* ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಅದಿತಿ ಅಶೋಕ್‌* ಅದಿತಿ ಅಶೋಕ್ ಬೆಂಗಳೂರು ಮೂಲದ ಗಾಲ್ಫರ್* ಎರಡನೇ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಭಾರತ ಪ್ರತಿನಿಧಿಸಲಿರುವ ಅದಿತಿ

ಬೆಂಗಳೂರು(ಜೂ.30): ಮುಂಬರುವ ಟೋಕಿಯೋ ಒಲಿಂಪಿಕ್ಸ್‌ಗೆ ಬೆಂಗಳೂರು ಮೂಲದ ಅದಿತಿ ಅಶೋಕ್‌ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ಈ ಮೂಲಕ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಭಾರತದ ಮೊದಲ ಮಹಿಳಾ ಗಾಲ್ಫರ್‌ ಎನ್ನುವ ಗೌರವಕ್ಕೆ ಭಾಜನರಾಗಿದ್ದಾರೆ.

ಕಳೆದ 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಅದಿತಿ, ಸದ್ಯ 45ನೇ ಶ್ರೇಯಾಂಕವನ್ನು ಹೊಂದಿದ್ದು, ಇದೀಗ ಎರಡನೇ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಕಣಕ್ಕಿಳಿಯಲು ಟಿಕೆಟ್ ಪಕ್ಕಾ ಮಾಡಿಕೊಂಡಿದ್ದಾರೆ. 

ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆಗಿಟ್ಟಿಸಿಕೊಂಡ ಅದಿತಿ ಅಶೋಕ್‌ಗೆ ಅಭಿನಂದನೆಗಳು. ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಭಾರತದ ಮೊದಲ ಮಹಿಳಾ ಗಾಲ್ಫ್‌ ಆಟಗಾರ್ತಿ ಅದಿತಿ. ಇಂದು ಒಲಿಂಪಿಕ್ ಅಂತಿಮ ರಾರ‍ಯಂಕಿಂಗ್‌ ಬಿಡುಗಡೆಯಾಗಿದ್ದು, ಅದಿತಿ 45ನೇ ಸ್ಥಾನ ಪಡೆದಿದ್ದಾರೆ. ಟೋಕಿಯೋ ಒಲಿಂಪಿಕ್ಸ್‌ ಅದಿತಿ ಪಾಲ್ಗೊಳ್ಳುತ್ತಿರುವ ಎರಡನೇ ಒಲಿಂಪಿಕ್ಸ್ ಆಗಿದೆ ಎಂದು ಭಾರತೀಯ ಕ್ರೀಡಾ ಪ್ರಾಧಿಕಾರ(ಸಾಯ್) ಟ್ವೀಟ್‌ ಮಾಡಿದೆ.

Scroll to load tweet…

ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸುವುದು ನನ್ನ ಪಾಲಿಗೆ ಗೌರವದ ವಿಚಾರ. ರಿಯೋ ಒಲಿಂಪಿಕ್ಸ್‌ ನಿನ್ನೆ ಮುಗಿದಂತೆ ಅನಿಸುತ್ತಿದೆ. ನಾನು ಟೋಕಿಯೋ ಒಲಿಂಪಿಕ್ಸ್‌ನಲ್ಲಿ ನನ್ನ ಕ್ರೀಡೆಯನ್ನು ಅನಾವರಣ ಮಾಡಲು ಉತ್ಸುಕಳಾಗಿದ್ದೇನೆ ಎಂದು ಅದಿತಿ ಟ್ವೀಟ್‌ ಮಾಡಿದ್ದಾರೆ.

ಗಾಲ್ಫ್‌: ಟೋಕಿಯೋ ಒಲಿಂಪಿಕ್ಸ್‌ ಅರ್ಹತೆ ಗಳಿಸಿದ ಅನಿರ್ಬನ್‌ ಲಹಿರಿ

Scroll to load tweet…

ಕಳೆದ ವಾರವಷ್ಟೇ, ಭಾರತದ ಅಗ್ರಶ್ರೇಯಾಂಕಿತ ಗಾಲ್ಫರ್ ಅನಿರ್ಬನ್ ಲಹಿರಿ ಎರಡನೇ ಬಾರಿಗೆ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದುಕೊಂಡಿದ್ದರು. 33 ವರ್ಷದ ಅನಿರ್ಬನ್‌ 60ನೇ ರ‍್ಯಾಂಕಿಂಗ್‌ ಪಡೆಯುವ ಮೂಲಕ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆಗಿಟ್ಟಿಕೊಂಡಿದ್ದರು.

ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟವು ಜುಲೈ 23ರಿಂದ ಆಗಸ್ಟ್ 08ರವರೆಗೆ ನಡೆಯಲಿದೆ. ಕಳೆದ ವರ್ಷ ಆಯೋಜನೆಗೊಂಡಿದ್ದ ಒಲಿಂಪಿಕ್ಸ್ ಕ್ರೀಡಾಕೂಟವು ಕೋವಿಡ್ ಭೀತಿಯಿಂದಾಗಿ ಒಂದು ವರ್ಷ ಮುಂದೂಡಲಾಗಿತ್ತು.