ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ 9 ಬಾಕ್ಸರ್‌ಗಳು..!
ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಭಾರತದಿಂದ ದಾಖಲೆಯ 9 ಬಾಕ್ಸರ್‌ಗಳು ಅರ್ಹತೆಗಿಟ್ಟಿಸಿಕೊಂಡಿದ್ದಾರೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ.
ಅಮ್ಮಾನ್(ಮಾ.12): ಏಷ್ಯನ್/ಒಷಿಯಾನಿಯಾ ಒಲಿಂಪಿಕ್ ಅರ್ಹತಾ ಸುತ್ತಲ್ಲಿ ಭಾರತ ಬಾಕ್ಸಿಂಗ್ ತಂಡ ಇತಿಹಾಸ ನಿರ್ಮಿಸಿದೆ. ಇದೇ ಮೊದಲ ಬಾರಿಗೆ ಭಾರತದ ಅತಿಹೆಚ್ಚು ಎಂದರೆ 9 ಬಾಕ್ಸರ್‌ಗಳು ಟೋಕಿಯೋ ಒಲಿಂಪಿಕ್ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಒಲಿಂಪಿಕ್ ಟಿಕೆಟ್ ಪಡೆದ ಜಾವಲಿನ್ ಪಟು ಶಿವಪಾಲ್ ಸಿಂಗ್
2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಭಾರತದ 8 ಬಾಕ್ಸರ್‌ಗಳು ಅರ್ಹತೆ ಪಡೆದಿದ್ದು ಈ ವರೆಗಿನ ದಾಖಲಾಗಿತ್ತು. ಬುಧವಾರ 63 ಕೆ.ಜಿ. ವಿಭಾಗದ ಬಾಕ್ಸ್ ಆಫ್ ಸ್ಪರ್ಧೆಯಲ್ಲಿ ಮನೀಶ್ ಕೌಶಿಕ್, ಆಸ್ಪ್ರೇಲಿಯಾದ ಗರ್ಸಿಡೆ ಹ್ಯಾರಿಸನ್ ವಿರುದ್ಧ 4-1 ರಿಂದ ಗೆಲುವು ಸಾಧಿಸಿದರು.
ಅಮಿತ್, ಮೇರಿ ಕೋಮ್‌ಗೆ 2020ರ ಒಲಿಂಪಿಕ್ಸ್ ಟಿಕೆಟ್..!
ಇದಕ್ಕೂ ಮುನ್ನ ಅಮಿತ್ ಪಂಘಾಲ್, ವಿಕಾಸ್ ಕೃಷನ್, ಆಶಿಶ್ ಕುಮಾರ್, ಸತೀಶ್ ಕುಮಾರ್, ಮೇರಿ ಕೋಮ್, ಸಿಮ್ರನ್‌ಜಿತ್ ಕೌರ್, ಲೊವ್ಲಿನಾ ಬೋರ್ಗಯಿ ಮತ್ತು ಪೂಜಾ ರಾಣಿ ಒಲಿಂಪಿಕ್ ಟಿಕೆಟ್ ಪಡೆದಿದ್ದರು. ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಹೆಚ್ಚು ಬಾಕ್ಸರ್‌ಗಳು ಆಯ್ಕೆಯಾಗಿದ್ದು, ಹೆಚ್ಚು ಪದಕ ಗೆಲ್ಲುವ ನಿರೀಕ್ಷೆ ಮೂಡಿಸಿದ್ದಾರೆ.