ಗಾಲ್ಫ್: ಟೋಕಿಯೋ ಒಲಿಂಪಿಕ್ಸ್ ಅರ್ಹತೆ ಗಳಿಸಿದ ಅನಿರ್ಬನ್ ಲಹಿರಿ
* ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆಗಿಟ್ಟಿಸಿದ ಅನಿರ್ಬನ್ ಲಹಿರಿ
* ಸತತ ಎರಡನೇ ಬಾರಿಗೆ ಒಲಿಂಪಿಕ್ಸ್ ಟಿಕೆಟ್ ಖಚಿತಪಡಿಸಿಕೊಂಡ ಲಹಿರಿ
* ಮಹಿಳಾ ವಿಭಾಗದಿಂದ ಕರ್ನಾಟಕದ ಅದಿತಿ ಅಶೋಕ್ ಆಯ್ಕೆಯಾಗುವ ಸಾಧ್ಯತೆ
ನವದೆಹಲಿ(ಜೂ.23): ಭಾರತದ ಅನುಭವಿ ಅನುಭವಿ ಗಾಲ್ಫ್ ಪಟು ಅನಿರ್ಬನ್ ಲಹಿರಿ ಸತತ 2ನೇ ಬಾರಿಗೆ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಾರೆ.
ಭಾರತೀಯ ಗಾಲ್ಫರ್‌ಗಳ ಪೈಕಿ ಉತ್ತಮ ರ‍್ಯಾಂಕಿಂಗ್ ಹೊಂದಿರುವ ಕಾರಣ ಟೋಕಿಯೋ ಗೇಮ್ಸ್‌ಗೆ ಅವಕಾಶ ಸಿಕ್ಕಿದೆ. ಒಟ್ಟು 60 ಗಾಲ್ಫ್ ಆಟಗಾರರಿಗೆ ಅವಕಾಶ ಸಿಗಲಿದ್ದು, 60ನೇ ಸ್ಥಾನವನ್ನು ಲಹಿರಿ ಪಡೆದಿದ್ದಾರೆ. ವಿಶ್ವ ರ‍್ಯಾಂಕಿಂಗ್‌ನಲ್ಲಿ ಅನಿರ್ಬನ್ ಲಹರಿಯವರು 340ನೇ ಸ್ಥಾನದಲ್ಲಿದ್ದಾರೆ. ಮಹಿಳೆಯರ ವಿಭಾಗದಲ್ಲಿ ಕರ್ನಾಟಕದ ಅದಿತಿ ಅಶೋಕ್ ಅರ್ಹತೆ ಗಳಿಸುವ ನಿರೀಕ್ಷೆ ಇದೆ.
ಟೋಕಿಯೋ ಒಲಿಂಪಿಕ್ಸ್: ಭಾರತ ಹಾಕಿ ತಂಡಕ್ಕೆ ಮನ್‌ಪ್ರೀತ್ ನಾಯಕ
ವಿಂಬಲ್ಡನ್ ಅರ್ಹತಾ ಸುತ್ತು: ರಾಮ್‌ಗೆ ಜಯ
ಲಂಡನ್: ವಿಂಬಲ್ಡನ್ ಗ್ರ್ಯಾನ್ ಸ್ಲಾಂ ಅರ್ಹತಾ ಸುತ್ತಿನ ಪುರುಷರ ಸಿಂಗಲ್ಸ್‌ನಲ್ಲಿ ಭಾರತದ ರಾಮ್‌ಕುಮಾರ್ ರಾಮನಾಥನ್ 2ನೇ ಹಂತಕ್ಕೆ ಪ್ರವೇಶಿಸಿದ್ದಾರೆ. ಮೊದಲ ಪಂದ್ಯದಲ್ಲಿ ಸ್ಲೋವಾಕಿಯಾದ ಜೊಫೆಜ್ ಕೊವಾಲಿಕ್ ವಿರುದ್ಧ 6-3, 6-0 ಸೆಟ್‌ಗಳಲ್ಲಿ ಜಯಗಳಿಸಿದರು.
ಇದೇ ವೇಳೆ, ಪ್ರಜ್ನೇಶ್ ಗುಣೇಶ್ವರನ್ ಮೊದಲ ಪಂದ್ಯದಲ್ಲೇ ಸೋಲುಂಡರು. ಯುನೈಟೆಡ್ ಕಿಂಗ್‌ಡಮ್‌ನ ಆರ್ಥರ್ ಫೆರೆ ವಿರುದ್ಧ 1-6, 6-7 ಸೆಟ್‌ಗಳಲ್ಲಿ ಸೋತು ಹೊರಬಿದ್ದರು. ಮಹಿಳಾ ಸಿಂಗಲ್ಸ್‌ನಲ್ಲಿ ಅಂಕಿತಾ ರೈನಾ ಪ್ರಧಾನ ಸುತ್ತಿಗೇರಲು ಯತ್ನಿಸಲಿದ್ದಾರೆ.