ಇದರ ಲುಕ್ ಬೇರೆನೇ, ಇದರ ಸ್ಟೈಲ್ ಬೇರೆನೇ! Xiaomiಯ ಹೊಸ ಫೋನ್ ಇದೇನೆ!
ಕೈಗೆಟಕುವ ಬೆಲೆಯಲ್ಲಿ ಸ್ಮಾರ್ಟ್ ಫೋನ್ ಗಳನ್ನು ತಯಾರಿಸುವ ಮೂಲಕ ಜನಪ್ರಿಯವಾಗಿರುವ Xiaomi ಕಂಪನಿಯು ಹೊಸ ಸೀರಿಸ್ ಫೋನ್ ಗಳನ್ನು ಬಿಡುಗಡೆ ಮಾಡಿದೆ. ಹೇಗಿದೆ? ಏನಿದೆ? ಬೆಲೆ ಎಷ್ಟು? ಇಲ್ಲಿದೆ ವಿವರ...
A2 ಸೀರೀಸ್‌ನಲ್ಲಿ ಯಶಸ್ಸು ಕಂಡ Xiaomi ಈಗ ಮತ್ತೊಂದು ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ಅದು A3 ಸೀರೀಸ್‌ನ ಹೊಸ ಸ್ಮಾರ್ಟ್‌ಫೋನ್. ಸ್ನ್ಯಾಪ್‌ಡ್ರಾಗನ್ 665 ಪ್ರೋಸೆಸರ್ ಇದರಲ್ಲಿದ್ದು, ಭಾರತದ ಸ್ಮಾರ್ಟ್‌ಫೋನ್‌ಗಳಲ್ಲೇ 665 ಪ್ರೊಸೆಸರ್ ಬಳಸಿದ ಎರಡನೇ ಕಂಪನಿ ಎಂಬ ಹೆಗ್ಗಳಿಕೆ Xiaomiಯದ್ದಾಗಿದೆ.
MI A3 ಫೋನ್ ಎರಡು ಮಾದರಿಯಲ್ಲಿ ಲಭ್ಯವಿದೆ. 4 GB ರಾರಯಮ್, 64GB ಸಾಮರ್ಥ್ಯದ ಫೋನ್ ರು. 12,999ಗೆ ಸಿಗಲಿದೆ. ಅಂತೆಯೇ 6GB ರಾರಯಮ್, 128GB ಸಾಮರ್ಥ್ಯದ ಫೋನ್ ರು. 15,999ಗೆ ದೊರೆಯಲಿದೆ.
ಬಿಳಿ, ನೀಲಿ, ಬೂದು ಮೂರು ಬಣ್ಣಗಳಲ್ಲಿ ಸದ್ಯಕ್ಕೆ ಫೋನ್‌ಗಳು ಲಭ್ಯವಿವೆ. ಡಿಸೈನ್, ಸ್ಟೈಲ್, ಲುಕ್‌ಗೆ ಬೆಸ್ಟ್ ಎನ್ನುತ್ತಿದೆ ಕಂಪನಿ. ಕ್ವಾಲ್‌ಕಮ್ ಸ್ನ್ಯಾಪ್‌ಡ್ರಾಗನ್ 665 ಪ್ರೊಸೆಸರ್ ಬಳಸಲಾಗಿದ್ದು, 6.8 ಇಂಚಸ್‌ನ ಡಿಸ್‌ಪ್ಲೇ ಕಾಣಬಹುದು.
ಇದನ್ನೂ ಓದಿ | ಮತ್ತಷ್ಟು ಹೊಸ ಫೀಚರ್‌ಗಳನ್ನು ತರಲಿದೆ ವಾಟ್ಸ್ಯಾಪ್! ಬೆರಳಲ್ಲೇ ಲಾಕಪ್!
ಸಿನಿಮಾ ನೋಡುವುದಕ್ಕೆ, ಗೇಮಿಂಗ್‌ಗೆ ಬೆಸ್ಟ್. ಫ್ರಂಟ್ ಹಾಗೂ ಬ್ಯಾಕ್ ಎರಡರಲ್ಲೂ ಗೊರಿಲ್ಲಾ ಗ್ಲಾಸ್ 5 ಅನ್ನು ಬಳಸಲಾಗಿದೆ. ಟೈಪ್-ಸಿ ಫಾಸ್ಟ್ ಚಾರ್ಜಿಂಗ್‌ನ 4030mAh ಬ್ಯಾಟರಿ ಸಾಮರ್ಥ್ಯವನ್ನು ಈ ಮೊಬೈಲ್ ಹೊಂದಿದೆ.
ಇನ್ನು ಕ್ಯಾಮೆರಾ ವಿಚಾರಕ್ಕೆ ಬಂದರೆ ಹಿಂಬದಿಯಲ್ಲಿ AI ಮೂರು ಕ್ಯಾಮೆರಾ ಕಾಣಬಹುದಾಗಿದ್ದು ಅವು ಕ್ರಮವಾಗಿ 48ಎಂಪಿ, 8ಎಂಪಿ, 2ಎಂಪಿ ಇವೆ.. ಮುಂಬದಿ ರೆಡ್ ಮಿ 7 ಪ್ರೊಗೆ ಹೋಲುವಂತೆ 32 ಎಂಪಿಯ ಒಂದು ಕ್ಯಾಮೆರಾ ಇದೆ.