ಅಮಿತ್, ಮೇರಿ ಕೋಮ್‌ಗೆ 2020ರ ಒಲಿಂಪಿಕ್ಸ್ ಟಿಕೆಟ್..!
ಲಂಡನ್ ಒಲಿಂಪಿಕ್ಸ್ ಪದಕ ವಿಜೇತೆ ಮೇರಿ ಕೋಮ್, ಅಮಿತ್ ಪಂಘಾಲ್ ಹಾಗೂ ಸಿಮ್ರಜಿತ್ ಕೌರ್ ಟೋಕಿಯೋ ಒಲಿಂಪಿಕ್ಸ್ ಟಿಕೆಟ್ ಖಚಿತ ಪಡಿಸಿಕೊಂಡಿದ್ದಾರೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ.
ಅಮ್ಮಾನ್(ಮಾ.10): ಏಷ್ಯಾ/ಒಷಿಯಾನಿಯಾ ಒಲಿಂಪಿಕ್ ಅರ್ಹತಾ ಸುತ್ತಿನ ಬಾಕ್ಸಿಂಗ್ ಟೂರ್ನಿಯಲ್ಲಿ ಭಾರತದ ಬಾಕ್ಸರ್‌ಗಳು ಅತ್ಯದ್ಭುತ ಪ್ರದರ್ಶನದಿಂದ ಗಮನಸೆಳೆದಿದ್ದಾರೆ. ಭಾರತದ ತಾರಾ ಬಾಕ್ಸರ್‌ಗಳಾದ ಅಮಿತ್ ಪಂಘಾಲ್, ಮೇರಿ ಕೋಮ್ ಹಾಗೂ ಸಿಮರ್ಜಿತ್ ಕೌರ್ 2020ರ ಟೋಕಿಯೋ ಒಲಿಂಪಿಕ್ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದರೆ. ಚೊಚ್ಚಲ ಬಾರಿಗೆ ಅಮಿತ್ ಒಲಿಂಪಿಕ್‌ಗೆ ಅರ್ಹತೆ ಪಡೆದಿದ್ದಾರೆ.
ಕೊರೋನಾ: ಟೋಕಿಯೋ ಒಲಿಂಪಿಕ್ಸ್ ಮುಂದೂಡಿಕೆ?
ಸೋಮವಾರ ನಡೆದ 52 ಕೆ.ಜಿ. ವಿಭಾಗದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ವಿಶ್ವ ಬಾಕ್ಸಿಂಗ್ ಬೆಳ್ಳಿ ವಿಜೇತ ಅಮಿತ್, ಫಿಲಿಪೈನ್ಸ್‌ನ ಕಾರ್ಲೋ ಪಾಲಮ್ ವಿರುದ್ಧ 4-1ರಿಂದ ಗೆಲುವು ಸಾಧಿಸಿ ಸೆಮಿಫೈನಲ್ ಪ್ರವೇಶಿದರು. ಇನ್ನು ಮತ್ತೊಂದು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸಿಮ್ರನ್‌ಜಿತ್, ಮಂಗೋಲಿಯಾದ ಬಾಕ್ಸರ್ ವಿರುದ್ಧ 5-0 ಅಂತರದಲ್ಲಿ ಜಯಭೇರಿ ಬಾರಿಸುವ ಒಲಿಂಪಿಕ್ಸ್ ಟಿಕೆಟ್ ಪಕ್ಕಾ ಮಾಡಿಕೊಂಡಿದರು.
ಒಲಿಂಪಿಕ್ಸ್‌ಗೆ ಕೊರೋನಾ ಭೀತಿ: ಸ್ಪಷ್ಟನೆ ನೀಡಿದ ಆಯೋಜಕರು
ಮೇರಿಗೆ ಸುಲಭ ಜಯ: 6 ಬಾರಿಯ ವಿಶ್ವ ಚಾಂಪಿಯನ್ ಮೇರಿ ಕೋಮ್, ಮಹಿಳೆಯರ 51 ಕೆ.ಜಿ. ವಿಭಾಗದ ಕ್ವಾರ್ಟರ್ ಫೈನಲ್‌ನಲ್ಲಿ ಫಿಲಿಪ್ಪೀನ್ಸ್‌ನ ಎದುರಾಳಿ ಐರೀಸ್ ಮಾಂಗೋ ವಿರುದ್ಧ 5-0 ಅಂತರದಲ್ಲಿ ಗೆದ್ದು ಸೆಮೀಸ್‌ಗೇರಿದರು. ಲಂಡನ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಮೇರಿ ಎರಡನೇ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲಿದ್ದಾರೆ.
ಈಗಾಗಲೇ ಪೂಜಾ ರಾಣಿ, ವಿಕಾಸ್ ಕೃಷನ್, ಲವ್ಲಿನಾ ಬೋರ್ಗೊಯಿ ಮತ್ತು ಆಶಿಶ್ ಕುಮಾರ್ ಹಾಗೂ ಸತೀಶ್ ಕುಮಾರ್ ಒಲಿಂಪಿಕ್ ಟಿಕೆಟ್ ಪಡೆದಿದ್ದರು. ಇದರೊಂದಿಗೆ ಭಾರತದ 8 ಬಾಕ್ಸರ್‌ಗಳು ಟೋಕಿಯೋ ಒಲಿಂಪಿಕ್‌ಗೆ ಅರ್ಹತೆ ಪಡೆದಂತಾಗಿದೆ. 2016ರ ಒಲಿಂಪಿಕ್ಸ್ ಕೂಟದಲ್ಲಿ ಭಾರತದ ಮೂವರು ಬಾಕ್ಸರ್‌ಗಳು ಮಾತ್ರ ಅರ್ಹತೆ ಪಡೆದಿದ್ದರು.