ಬ್ಯಾನ್ ನಂತರ ಟಿಕ್ ಟಾಕ್ ಮೊದಲ ಪ್ರತಿಕ್ರಿಯೆ, ಅಯ್ಯಪ್ಪಾ!
ಟಿಕ್ ಟಾಕ್ ಸೇರಿ ಚೀನಾದ 59 ಅಪ್ಲಿಕೇಶನ್ ಗಳಿಗೆ ಕೇಂದ್ರ ಸರ್ಕಾರದ ಮುಕ್ತಿ/ ನಿಷೇಧದ ನಂತರ ಟಿಕ್ ಟಾಕ್ ಇಂಡಿಯಾ ಮೊದಲ ಪ್ರತಿಕ್ರಿಯೆ/ ನಾವು ಭಾರತದ ಡೇಟಾ ಚೀನಾದೊಂದಿಗೆ ಶೆರ್ ಮಾಡಿಲ್ಲ
ನವದೆಹಲಿ(ಜೂ. 30) ಟಿಕ್ ಟಾಕ್ ಸೇರಿದಂತೆ ಚೀನಾದ 59 ಅಪ್ಲಿಕೇಶನ್ ಗಳಿಗೆ ಕೇಂದ್ರ ಸರ್ಕಾರ ಮುಕ್ತಿ ಕಾಣಿಸಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಟಿಕ್ ಟಾಕ್ ಇಂಡಿಯಾ ಸರ್ಕಾರ ಸ್ಪಷ್ಟನೆ ನೀಡಲು ಅವಕಾಶ ನೀಡಿದೆ ಎಂದಿದೆ.
ಈ ಆದೇಶವನ್ನು ಅನುಸರಿಸುವ ಪ್ರಕ್ರಿಯೆಯಲ್ಲಿದ್ದೇವೆ ಎಂದು ಟಿಕ್ ಟಾಕ್ ಇಂಡಿಯಾದ ಮುಖ್ಯಸ್ಥ ನಿಖಿಲ್ ಗಾಂಧಿ ಹೇಳಿದ್ದಾರೆ. ಭಾರತ ಸರ್ಕಾರ ನಿಷೇಧಕ್ಕೆ ಸಂಬಂಧಪಟ್ಟವರನ್ನು ಆಹ್ವಾನಿಸಿದ್ದು, ನಿಷೇಧದ ಆದೇಶಕ್ಕೆ ಪ್ರತಿಕ್ರಿಯೆ ನೀಡಲು ಹಾಗೂ ಸಂಸ್ಥೆಗಳಿಂದ ಸ್ಪಷ್ಟೀಕರಣ ನೀಡುವುದಕ್ಕೆ ಅವಕಾಶ ಇದೆ ಎಂದು ತಿಳಿಸಿದ್ದಾರೆ.
ಟಿಕ್ ಟಾಕ್ ಹೋಲುವ ಬೆಡಗಿಯ ಖಾಸಗಿ ವಿಡಿಯೋ ವೈರಲ್
ಟಿಕ್ ಟಾಕ್ ಭಾರತದ ಗ್ರಾಹಕರ ಡಾಟಾವನ್ನು ಚೀನಾ ಸರ್ಕಾರವೂ ಸೇರಿದಂತೆ ಯಾವುದೇ ವಿದೇಶಿ ಸರ್ಕಾರಗಳೊಂದಿಗೆ ಹಂಚಿಕೊಳ್ಳುತ್ತಿಲ್ಲ, ಭಾರತದ ಕಾನೂನಿಗೆ ಅನುಗುಣವಾಗಿಯೇ ಕೆಲಸ ಮಾಡಿಕೊಂಡು ಬಂದಿದ್ದೇವೆ ಎಂದು ಗಾಂಧಿ ಹೇಳಿದ್ದಾರೆ.
ಭಾರತದ ಹದಿನಾಲ್ಕು ಭಾಷೆಗಳಲ್ಲಿ ಟಿಕ್ ಟಾಕ್ ಲಭ್ಯವಿತ್ತು. ಶಿಕ್ಷಣ ಮತ್ತು ಮನರಂಜನೆಯ ಕೆಲಸ ಮಾಡುತ್ತಿತ್ತು ಎಂಬುದನ್ನು ಒತ್ತಿ ಹೇಳಿದ್ದಾರೆ.
ಟಿಕ್ ಟಾಕ್ ಬ್ಯಾನ್ ಆರಂಭದಿಂದ ಅಂತ್ಯದವರೆಗೆ
ಭಾರತದ ಗ್ರಾಹಕರ ಡೇಟಾ ಸೋರಿಕೆಯಾಗುತ್ತಿದೆ ಎಂಬ ಆರೋಪ ಇಟ್ಟುಕೊಂಡು ಭಾರತ ಸರ್ಕಾರ ಚೀನಾ ಅಪ್ಲಿಕೇಶನ್ ಗಳಿಗೆ ಅಂತ್ಯ ಹಾಡಿತ್ತು. ಭಾರತ ಮತ್ತು ಚೀನಾ ಗಡಿಯಲ್ಲಿನ ಸಂಘರ್ಷದ ನಂತರ ಈ ಪ್ರಕ್ರಿಯೆ ಜಾರಿಯಾಗಿದ್ದು ಸರ್ಕಾರದ ಕ್ರಮವನ್ನು ದೊಡ್ಡ ಮಟ್ಟದಲ್ಲಿ ಸಮರ್ಥನೆ ಮಾಡಿಕೊಳ್ಳಲಾಗಿದೆ.