ಬಳಕೆದಾರರ ಅನುಕೂಲ ಹಾಗೂ ಅವಶ್ಯಕತೆಗೆ ತಕ್ಕಂತೆ ವಾಟ್ಸಪ್ ಹೊಸ ಸೌಲಭ್ಯವನ್ನು ನೀಡುತ್ತಾ ಬಂದಿದೆ.  ಟೆಕ್ಸ್ಟ್ ಸಂದೇಶದಿಂದ ಆರಂಭವಾದ ಈ ಸೇವೆ ಹಣಪಾವತಿಯವರೆಗೂ ಬಂದು ನಿಂತಿದೆ.

ವಾಟ್ಸಪ್ ಭಾರತದಲ್ಲಿ ತನ್ನ ‘ವಾಟ್ಸಪ್ ಪೇ’ ಪಾವತಿ ಸೇವೆಯನ್ನು ಬೀಟಾ ಆವೃತ್ತಿಯಲ್ಲಿ ಪರೀಕ್ಷಿಸುತ್ತಿದ್ದು, ಇನ್ನೂ ಪೂರ್ಣ ಪ್ರಮಾಣದಲ್ಲಿ ಅನುಮತಿ ಸಿಕ್ಕಿಲ್ಲ. National Payment Corporation of India (NPCI)ವು ಕಠಿಣ ನಿಯಮಗಳು ರೂಪಿಸಿರುವ ಹಿನ್ನೆಲೆಯಲ್ಲಿ, ಅಂತಿಮ  ಆವೃತ್ತಿಯನ್ನು ಇನ್ನೂ ಬಿಡುಗಡೆ ಮಾಡಿಲ್ಲ.

ಇದನ್ನೂ ಓದಿ | ಇನ್ನೊಂದು ಟೆನ್ಶನ್ ಕಮ್ಮಿ! ಬರ್ತಿದೆ WhatsApp ಹೊಸ ಫೀಚರ್

ಕಳೆದ ವರ್ಷ ಫೆಬ್ರವರಿಯಲ್ಲೇ ಬೀಟಾ ವರ್ಶನ್ ಬಿಡುಗಡೆಯಾಗಿದ್ದರೂ, ಸುಮಾರು 1 ಮಿಲಿಯನ್ ಬಳಕೆದಾರರು ಪರೀಕ್ಷಾರ್ಥವಾಗಿ ಬಳಸಿದ್ದಾರೆ.  ರಿಸರ್ವ್ ಬ್ಯಾಂಕ್ ನಿಯಮಾವಳಿಗಳು ಸಂಪೂರ್ಣವಾಗಿ ಪಾಲನೆಯಾಗುವವರೆಗೆ ಅನುಮತಿಗಾಗಿ ಕಾಯಬೇಕಾಗಿದೆ.

ಈ ನಿಟ್ಟಿನಲ್ಲಿ ಬೇಕಾಗಿರುವ ಅಗತ್ಯ ದಾಖಲೆಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್‌ಗೆ ವಾಟ್ಸಪ್ ಕಂಪನಿಯು ಸಲ್ಲಿಸುವ ಪ್ರಕ್ರಿಯೆ ನಡೆಯುತ್ತಿದೆ.  

ಒಂದು ಅಂದಾಜಿನ ಪ್ರಕಾರ ಫೇಸ್ಬುಕ್ ಒಡೆತನದ ವಾಟ್ಸಪ್ ಭಾರತದಲ್ಲಿ ಸುಮಾರು 400 ಮಿಲಿಯನ್ ಬಳಕೆದಾರರನ್ನು ಹೊಂದಿದೆ.