48 ಮೆಗಾಪಿಕ್ಸೆಲ್ ಕ್ಯಾಮೆರಾ ಮೂಲಕ ಭಾರೀ ಸುದ್ದಿ ಮಾಡಿರುವ Xiaomi ಕಂಪನಿಯ Redmi Note 7S ಕೊನೆಗೂ ಭಾರತದ ಮಾರುಕಟ್ಟೆಗೆ ಎಂಟ್ರಿ ಕೊಡುತ್ತಿದೆ.

ಕಳೆದ ಫೆಬ್ರವರಿಯಲ್ಲಿ 48 ಮೆಗಾ ಪಿಕ್ಸೆಲ್ ಕ್ಯಾಮೆರಾವುಳ್ಳ Redmi Note 7 Proವನ್ನು Xiaomi ಬಿಡುಗಡೆ ಮಾಡಿತ್ತು. ಮೊತ್ತ ಮೊದಲಬಾರಿಗೆ ಇಷ್ಟೊಂದು ಮೆಗಾ ಪಿಕ್ಸೆಲ್ ಸಾಮರ್ಥ್ಯದ ಫೋನ್, ಮೊಬೈಲ್ ಮತ್ತು ಫೋಟೋ ಪ್ರಿಯರಲ್ಲಿ ಸಂಚಲನ ಹುಟ್ಟು ಹಾಕಿತ್ತು.

ಇದನ್ನೂ ಓದಿ | ಕೊನೆಗೂ 48 ಮೆಗಾಪಿಕ್ಸೆಲ್ ಕ್ಯಾಮೆರಾದ Redmi Note 7 Pro ಬಿಡುಗಡೆ; ಹೆಂಗೈತೆ? ಎಷ್ಟು ರೊಕ್ಕಾ ?

Redmi Note 7S ಸ್ಮಾರ್ಟ್‌ಫೋನ್ Redmi Note 7 Pro ರೀತಿಯಲ್ಲಿ ಡ್ಯುಯಲ್ ಕ್ಯಾಮೆರಾ ಹೊಂದಿದೆಯೆನ್ನಲಾಗುತ್ತಿದೆ.Redmi Note 7S ಬಗ್ಗೆ ಹೆಚ್ಚಿನ ಗುಟ್ಟನ್ನು Xiaomi ಕಂಪನಿಯು ಇನ್ನೂ ಬಿಟ್ಟುಕೊಟ್ಟಿಲ್ಲ. 

Xiaomi India ಮುಖ್ಯಸ್ಥ ಮನು ಕುಮಾರ್ ಜೈನ್ ಹೊಸ ಫೋನ್ ಬಿಡುಗಡೆ ದಿನಾಂಕವನ್ನು ಟ್ವೀಟ್ ಮಾಡಿದ್ದು,  ಮೇ 20ರಂದು Redmi Note 7S ಮಾರುಕಟ್ಟೆಗೆ ಪದಾರ್ಪಣೆ ಮಾಡಲಿದೆ.

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.