರ್ಮಗುರುಗಳು ಗಡ್ಡ ಬಿಡ್ತಾರೆ, ಹಾಗಂತ ವಿದ್ಯಾರ್ಥಿಗಳಿಗೆ ಅದನ್ನೇ ಹೇಳೋಕೆ ಆಗುತ್ತಾ?
ಪಠ್ಯದಿಂದ ಟಿಪ್ಪು ವಿಚಾರ ಕೈಬಿಟ್ಟಿಲ್ಲ:
ಶಾಲಾ ಪಠ್ಯಪುಸ್ತಕದಿಂದ ಟಿಪ್ಪು ಸುಲ್ತಾನ್(Tipu Sultan) ವಿಚಾರಗಳನ್ನು ಸಂಪೂರ್ಣ ಕೈಬಿಡಲಾಗುತ್ತಿದೆ ಎಂಬ ಸುದ್ದಿ ಸತ್ಯಕ್ಕೆ ದೂರವಾದುದು. ಪಠ್ಯದಲ್ಲಿ(Text) ನಡೆದಿದ್ದ ಇತಿಹಾಸ ತಿರುಚುವ ಪ್ರಯತ್ನಗಳು, ತಪ್ಪು, ದೋಷಗಳನ್ನು ಸರಿಪಡಿಸುವ ಕೆಲಸವನ್ನು ಮಾತ್ರ ನಾವು ಮಾಡುತ್ತಿದ್ದೇವೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸ್ಪಷ್ಟಪಡಿಸಿದ್ದರು.
ವಿಧಾನಸೌಧದಲ್ಲಿ ಶುಕ್ರವಾರ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಸದ್ಯದಲ್ಲೇ ಸುದ್ದಿಗೋಷ್ಠಿ ನಡೆಸಿ ಈ ಬಗ್ಗೆ ವಿವರವಾಗಿ ಮಾಹಿತಿ ಕೊಡುತ್ತೇನೆ. ಟಿಪ್ಪು ವಿಚಾರವನ್ನು ಪಠ್ಯದಿಂದ ಕೈಬಿಡುವ ಸುದ್ದಿ ಸತ್ಯಕ್ಕೆ ದೂರವಾದುದು. ಪಠ್ಯದಲ್ಲಿ ತಿರುಚಿದ್ದ ಇತಿಹಾಸವನ್ನು(History) ಸರಿಪಡಿಸಿದ್ದೇವೆ. ಕಡೆಗಣನೆಯಾಗಿದ್ದ ಇತಿಹಾಸದ ವಿಷಯಗಳನ್ನು ಸೇರ್ಪಡೆ ಮೂಲಕ ಪರಿಚಯಿಸುವ ಪ್ರಯತ್ನ ನಡೆದಿದೆ. ಮಕ್ಕಳು ಓದಲೇಬೇಕಾದ ಪಠ್ಯವನ್ನು ಮತ್ತೆ ತರುವ ಪ್ರಯತ್ನ ಮಾಡಿದ್ದೇವೆ. ಇದರಲ್ಲಿ ಯಾವುದೇ ರಾಜಕೀಯ ಬೆರೆಸುವ ಕೆಲಸ ಮಾಡಿಲ್ಲ ಎಂದು ಹೇಳಿದ್ದರು.