ಜಾವಲಿನ್ ಥ್ರೋ ವಿಭಾಗದಲ್ಲಿ ಶಿವಪಾಲ್ ಸಿಂಗ್ ಟೊಕಿಯೋ ಒಲಿಂಪಿಕ್ಸ್‌ಗೆ ಅರ್ಹತೆಗಿಟ್ಟಿಸಿಕೊಂಡಿದ್ದಾರೆ. ಇದರೊಂದಿಗೆ ಇಬ್ಬರು ಭಾರತದ ಜಾವಲಿನ್ ಪಟುಗಳು ಅರ್ಹತೆ ಪಡೆದಿದ್ದಾರೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ. 

ನವದೆಹಲಿ(ಮಾ.11): ಭಾರತದ ಜಾವಲಿನ್ ಥ್ರೋ ಪಟು ಶಿವಪಾಲ್ ಸಿಂಗ್, 2020ರ ಟೋಕಿಯೋ ಒಲಿಂಪಿಕ್ ಟಿಕೆಟ್ ಪಡದಿದ್ದಾರೆ. ದಕ್ಷಿಣ ಆಪ್ರಿಕಾದಲ್ಲಿ ನಡೆದ ಸ್ಥಳೀಯ ಅಥ್ಲೇಟಿಕ್ಸ್ ಕೂಟದಲ್ಲಿ ಶಿವಪಾಲ್ ಸಿಂಗ್ 85.47 ಮೀಟರ್ ದೂರ ಜಾವಲಿನ್ ಎಸೆಯುವ ಮೂಲಕ ಒಲಿಂಪಿಕ್ಸ್ ಅರ್ಹತೆಗಿಟ್ಟಿಸಿಕೊಂಡಿದ್ದಾರೆ.

ಅಮಿತ್, ಮೇರಿ ಕೋಮ್‌ಗೆ 2020ರ ಒಲಿಂಪಿಕ್ಸ್ ಟಿಕೆಟ್..!

ಇದರೊಂದಿಗೆ ಟೋಕಿಯೋ ಒಲಿಂಪಿಕ್‌ಗೆ ಅರ್ಹತೆ ಪಡೆದ ಭಾರತದ 41ನೇ ಅಥ್ಲೀಟ್ ಎನ್ನುವ ಗೌರವಕ್ಕೆ ಶಿವಪಾಲ್ ಸಿಂಗ್ ಪಾತ್ರರಾಗಿದ್ದಾರೆ. ಇದರ ಜತೆಗೆ ಜಾವಲಿನ್‌ನಲ್ಲಿ ಅರ್ಹತೆ ಪಡೆದ ಭಾರತದ ಎರಡನೇ ಥ್ರೋ ಪಟು ಎನ್ನುವ ಗೌರವಕ್ಕೂ ಪಾತ್ರರಾಗಿದ್ದಾರೆ.

ಟೋಕಿಯೋಗೆ ಭಾರತದ 15 ಶೂಟರ್ಸ್; ರಿಜಿಜು ಅಭಿನಂದನೆ

ಈ ಮೊದಲು ನೀರಜ್ ಚೋಪ್ರಾ ಜಾವಲಿನ್‌ ಥ್ರೋ ವಿಭಾಗದಲ್ಲಿ ಒಲಿಂಪಿಕ್ಸ್‌ಗೆ ಅರ್ಹತೆಗಿಟ್ಟಿಸಿಕೊಂಡಿದ್ದಾರೆ. ಕಳೆದ ವಾರವಷ್ಟೇ ನೀರಜ್ 87.86 ಮೀಟರ್ ಜಾವಲಿನ್ ಥ್ರೋ ಮಾಡಿದ್ದರು. ಜಾವಲಿನ್ ಥ್ರೋ ವಿಭಾಗದಲ್ಲಿ ಒಲಿಂಪಿಕ್ಸ್‌ಗೆ ಅರ್ಹತೆಗಿಟ್ಟಿಸಿಕೊಳ್ಳಲು 85 ಮೀಟರ್ ದೂರ ಎಸೆಯಬೇಕಿದೆ.

ಕೇಂದ್ರ ಕ್ರೀಡಾಸಚಿವ ಕಿರಣ್ ರಿಜಿಜು ಜಾವಲಿನ್ ಪಟು ಶಿವಪಾಲ್ ಸಿಂಗ್ ಅವರನ್ನು ಟ್ವೀಟ್ ಮೂಲಕ ಅಭಿನಂದಿಸಿದ್ದಾರೆ. 

Scroll to load tweet…