ತರುಣ ತರುಣಿಯರಿಗೆ ಟಿಕ್‌ಟಾಕ್ ಕಾರ್ಯಾಗಾರ! ಕೂಡ್ಲೇ ಫೋನೆತ್ತಿಕೊಳ್ಳಿ ಮತ್ತೇಕೆ ತಡ?
ಈಗ ಎಲ್ಲಿ ನೋಡಿದರೂ ಟಿಕ್ ಟಾಕ್‌ನದ್ದೇ ಟಾಕ್; ಮೀಸೆ ಚಿಗುರುವ ಹುಡುಗರಿಂದ ಹಿಡಿದು ಬೊಚ್ಚುಬಾಯಿ ಮುದುಕರವರೆಗೆ ಈ ಸೋಶಿಯಲ್ ಮೀಡಿಯಾ ಪ್ಲಾಟ್ ಫಾರಂ ಜನಪ್ರಿಯವಾಗಿದೆ. ಅದರರ್ಥ ಇದನ್ನ ತಪ್ಪು ಕೆಲಸಕ್ಕಾಗಿ ಬಳಸಬಾರದಲ್ವಾ? ಇಲ್ಲಿದೆ ಹೆಚ್ಚಿನ ವಿವರ...
ಟಿಕ್‌ಟಾಕ್ ಬ್ಯಾನ್ ಆಗುತ್ತದೆ ಎಂಬ ಸುದ್ದಿಯ ಬೆನ್ನಿಗೇ ಕೆಲವು ದಿನಗಳ ಮಟ್ಟಿಗೆ ಟಿಕ್‌ಟಾಕ್ ಡೌನ್‌ಲೋಡ್ ಆಗುವುದು ನಿಂತೇ ಹೋಗಿತ್ತು.
ಮತ್ತೆ ಅದು ಪ್ಲೇಸ್ಟೋರ್‌ನಲ್ಲಿ ಕಾಣಿಸಿಕೊಂಡಾಗ ತರುಣ ತರುಣಿಯರು ನಿಟ್ಟುಸಿರಿಟ್ಟರು. ಆ ನಂತರವೂ ಟಿಕ್‌ಟಾಕ್ ಬ್ಯಾನ್ ಆಗ್‌ಬೇಕ್ ಎಂದು ಅನೇಕರು ಸಾಮಾಜಿಕ ತಾಣಗಳಲ್ಲಿ ಘರ್ಜಿಸುತ್ತಲೇ ಇದ್ದಾರೆ. ಅವರಿಗೋಸ್ಕರ ಇದೀಗ ಸ್ವತಃ ಟಿಕ್‌ಟಾಕ್ ಒಂದು ಅಭಿಯಾನ ಆರಂಭಿಸಿದೆ.
‘ವೇಯ್ಟ್ ಎ ಸೆಕೆಂಡ್ ಟು ರಿಫ್ಲೆಕ್ಟ್’ ಎನ್ನುವುದು ಈ ಡಿಜಿಟಲ್ ಬಳಕೆದಾರ ಜಾಗೃತಿ ಕಾರ್ಯಕ್ರಮದ ಹೆಸರು. ಆನ್‌ಲೈನಿನಲ್ಲಿ ಏನೇ ಪೋಸ್ಟ್ ಮಾಡುವ ಮೊದಲು ಒಂದು ಕ್ಷಣ ಯೋಚಿಸಿ, ನಂತರ ಪೋಸ್ಟ್ ಮಾಡಿ ಅನ್ನುವುದು ಇದರ ಥೀಮ್.
ಇದನ್ನೂ ಓದಿ | ಇವು ನಿಮ್ಮ ಆರೋಗ್ಯಕ್ಕೆ ಡೇಂಜರಸ್ ಪೋನ್‌ಗಳಂತೆ! ಕೋರ್ಟ್‌ನಲ್ಲಿ ಕೇಸ್ ದಾಖಲು
ಈ ಕುರಿತು ಭಾರತದ ಹತ್ತು ರಾಜ್ಯಗಳಲ್ಲಿ ತಳಮಟ್ಟದ ಜಾಗೃತಿ ಕಾರ್ಯಾಗಾರಗಳನ್ನೂ ಟಿಕ್‌ಟಾಕ್ ನಡೆಸಲಿದೆ. ಡಿಜಿಟಲ್ ಎಂಪವರ್‌ಮೆಂಟ್ ಫೌಂಡೇಶನ್ ಇದರಲ್ಲಿ ಕೈ ಜೋಡಿಸಲಿದೆ.
ಕೆಟ್ಟದ್ದನ್ನು ಪೋಸ್ಟ್ ಮಾಡಬೇಡಿ, ಕೆಟ್ಟದ್ದನ್ನು ಶೇರ್ ಮಾಡಬೇಡಿ. ಕೆಟ್ಟಕಾಮೆಂಟ್ ಮಾಡಬೇಡಿ ಎಂಬ ಸ್ಲೋಗನ್ನಿನೊಂದಿಗೆ ಪೋಸ್ಟ್ ಮಾಡುವ ಮೊದಲು ಒಂದು ಕ್ಷಣ ಯೋಚಿಸುವುದನ್ನು ಯುವಜನತೆಗೆ ಕಲಿಸಿಕೊಡುವುದು ಇದರ ಉದ್ದೇಶ.
ಈ ಕುರಿತು ಹೆಚ್ಚಿನ ಮಾಹಿತಿಗೆ waitasec.in ನೋಡಬಹುದು.