ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ರಾಜ್ಯದ ಈಜುಪಟು ಶ್ರೀಹರಿ
* ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ರಾಜ್ಯದ ಶ್ರೀಹರಿ ನಟರಾಜ್
* 100 ಮೀ. ಬ್ಯಾಕ್‌ಸ್ಟ್ರೋಕ್ ವಿಭಾಗದಲ್ಲಿ ಶ್ರೀಹರಿ ಸ್ಪರ್ಧಿಸಲಿದ್ದಾರೆ
* ಇದೇ ಮೊದಲ ಬಾರಿಗೆ ಭಾರತದ ಇಬ್ಬರು ಈಜುಪಟುಗಳು ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಸ್ಪರ್ದೆ
ನವದೆಹಲಿ(ಜು.01): ಕರ್ನಾಟಕದ ತಾರಾ ಈಜುಪಟು ಶ್ರೀಹರಿ ನಟರಾಜ್ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲು ಅರ್ಹತೆ ದೊರೆತಿದೆ. ಶ್ರೀಹರಿ ಇತ್ತೀಚೆಗಷ್ಟೇ ಇಟಲಿಯ ಚಾಂಪಿಯನ್‌ಶಿಪ್‌ನ ಟೈಮ್ ಟ್ರಯಲ್‌ನಲ್ಲಿ ‘ಎ’ ವಿಭಾಗದ ಸಮಯವನ್ನು ಸಾಧಿಸಿದ್ದರು.
100 ಮೀ. ಬ್ಯಾಕ್‌ಸ್ಟ್ರೋಕ್ ವಿಭಾಗದಲ್ಲಿ ಅವರು ಸ್ಪರ್ಧಿಸಲಿದ್ದಾರೆ. ಒಲಿಂಪಿಕ್ಸ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತದ ಇಬ್ಬರು ಈಜುಪಟುಗಳು ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲಿದ್ದಾರೆ. 200 ಮೀಟರ್ ಬಟರ್‌ಪ್ಲೈ ವಿಭಾಗದಲ್ಲಿ ಈಗಾಗಲೇ ಸಾಜನ್ ಪ್ರಕಾಶ್ ನೇರ ಅರ್ಹತೆ ಪಡೆಯುವ ಮೂಲಕ ಚಾರಿತ್ರಿಕ ಸಾಧನೆ ಮಾಡಿದ್ದರು.
ದಾಖಲೆ ನಿರ್ಮಿಸಿದ ಸಜನ್ ಪ್ರಕಾಶ್; ಟೊಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಈಜುಪಟು!
ಇದೇ ವೇಳೆ ರಾಜ್ಯದ ಹಿರಿಯ ಟೆನಿಸಿಗ ರೋಹನ್ ಬೋಪಣ್ಣಗೆ ಪುರುಷರ ಡಬಲ್ಸ್ ವಿಭಾಗದಲ್ಲಿ ಒಲಿಂಪಿಕ್ಸ್ ಅರ್ಹತೆ ಕೈತಪ್ಪಿದೆ.
ಒಲಿಂಪಿಕ್ಸ್ ಸಿದ್ಧತೆಗೆ ಈಜುಕೊಳ ತೆರೆಯಲು ಸರ್ಕಾರ ಅನುಮತಿ
ಬೆಂಗಳೂರು: ಟೋಕಿಯೋ ಒಲಿಂಪಿಕ್ಸ್‌ಗೆ ಆಯ್ಕೆಯಾಗಿರುವ ಈಜುಪಟುಗಳ ಅಭ್ಯಾಸಕ್ಕಾಗಿ ರಾಜ್ಯ ಈಜು ಸಂಸ್ಥೆಯಿಂದ ಮಾನ್ಯತೆ ಪಡೆದಿರುವ ಒಂದು ಈಜುಕೊಳವನ್ನು ತೆರೆಯಲು ರಾಜ್ಯ ಸರ್ಕಾರ ಅನುಮಿತಿ ನೀಡಿದೆ.
ಕೋವಿಡ್ ನಿಯಮಾವಳಿಗಳನ್ನು ಅನುಸರಿಸುವಂತೆ ಸರ್ಕಾರ ಸೂಚಿಸಿದೆ. ರಾಜ್ಯದ ಶ್ರೀಹರಿ ನಟರಾಜ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಾರೆ. ಕೇರಳದ ಸಾಜನ್ ಪ್ರಕಾಶ್, ಗುಜರಾತ್‌ನ ಮಾನಾ ಪಟೇಲ್ ಸಹ ಅರ್ಹತೆ ಪಡೆದಿದ್ದು, ಈ ಇಬ್ಬರೂ ಸಹ ಬೆಂಗಳೂರಿನಲ್ಲಿ ಅಭ್ಯಾಸ ನಡೆಸಲಿದ್ದಾರೆ.