ವಾಟ್ಸಾಪ್’ನಲ್ಲಿ ಗ್ರೂಪ್ ವಿಡಿಯೋ ಕಾಲ್ ಮಾಡಿ, ಸ್ನೇಹಿತರೊಂದಿಗೆ ಎಂಜಾಯ್ ಮಾಡಿ

Video Call Option in WhatsApp
Highlights

ಅಮೆರಿಕಾದಲ್ಲಿ ಒಬ್ಬ, ಇಂಗ್ಲೆಂಡ್'ನಲ್ಲಿ ಮತ್ತೊಬ್ಬ, ರಷ್ಯಾದಲ್ಲಿ   ಇನ್ನೊಬ್ಬನೊಂದಿಗೆ ನೀವು ಒಟ್ಟಿಗೆ ಕುಳಿತು ವಿಡಿಯೋ ಕಾಲ್ ಮೂಲಕ ಮಾತನಾಡುವ ದೊಡ್ಡ ಅವಕಾಶದ  ಬಾಗಿಲು ತೆರೆಯುತ್ತಿವೆ ವಾಟ್ಸಪ್ ಮತ್ತು ಇನ್‌ಸ್ಟಾಗ್ರಾಂ. ಸದ್ಯ ಒಬ್ಬರೊಂದಿಗೆ ವಿಡಿಯೋ ಕಾಲ್ ಮೂಲಕ ಮಾತನಾಡಲು ಸಾಧ್ಯವಾಗಿದ್ದ  ತಂತ್ರಜ್ಞಾನ ಈಗ ಒಟ್ಟಿಗೆ ನಾಲ್ಕು ಜನರು ಕುಳಿತು ಮಾತನಾಡಬಹುದಾದ ಸೌಲಭ್ಯಕ್ಕೆ ವಿಸ್ತರಣೆಯಾಗುತ್ತಿದೆ.

ಫೇಸ್‌ಬುಕ್ ಒಡೆತನದಲ್ಲಿಯೇ ಇರುವ ಈ ಎರಡು ಕಂಪನಿಗಳು ಏಕಕಾಲದಲ್ಲಿ ಈ ಸೇವೆ ಒದಗಿಸುತ್ತಿರುವುದು ವಿಶೇಷ. ಮೆಸೆಂಜರ್ ಮತ್ತು ವಾಟ್ಸಪ್‌ಗಳಲ್ಲಿ ಈಗಾಗಲೇ ಒಬ್ಬರಿಗೆ ವಿಡಿಯೋ ಕಾಲ್ ಮಾಡುವ ಅವಕಾಶವಿದೆ. ಈಗ ನಾಲ್ಕು  ಜನರೊಂದಿಗೆ ಏಕಕಾಲದಲ್ಲಿ ವಿಡಿಯೋ ಕಾಲ್ ಮಾಡುವ ಸೌಲಭ್ಯ ನೀಡುವ ಕುರಿತಂತೆ ಫೇಸ್‌ಬುಕ್ ಸಂಸ್ಥಾಪಕ  ಮಾರ್ಕ್ ಜುಗರ್‌ಬರ್ಗ್ ಹೇಳಿಕೊಂಡಿದ್ದಾರೆ. ಆದರೆ ಇದೇ ಫೈನಲ್ ಅಲ್ಲ. ಸದ್ಯ ವಿಡಿಯೋ ಕಾಲ್ ಮಿತಿಯನ್ನು ನಾಲ್ಕು ಜನರಿಗೆ ನಿಗದಿ ಮಾಡಲಾಗಿದ್ದು, ಮುಂದೆ ಇದರ ಸಂಖ್ಯೆ ಇನ್ನಷ್ಟು ಹೆಚ್ಚಲಿದೆ ಎನ್ನುವ ಬಗ್ಗೆಯೂ ಕಂಪನಿ ಹೇಳಿಕೊಂಡಿದೆ. 

ತಿಂಗಳೊಳಗೆ ವಾಟ್ಸಪ್ ಗ್ರೂಪ್ ವಿಡಿಯೋ ಕಾಲ್: 
ಇದೇ ತಿಂಗಳ ಅಂತ್ಯದೊಳಗೆ ವಾಟ್ಸಪ್ ಏಕಕಾಲದಲ್ಲಿ  ನಾಲ್ಕು ಜನರು ಒಟ್ಟಿಗೆ ವಿಡಿಯೋ ಕಾಲ್ ಮಾಡುವ ಸೇವೆ ಒದಗಿಸಲು ಸಕಲ ಸಿದ್ಧತೆ ಮಾಡಿಕೊಂಡಿದೆ. ಪ್ರಸ್ತುತ  ದಿನಕ್ಕೆ ಎರಡು ಬಿಲಿಯನ್‌ಗೂ ಅಧಿಕ ಸಂಖ್ಯೆಯ ಬಳಕೆದಾರರು ವಾಟ್ಸಪ್  ವಿಡಿಯೋ ಮತ್ತು ಆಡಿಯೋ ಕಾಲ್  ಸೇವೆ ಬಳಕೆ ಮಾಡುತ್ತಿದ್ದಾರೆ. ನೂತನ ತಂತ್ರಜ್ಞಾನದಿಂದಾಗಿ ಮುಂದೆ ಈ ಸೇವೆ ಇನ್ನಷ್ಟು ವಿಸ್ತಾರಗೊಳ್ಳುತ್ತದೆ ಎನ್ನುವುದು ಜುಕರ್‌ಬರ್ಗ್ ಅವರ ಆಶಯ. ಇದರ ಜೊತೆಗೆ ಮೂರನೇ ವ್ಯಕ್ತಿ ನೋಡಬಹುದಾದ ಸ್ಟಿಕ್ಕರ್ಸ್ ಶೇರಿಂಗ್, ಸ್ಟೇಟಸ್‌ನಲ್ಲಿಯೂ ಸಾಕಷ್ಟು  ಬದಲಾವಣೆಗಳು ಹೊಸ ಅಪ್ ಡೇಟ್‌ನೊಂದಿಗೆ ಸಿಗಲಿವೆ.

loader