ನ್ಯೂಯಾರ್ಕ್: ತನ್ನ ವೇದಿಕೆ ಮೂಲಕ ಸುಳ್ಳು ಸುದ್ದಿಗಳ ಹರಡುವಿಕೆ ತಡೆಗೆ ಮುಂದಾಗಿರುವ ಫೇಸ್‌ಬುಕ್‌, ಮುಂದಿನ ದಿನಗಳಲ್ಲಿ ನಕಲಿ ಫೇಸ್‌ಬುಕ್‌ ಗ್ರೂಪ್‌ ಹಾಗೂ ಪೇಜ್‌ ಸ್ವತಃ ರದ್ದುಪಡಿಸುವ ನಿರ್ಧಾರಕ್ಕೆ ಬಂದಿದೆ.

ಇಂಥ ನಕಲಿ ಗ್ರೂಪ್‌ ಹಾಗೂ ಪೇಜ್‌ಗಳು ಸಮಾಜ ವಿರೋಧಿ ಅಥವಾ ಯಾವುದೇ ನಿಯಮಗಳನ್ನು ಉಲ್ಲಂಘಿಸದ ಹೊರತಾಗಿಯೂ, ಅವುಗಳ ನಿಷ್ಕ್ರೀಯ ಕ್ರಮದಿಂದ ಹಿಂದೆ ಸರಿಯುವುದಿಲ್ಲ ಎಂದಿದೆ. 

ಈ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಫೇಸ್‌ಬುಕ್‌ ವೇದಿಕೆಯಲ್ಲಿ ಅನುಮತಿಯಿಲ್ಲದ ದ್ವೇಷದ ಭಾಷಣಗಳು, ಗ್ರಾಫಿಕ್‌ ಉಲ್ಲಂಘನೆ, ಕಿರುಕುಳ, ತಂಟೆಕೋರ, ನಿಯಂತ್ರಿತ ಸರಕುಗಳು, ಬೆತ್ತಲೆ ಹಾಗೂ ಲೈಂಗಿಕ ಚಟುವಟಿಕೆಗಳು ಸೇರಿದಂತೆ ಇನ್ನಿತರ ವಿಚಾರಗಳನ್ನು ರದ್ದುಗೊಳಿಸಬಹುದಾದ ಅಂಶಗಳಲ್ಲಿ ಸೇರ್ಪಡೆ ಮಾಡಿಕೊಳ್ಳಲಾಗುತ್ತದೆ,’ ಎಂದು ಫೇಸ್‌ಬುಕ್‌ ಹೇಳಿದೆ.

ಈ ರೀತಿಯ ಕ್ರಮ ಕೈಗೊಳ್ಳುತ್ತಿರುವುದರಿಂದ ಈಗಾಗಲೆ ಹಲವು ಫೇಸ್ ಬುಕ್ ಬಳಕೆದಾರರು ತಮ್ಮ ಖಾತೆಗಳಿಗೆ ಲಾಗಿನ್ ಆಗುವಲ್ಲಿ ಸಮಸ್ಯೆ ಎದುರಿಸಿದ್ದಾರೆ.