Malayalam English Kannada Telugu Tamil Bangla Hindi Marathi
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Sports
  • Tokyo Olympics
  • ಟೋಕಿಯೋ ಒಲಿಂಪಿಕ್ಸ್‌ ಪದಕದವರೆಗೆ ಮಿರಾಬಾಯಿ ಚಾನು ಪಯಣ; ಚಿತ್ರಪಟಗಳಲ್ಲಿ

ಟೋಕಿಯೋ ಒಲಿಂಪಿಕ್ಸ್‌ ಪದಕದವರೆಗೆ ಮಿರಾಬಾಯಿ ಚಾನು ಪಯಣ; ಚಿತ್ರಪಟಗಳಲ್ಲಿ

ಬೆಂಗಳೂರು: ಭಾರತದ ತಾರಾ ವೇಟ್‌ಲಿಫ್ಟರ್‌ ಸೈಕೋಮ್‌ ಮೀರಾಬಾಯಿ ಚಾನು ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಭಾರತಕ್ಕೆ ಮೊದಲ ಪದಕ ತಂದುಕೊಡುವಲ್ಲಿ ಯಶಸ್ವಿಯಾಗಿದ್ಧಾರೆ. 49 ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಚಾನು ಒಟ್ಟು 202 ವೇಟ್‌ಲಿಫ್ಟ್‌ ಮಾಡುವ ಮೂಲಕ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದಾರೆ. ಸಿಡ್ನಿ ಒಲಿಂಪಿಕ್ಸ್‌ನಲ್ಲಿ ಕರ್ಣಂ ಮಲ್ಲೇಶ್ವರಿ ವೇಟ್‌ ಲಿಫ್ಟಿಂಗ್‌ನಲ್ಲಿ ಕಂಚಿನ ಪದಕ ಜಯಿಸಿದ್ದರು. ಚಾನು ಒಂದು ಹೆಜ್ಜೆ ಮುಂದೆ ಹೋಗಿ ಬೆಳ್ಳಿ ಪದಕ ಜಯಿಸಿದ್ದಾರೆ. ಮೀರಾಬಾಯಿ ಚಾನು ಅವರ ಒಲಂಪಿಕ್‌ ಪದಕದ ಹಾದಿ ಹೀಗಿತ್ತು ನೋಡಿ

Suvarna News | Asianet News | Updated : Jul 24 2021, 05:12 PM
1 Min read
Share this Photo Gallery
  • FB
  • TW
  • Linkdin
  • Whatsapp
  • Google NewsFollow Us
17
ರಿಯೋ ಒಲಿಂಪಿಕ್ಸ್‌ನಲ್ಲ ವೈಫಲ್ಯ

ರಿಯೋ ಒಲಿಂಪಿಕ್ಸ್‌ನಲ್ಲ ವೈಫಲ್ಯ

2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಭರವಸೆ ಮೂಡಿಸಿದ್ದ ಚಾನು ಕೊನೆಗೆ ನಿರಾಸೆ ಅನುಭವಿಸಿದ್ದರು. ಆರು ಪ್ರಯತ್ನಗಳ ಪೈಕಿ ಚಾನು ಒಮ್ಮೆ ಮಾತ್ರ ಯಶಸ್ವಿಯಾಗಿದ್ದರು 

27
ಕಣ್ಣೀರಿಟ್ಟಿದ್ದ ಚಾನು

ಕಣ್ಣೀರಿಟ್ಟಿದ್ದ ಚಾನು

ರಿಯೋ ಒಲಿಂಪಿಕ್ಸ್‌ನಲ್ಲಿ ಕ್ಲೀನ್ ಅಂಡ್ ಜರ್ಕ್‌ ವಿಭಾಗದಲ್ಲಿ ಮೂರು ಪ್ರಯತ್ನದಲ್ಲೂ ವಿಫಲರಾಗುವ ಮೂಲಕ ಒಳಾಂಗಣ ಕ್ರೀಡಾಂಗಣದಲ್ಲೇ ಚಾನು ಕಣ್ಣೀರಿಟ್ಟಿದ್ದರು.

37
ಗ್ರೇಟ್‌ ಕಮ್‌ಬ್ಯಾಕ್‌ ಮಾಡಿದ್ದ ಚಾನು

ಗ್ರೇಟ್‌ ಕಮ್‌ಬ್ಯಾಕ್‌ ಮಾಡಿದ್ದ ಚಾನು

ರಿಯೋ ವೈಫಲ್ಯದಿಂದ ಕೊರಗುತ್ತಾ ಕೂರದೇ ಕಠಿಣ ಪರಿಶ್ರಮ ಹಾಕಿದ ಚಾನು 2017ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆಲ್ಲುವಲ್ಲಿ ಯಶಸ್ವಿಯಾದರು. ಕರ್ಣಂ ಮಲ್ಲೇಶ್ವರಿ ಬಳಿಕ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದ ಎರಡನೇ ಭಾರತೀಯ ವೇಟ್‌ಲಿಫ್ಟರ್‌ ಎನ್ನುವ ಕೀರ್ತಿಗೆ ಚಾನು ಭಾಜನರಾದರು.

47
ಕಾಮನ್‌ವೆಲ್ತ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದ ಚಾನು

ಕಾಮನ್‌ವೆಲ್ತ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದ ಚಾನು

ಇದಾದ ಬಳಿಕ 2018ರಲ್ಲಿ ಗೋಲ್ಡ್‌ ಕೋಸ್ಟ್‌ನಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ 86 ಕೆ.ಜಿ ಸ್ಯ್ನಾಚ್‌ ಹಾಗೂ 110 ಕೆ.ಜಿ. ಕ್ಲೀನ್ ಅಂಡ್ ಜೆರ್ಕ್‌ ಲಿಫ್ಟ್‌ ಮಾಡುವ ಮೂಲಕ ಮತ್ತೊಂದು ಚಿನ್ನದ ಪದಕ ಬೇಟೆಯಾಡಿದ್ದರು ಇಂಪಾಲ ಮೂಲದ ಚಾನು.

57
ಗಾಯದ ವಿರುದ್ದವೂ ಸೆಣಸಿದ್ದ ಚಾನು

ಗಾಯದ ವಿರುದ್ದವೂ ಸೆಣಸಿದ್ದ ಚಾನು

ವೃತ್ತಿಜೀವನದ ಶ್ರೇಷ್ಠ ಹಂತದಲ್ಲಿರುವಾಗಲೇ ಗಾಯದ ಸಮಸ್ಯೆ ಚಾನು ಅವರನ್ನು ಕಾಡಲಾರಂಭಿಸಿತು. 2018ರಲ್ಲೇ ಗಾಯಕ್ಕೆ ಒಳಗಾಗಿ ಕೆಲಕಾಲ ವೇಟ್‌ಲಿಫ್ಟಿಂಗ್‌ನಿಂದ ದೂರ ಉಳಿದರು. ಚಾನು ಭವಿಷ್ಯ ಮುಗಿಯಿತೇನು ಎನ್ನುತ್ತಿರುವಾಗಲೇ ಮತ್ತೆ ಅದೇ ವರ್ಷಾಂತ್ಯದಲ್ಲಿ ವೇಟ್‌ಲಿಫ್ಟಿಂಗ್‌ಗೆ ಕಮ್‌ಬ್ಯಾಕ್‌ ಮಾಡಿದರು.

67
ವಿಶ್ವದಾಖಲೆ ಬರೆದಿದ್ದ ಇಂಪಾಲದ ತಾರೆ

ವಿಶ್ವದಾಖಲೆ ಬರೆದಿದ್ದ ಇಂಪಾಲದ ತಾರೆ

2021ರ ಆರಂಭದಲ್ಲೇ ತಾಷ್ಕೆಂಟ್‌ನಲ್ಲಿ ನಡೆದ ಏಷ್ಯನ್‌ ಚಾಂಪಿಯನ್‌ಶಿಪ್‌ನಲ್ಲಿ ಮೀರಾಬಾಯಿ ಚಾನು ಕ್ಲೀನ್ ಅಂಡ್ ಜೆರ್ಕ್ ವಿಭಾಗದಲ್ಲಿ 119 ಕೆ.ಜಿ ಭಾರ ಎತ್ತುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದರು. ಒಟ್ಟು 205 ಕೆಜಿ ಬಾರ ಎತ್ತಿ ಚಾನು ಕಂಚಿನ ಪದಕಕ್ಕೆ ಕೊರಳೊಡ್ಡಿದ್ದರು.

77
ಕನಸು ನನಸಾದ ಕ್ಷಣ

ಕನಸು ನನಸಾದ ಕ್ಷಣ

ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಪದಕ ಗೆದ್ದೇ ತೀರುವ ಸಂಕಲ್ಪದೊಂದಿಗೆ ಕಣಕ್ಕಿಳಿದಿದ್ದ ಚಾನು ಸ್ನ್ಯಾಚ್‌ ವಿಭಾಗದಲ್ಲಿ 87 ಕೆ.ಜಿ, ಕ್ಲೀನ್ ಅಂಡ್ ಜೆರ್ಕ್ ವಿಭಾಗದಲ್ಲಿ 115 ಭಾರ ಎತ್ತುವ ಮೂಲಕ ರಜತ ಪದಕಕ್ಕೆ ಕೊರಳೊಡ್ಡಿದ್ದಾರೆ.

Naveen Kodase
About the Author
Naveen Kodase
ನವೀನ್ ಕೊಡಸೆ ಏಷ್ಯಾನೆಟ್ ಕನ್ನಡದಲ್ಲಿ ಮುಖ್ಯ ಉಪಸಂಪಾದಕ. ಕಳೆದ 9 ವರ್ಷಗಳಿಂದಲೂ ಮಾಧ್ಯಮ ಜಗತ್ತಿನಲ್ಲಿದ್ದೇನೆ. ಅಪ್ಪಟ ಮಲೆನಾಡಿನ ಹುಡುಗ. ಕುವೆಂಪು ವಿವಿಯ ಪತ್ರಿಕೋದ್ಯಮ ಪದವಿ ಇದೆ. ರಾಜ್‌ ನ್ಯೂಸ್‌ ಮೂಲಕ ಮಾಧ್ಯಮ ಲೋಕಕ್ಕೆ ಕಾಲಿಟ್ಟವನು. ಡಿಜಿಟಲ್‌ ಮಾಧ್ಯಮ ಲೋಕದಲ್ಲಿ ಪಳಗಿದರೂ, ಕಲಿಯೋದಿದೆ ಅಪಾರ. ಕ್ರೀಡೆ, ರಾಜಕೀಯ, ಸಾಹಿತ್ಯದಲ್ಲಿದೆ ಆಸಕ್ತಿ. ಕ್ರೀಡಾ ಸುದ್ದಿಯೇ ನನ್ನ ಜೀವಾಳ. Read More...
 
Recommended Stories
Top Stories