ಇನ್ನೊಂದು ಟೆನ್ಶನ್ ಕಮ್ಮಿ! ಬರ್ತಿದೆ WhatsApp ಹೊಸ ಫೀಚರ್

ಹೊಸ ಹೊಸ ಫೀಚರ್‌ಗಳ ಸರಣಿಯನ್ನು ಮುಂದುವರಿಸಿರುವ ಫೇಸ್ಬುಕ್ ಒಡೆತನದ ಇನ್ಸ್ಟಂಟ್ ಮೆಸೇಜಿಂಗ್ ಸೇವೆ ವಾಟ್ಸಪ್, ಮತ್ತೊಂದು ಹೊಸ ಸೌಲಭ್ಯ ಪರಿಚಯಿಸಲು ಮುಂದಾಗಿದೆ.   

WhatsApp To Introduce Voice Preview Feature Soon

ಯಾರೇ ಆಗಲಿ, ಸ್ಪರ್ಧಾತ್ಮಕ ಯುಗದಲ್ಲಿ ಪ್ರಸ್ತುತತೆ ಹೊಂದಿರಬೇಕಾದರೆ ಕಾಲಕ್ಕೆ ತಕ್ಕಂತೆ ಬದಲಾಗಬೇಕು. ಇದು ದೊಡ್ಡ ದೊಡ್ಡ ಕಂಪನಿಗಳಿಗೂ ಅನ್ವಯಿಸುತ್ತದೆ.  

ತಮ್ಮ ಬಳಕೆದಾರರನ್ನು ಹಿಡಿದಿಟ್ಟುಕೊಳ್ಳಬೇಕಾದರೆ, ಸೇವೆಯನ್ನು ವಿಸ್ತರಿಸಬೇಕಾದರೆ, ಅವರಿಗೆ ಹೊಸತನವನ್ನು ಕೊಡಬೇಕು. ಬದಲಾದ ಕಾಲಕ್ಕೆ ತಕ್ಕಂತೆ ಸೌಲಭ್ಯವನ್ನು ಕೊಡಬೇಕು.  

ಟೆಕ್ಸ್ಟ್ ಸಂದೇಶ ಕಳುಹಿಸುವ ಸೇವೆಯನ್ನು ಆರಂಭಿಸಿದ ವಾಟ್ಸಪ್, ಇವತ್ತು ಏನಾಗಿದೆ ಎಂಬುವುದು ಎಲ್ಲರೂ ಬಲ್ಲ ವಿಚಾರ. ತನ್ನ ಸೇವೆಯ ಬುಟ್ಟಿಗೆ ಹೊಸ ಹೊಸ ಫೀಚರ್‌ಗಳನ್ನು ವಾಟ್ಸಪ್ ಸೇರಿಸುತ್ತಾ ಬಂದಿದೆ. ಈಗ ಮತ್ತೊಂದು ಹೊಸ ಫೀಚರ್ ಪರಿಚಯಿಸಲು ವಾಟ್ಸಪ್ ಮುಂದಾಗಿದೆ.

ಇದನ್ನೂ ಓದಿ | ಕದ್ದುಮುಚ್ಚಿ ಪೋರ್ನ್ ನೋಡ್ತೀರಾ? ನಿಮ್ಮೇಲೆ ಕಣ್ಣಿಟ್ಟಿದ್ದಾರೆ ಇವ್ರು!

ಈಗಾಗಲೇ ಮೆಸೇಜ್ ಮತ್ತು ಇಮೇಜ್ ಪ್ರಿವ್ಯೂ ನೋಡುವ ಸೌಲಭ್ಯ ವಾಟ್ಸಪ್‌ನಲ್ಲಿದೆ. ಈಗ ಒಂದು ಹೆಜ್ಜೆ ಮುಂದಿಟ್ಟಿರುವ ವಾಟ್ಸಪ್, ಆಡಿಯೋ ಫೈಲ್‌ಗಳ ಪ್ರಿವ್ಯೂ ಕೂಡಾ ಒದಗಿಸಲಿದೆ ಎಂದು WABetainfo ಹೇಳಿದೆ.  

ಹಾಗಾಗಿ, ನಿಮಗೆ ಬಂದಿರುವ ಎಲ್ಲಾ ಆಡಿಯೋ ಕ್ಲಿಪ್‌ಗಳನ್ನು ಡೌನ್‌ಲೋಡ್ ಮಾಡುವ ಕಿರಿಕಿರಿ ತಪ್ಪುತ್ತೆ. ಪ್ರಿವ್ಯೂ ನೋಡಿಕೊಂಡು, ಅಗತ್ಯ ಇದ್ದರೆ ಡೌನ್‌ಲೋಡ್ ಮಾಡಿದರಾಯಿತು. ಸಮಯವೂ ಉಳಿತಾಯ, ಡೇಟಾವೂ ಉಳಿತಾಯ! ಸದ್ಯಕ್ಕೆ, ಇದು ಐಫೋನ್‌ಗಳಿಗಾಗಿ ಪರೀಕ್ಷಿಸಲಾಗುತ್ತಿದೆ.  

ಆದರೆ ಇದು ಯಾವಾಗ ಬಿಡುಗಡೆಯಾಗುತ್ತೆ ಎಂಬುವುದರ ಬಗ್ಗೆ ಕಂಪನಿಯು ಯಾವುದೇ ಸುಳಿವನ್ನು ಕೊಟ್ಟಿಲ್ಲ.   

Latest Videos
Follow Us:
Download App:
  • android
  • ios