ಬೆಂಗಳೂರು(ಜೂ.05): ‘ಅವಶ್ಯಕತೆ ಆವಿಷ್ಕಾರದ ತಾಯಿ..’ ಎಂಬ ಗಾದೆ ಮಾತೊಂದಿದೆ. ಮಾನವ ತನ್ನ ಅವಶ್ಯಕತೆಗಳಿಗೆ ಅನುಗುಣವಾಗಿ ಹೊಸ ಹೊಸ ಆವಿಷ್ಕಾರ ಮಾಡುತ್ತಲೇ ಇರುತ್ತಾನೆ.

ಅದರಲ್ಲೂ ಭಾರತೀಯರು ತಮ್ಮ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಅನುಸರಿಸುವ ದಾರಿ ಬಹಳ ವಿಚಿತ್ರ ಮತ್ತು ಆಸಕ್ತಿದಾಯಕವಾಗಿರುತ್ತವೆ.

ಆಡು ಭಾಷೆಯಲ್ಲಿ ‘ಜುಗಾಡ್’ ಎಂದು ಕರೆಯಲಾಗುವ ಈ ಆವಿಷ್ಕಾರಗಳಿಗೆ ಜಾಗತಿಕ ಮನ್ನಣೆ ಸಿಕ್ಕಲ್ಲಿ ಖಂಡಿತ ಭಾರತೀಯರು ವಿಶ್ವವನ್ನು ಆಳುವುದರಲ್ಲಿ ಸಂಶಯವಿಲ್ಲ.

ಅದರಂತೆ ರೈತನೋರ್ವ ತೆಂಗಿನ ಮರವೇರಲು ಕಂಡು ಹಿಡಿದಿರುವ ಬೈಕ್ ಮಾದರಿಯ ಯಂತ್ರವೊಂದು ಇದೀಗ ಭಾರೀ ಸದ್ದು ಮಾಡುತ್ತಿದೆ.

ತಂಗಿನ ಮರವೇರಲು ರೈತ ಕಂಡು ಹಿಡಿದ ಈ ಬೈಕ್ ಮಾದರಿಯ ಯಂತ್ರದ ಮೇಲೆ ಕುಳಿತರೆ ಸಾಕು, ತಾನೇ ಮರದ ತುದಿಗೆ ವ್ಯಕ್ತಿಯನ್ನು ಈ ಯಂತ್ರ ಕರೆದೊಯ್ಯುತ್ತದೆ.

ರೈತನ ಈ ಆವಿಷ್ಕಾರಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದ್ದು, ಭಾರತೀಯರ ಸುಪ್ತ ಪ್ರತಿಭೆಗೆ ಶಹಬ್ಬಾಸಗಿರಿ ದೊರೆಯುತ್ತಿದೆ.