Asianet Suvarna News Asianet Suvarna News

ಮತ್ತಷ್ಟು ಹೊಸ ಫೀಚರ್‌ಗಳನ್ನು ತರಲಿದೆ ವಾಟ್ಸ್ಯಾಪ್‌! ಬೆರಳಲ್ಲೇ ಲಾಕಪ್!

ವಾಟ್ಸ್ಯಾಪ್‌ ಕಾಲ ಕಾಲಕ್ಕೆ ಹೊಸ ಹೊಸ ಫೀಚರ್‌ಗಳನ್ನು ಆ್ಯಡ್‌ ಮಾಡುತ್ತಾ ತನ್ನ ಗ್ರಾಹಕರಿಗೆ ಗರಿಷ್ಟಮಟ್ಟದ ಸೇವೆ ನೀಡಲು ಮುಂದಾಗುತ್ತಲೇ ಇದೆ. ಈ ಸಾಲಿಗೆ ಈಗ ಮತ್ತೆ ಮೂರು ವಿಶೇಷ ಫೀಚರ್‌ಗಳು ಸದ್ಯದಲ್ಲಿಯೇ ಸೇರ್ಪಡೆಯಾಗಲಿವೆ. ಆ ಮೂಲಕ ವಾಟ್ಸಪ್‌ ಮತ್ತುಷ್ಟುಬಳಕೆದಾರರ ಸ್ನೇಹಿಯಾಗಲಿದ್ದು, ಹೆಚ್ಚಿನ ಭದ್ರತೆ, ಫೇಕ್‌ ನ್ಯೂಸ್‌ಗಳ ಕಾಟವೂ ತಪ್ಪಲಿದೆ.
 

WhatsApp To Introduce New Features Including Fingerprint Lock
Author
Bengaluru, First Published Aug 22, 2019, 8:06 PM IST

ಫಿಂಗರ್‌ಪ್ರಿಂಟ್‌ ಲಾಕ್‌:

ವಾಟ್ಸಪ್‌ ಬಳಕೆದಾರರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿದ್ದು, ಅದರ ಮುಂದುವರೆದ ಭಾಗವಾಗಿ ಫಿಂಗರ್‌ಪ್ರಿಂಟ್‌ ಲಾಕ್‌ ವ್ಯವಸ್ಥೆಯನ್ನು ಪರಿಚಯಿಸಲು ಮುಂದಾಗಿದೆ. ಐಒಎಸ್‌ ಮತ್ತು ಆ್ಯಂಡ್ರಾಯ್ಡ್‌ ಮೊಬೈಲ್‌ ಬಳಕೆದಾರರು ಮುಂದಿನ ವಾಟ್ಸಪ್‌ ಅಪ್‌ಡೇಟ್‌ಗಳಲ್ಲಿ ಈ ಸೇವೆಯನ್ನು ಪಡೆಯಬಹುದು.

ಇದನ್ನೂ ಓದಿ | ಆನ್‌ಲೈನ್ ಬ್ಯಾಂಕ್ ಆಯ್ಕೆ ಮಾಡುವಾಗ ಈ ವಿಷಯಗಳನ್ನು ಗಮನಿಸಿ!

ಫೇಕ್‌ ನ್ಯೂಸ್‌ ಪತ್ತೆಗೆ ಮತ್ತೊಂದು ದಾರಿ:

ಹಿಂದೆಲ್ಲಾ ವಾಟ್ಸಪ್‌ ಮೂಲಕ ಫೇಕ್‌ ನ್ಯೂಸ್‌ಗಳನ್ನು ಹರಡಲಾಗುತ್ತಿತ್ತು. ಅದಕ್ಕಾಗಿಯೇ ಫಾರ್ವರ್ಡ್‌ ಮೆಸೇಜ್‌ಗಳನ್ನು ಪತ್ತೆ ಹಚ್ಚಲು ಹೊಸ ಫೀಚರ್‌ಗಳನ್ನು ವಾಟ್ಸಪ್‌ ಪರಿಚಯಿಸಿತ್ತು. ಇದರ ಮೂಲಕ ಫಾರ್ವರ್ಡ್‌ ಆದ ಮೆಸೇಜ್‌ಗಳ ಮೇಲೆ ಫಾರ್ವರ್ಡ್‌ ಎನ್ನುವ ಲೇಬಲ್‌ ಇರುತ್ತಿತ್ತು. ಇದರ ಜೊತೆಗೆ ಹೊಸ ಅಪ್‌ಡೇಟ್‌ನಲ್ಲಿ ಐದಕ್ಕಿಂತ ಹೆಚ್ಚು ಬಾರಿ ಫಾರ್ವರ್ಡ್‌ ಆದ ಮೆಸೇಜ್‌ಗಳ ಮೇಲೆ ಫಾರ್ವಡ್‌ ಮೆನಿ ಟೈಮನ್ಸ್‌ ಎನ್ನುವ ಲೇಬಲ್‌ ಕಾಣಿಸಿಕೊಳ್ಳಲಿದೆ.

ಮೊಬೈಲ್‌ಗೆ ಸತತವಾಗಿ ಆಡಿಯೋ ಮೆಸೇಜ್‌ಗಳನ್ನು ಕಳಿಸಿದರೆ ಅದನ್ನು ಒಂದೊಂದಾಗಿ ಡೌನ್‌ಲೋಡ್‌ ಮಾಡಿಕೊಂಡು ಕೇಳುವ ಅಗತ್ಯ ಹೊಸ ಫೀಚರ್‌ನಲ್ಲಿ ಇಲ್ಲವಾಗುತ್ತದೆ. ಬದಲಾಗಿ ಧ್ವನಿಯನ್ನು ಗ್ರಹಿಸಿ ಸ್ವಯಂಚಾಲಿತವಾಗಿ ಆಡಿಯೋಗಳು ಡೌನ್‌ಲೋಡ್‌ ಆಗುವುದರ ಜೊತೆಗೆ ಸರಿಯಾದ ಕ್ರಮದಲ್ಲಿ ಪ್ಲೇ ಆಗಲಿವೆ. ಇಷ್ಟೆಲ್ಲಾ ಹೊಸ ಫೀಚರ್‌ ಇರುವ ವಾಟ್ಸಪ್‌ ಕೆಲವೇ ತಿಂಗಳಲ್ಲಿ ಬಳಕೆದಾರರಿಗೆ ದೊರೆಯಲಿದೆ.

Follow Us:
Download App:
  • android
  • ios