ಭಾರತದ ಬ್ರ್ಯಾಂಡ್‌ ಸೆಟ್‌ Xolo ಕಂಪನಿ ZX ಎಂಬ ಹೊಸ ಮಾದರಿಯ ಡ್ಯುಯೆಲ್‌ ಕ್ಯಾಮೆರಾ ಸ್ಮಾರ್ಟ್‌ಫೋನ್‌ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ZX ಎರಡು ಮಾದರಿಯಲ್ಲಿ ಲಭ್ಯವಿದೆ.

4 GB RAM, 64 GB ಸ್ಟೋರೇಜ್‌ ಇರುವ ಫೋನ್‌ ಬೆಲೆ ರೂ.11,499. 6 GB RAM, 128 GB ಸ್ಟೋರೇಜ್‌ ಇರುವ ಫೋನ್‌ನ ಬೆಲೆ ರೂ.13,999. ಮೊಬೈಲ್‌ 6.22 ಎಚ್‌ಡಿ+ ಡಿಸ್‌ಪ್ಲೇ ಮತ್ತು ಗೊರಿಲ್ಲಾ ಗ್ಲಾಸ್‌ 3 ಹೊಂದಿದೆ. 

ಇದನ್ನೂ ಓದಿ: ಫಿಂಗರ್ ಪ್ರಿಂಟ್ ಸುರಕ್ಷತೆ ಇದ್ದರೆ ಸ್ಕ್ರೀನ್ ಶಾಟ್ ಬರಲ್ಲ!

ಗ್ರಾಹಕರಿಗೆ ಇಷ್ಟವಾಗುವಂತೆ 13+5 ಎಂಪಿ ಡ್ಯುಯೆಲ್‌ ರೇರ್‌ ಕ್ಯಾಮೆರಾ ಹಾಗೂ 16 MP ಫ್ರಂಟ್‌ ಕ್ಯಾಮೆರಾ ಹೊಂದಿದೆ. 3260 mAh ಬ್ಯಾಟರಿ ಸಾಮರ್ಥ್ಯವಿದ್ದು 2.0 GHz ಆಕ್ಟಾಕೋರ್‌ ಮೆಡಿಟೇಕ್‌ ಪ್ರೊಸೆಸರ್‌ ಇದೆ. ಮಿಡ್‌ನೈಟ್‌ ಬ್ಲ್ಯೂ ಮತ್ತು ಎಲೆಕ್ಟ್ರಿಕ್‌ ಬ್ಲ್ಯೂ ಬಣ್ಣದಲ್ಲಿ ಈ ಫೋನ್‌ ಅಮೆಜಾನ್‌ನಲ್ಲಿ ಏಪ್ರಿಲ್‌ 25ರಿಂದ ಲಭ್ಯವಿದೆ.