ದಾಖಲೆ ನಿರ್ಮಿಸಿದ ಭಾರತೀಯ ಈಜುಪಟು ಸಾಜನ್ ಪ್ರಕಾಶ್  ಟೊಕಿಯೋ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆದ ಪ್ರಕಾಶ್ ಈ ಸಾಧನೆ ಮಾಡಿದ ಭಾರತದ ಮೊದಲ ಈಜುಪಟು ಸಜನ್ 

ನವದೆಹಲಿ(ಜೂ.26): ಒಲಿಂಪಿಕ್ಸ್‌ನಲ್ಲಿ ಭಾರತ ಪ್ರತಿ ಬಾರಿ ಅತ್ಯುತ್ತಮ ಪ್ರದರ್ಶನ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಬಾರಿಯ ಟೊಕಿಯೋ ಒಲಿಂಪಿಕ್ಸ್ ಭಾರತದ ಪಾಲಿಗೆ ಮತ್ತಷ್ಟು ಸ್ಮರಣೀಯವಾಗಿದೆ. ಕಾರಣ ಇದೇ ಮೊದಲ ಬಾರಿಗೆ ಒಲಿಂಪಿಕ್ಸ್ ಕ್ರೀಡಾಕೂಟದ ಈಜು ಸ್ಪರ್ಧೆಯಲ್ಲಿ ಭಾರತ ಸ್ಪರ್ಧಿಸುತ್ತಿದೆ. ಇದಕ್ಕೆ ಕಾರಣವಾಗಿದ್ದು ಸಜನ್ ಪ್ರಕಾಶ್.

Scroll to load tweet…

ಭಾರತದ ಈಜುಪಟು ಸಜನ್ ಪ್ರಕಾಶ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಮೊದಲ ಈಜುಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ರೋಮ್‌ನಲ್ಲಿ ನಡೆದ ಕ್ರೀಡಾಕೂಟದ 200 ಮೀಟರ್ ಬಟರ್‌ಪ್ಲೈ ಈಜು ಸ್ಪರ್ದೆಯಲ್ಲಿ ಸಜನ್ ಪ್ರಕಾಶ್ 1:56:38 ನಿಮಿಷದಲ್ಲಿ ಗುರಿ ತಲುಪಿದ್ದಾರೆ. ಈ ಮೂಲಕ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಾರೆ.

ಒಲಿಂಪಿಕ್‌ಗೆ ಆಯ್ಕೆಯಾಗುವ ಕರ್ನಾಟಕದ ಕ್ರೀಡಾಪಟುಗಳಿಗೆ 10 ಲಕ್ಷ ರೂ ಪ್ರೋತ್ಸಾಹಧನ.

ಈ ಕೂಟದಲ್ಲಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು 1:56:48 ನಿಮಿದೊಳಗೆ ಗುರಿ ತಲುಪಬೇಕಿತ್ತು. ಆದರೆ ಸಜನ್ ಇನ್ನೂ 10 ಸೆಕೆಂಡ್ ಮುಂಚೆ ಗುರಿ ತಲುಪಿ ದಾಖಲೆ ಬರೆದಿದ್ದಾರೆ.