ಅತಿಯಾದ ಸ್ಮಾರ್ಟ್‌ಫೋನ್ ಬಳಕೆಯಿಂದ ಆತ್ಮಹತ್ಯೆ ಯೋಚನೆ ಹೆಚ್ಚಳ: ಅಧ್ಯಯನ
ಸ್ಮಾರ್ಟ್‌ಫೋನಿನ ಅತಿಯಾದ ಬಳಕೆ ನಮ್ಮ ಮನಸ್ಸಿನ ಮೇಲೆ ಯಾವ ರೀತಿ ಪರಿಣಾಮ ಬೀರಬಹುದೆಂದು ವರದಿಯೊಂದು ತಿಳಿಸಿದೆ.
ಇಂದಿನ ಕಾಲದಲ್ಲಿ ಸ್ಮಾರ್ಟ್‌ಫೋನ್ ಬಳಸಲು ಇಷ್ಟಪಡದವರೇ ಇಲ್ಲ. ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಫೋನ್‌ಗಳು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಸ್ಮಾರ್ಟ್‌ಫೋನ್ ಇಲ್ಲದ ಜೀವನವನ್ನು ಈಗ ಊಹಿಸುವುದೂ ಕಷ್ಟ. ನಮಗೆ ಅಗತ್ಯವಿರುವ ಪ್ರತಿಯೊಂದು ಮೂಲಭೂತ ಕೆಲಸಕ್ಕೂ ಸ್ಮಾರ್ಟ್‌ಫೋನ್ ಸಹಾಯ ಮಾಡುತ್ತದೆ. ಸಮಯ ಕಳೆದಂತೆ ನಮ್ಮ ಸ್ಮಾರ್ಟ್‌ಫೋನ್‌ಗಳ ಮೇಲಿನ ಅವಲಂಬನೆ ಹೆಚ್ಚುತ್ತಿದೆ. ಆದರೆ ಸ್ಮಾರ್ಟ್‌ಫೋನಿನ ಅತಿಯಾದ ಬಳಕೆ ನಮ್ಮ ಮನಸ್ಸಿನ ಮೇಲೆ ಯಾವ ರೀತಿ ಪರಿಣಾಮ ಬೀರಬಹುದೆಂದು ವರದಿಯೊಂದು ತಿಳಿಸಿದೆ.
ಇತ್ತೀಚೆಗೆ, ಸೇಪಿಯನ್ ಲ್ಯಾಬ್ಸ್ ಹೊಸ ವರದಿಯನ್ನು ಬಿಡುಗಡೆ ಮಾಡಿದೆ, ಅದು ಬಳಕೆದಾರರಲ್ಲಿ ಮೊಬೈಲ್ ಬಳಕೆದಾರರಲ್ಲಿ ಆತಂಕ ಸೃಷ್ಟಿಸಿದೆ. ಈ ವರದಿ ಭಯಾನಕ ಅಂಶವೊಂದನ್ನು ಬಹಿರಂಗ ಮಾಡಿದೆ. ವರದಿ ಕೆಲವು ಹೈಲೈಟ್ಸ್ ಇಲ್ಲಿದೆ
ಸೇಪಿಯನ್ ಲ್ಯಾಬ್ಸ್ ವರದಿ: ಸೇಪಿಯನ್ ಲ್ಯಾಬ್ಸ್ ಇತ್ತೀಚೆಗೆ ಸಂಶೋಧನಾ ವರದಿಯೊಂದನ್ನು ನಡೆಸಿದ್ದು, ಅದರ ವರದಿ ಇದೀಗ ವೈರಲ್ ಆಗಿದೆ. 18 ರಿಂದ 24 ವರ್ಷದೊಳಗಿನ ಯುವಕರ ಮಾನಸಿಕ ಆರೋಗ್ಯ ಹದಗೆಡಲು ಸ್ಮಾರ್ಟ್‌ಫೋನ್‌ಗಳ ಬಳಕೆ ಪ್ರಮುಖ ಕಾರಣ ಎಂದು ಈ ಸಂಶೋಧನೆ ತಿಳಿಸಿದೆ.
ಇದನ್ನೂ ಓದಿ: ವೀಡಿಯೊ ಗೇಮ್‌ಗಳು ಮಕ್ಕಳಲ್ಲಿ ಬುದ್ಧಿವಂತಿಕೆ ಹೆಚ್ಚಿಸುತ್ತವೆ: ವರದಿ
ವರದಿಯ ಪ್ರಕಾರ, ಮೊದಲು ಇಂಟರ್ನೆಟ್ ಬಳಸದಿದ್ದಾಗ, ಅವರು 18 ವರ್ಷ ವಯಸ್ಸಿನವರಾಗಿದ್ದಾಗ, ಜನರು ತಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ 15,000 ರಿಂದ 18,000 ಗಂಟೆಗಳ ಕಾಲ ಕಳೆಯುತ್ತಿದ್ದರು. ಆದರೆ ಮೊಬೈಲ್ ಬಳಕೆಯ ನಂತರ ಈ ಸಮಯ 1,500 ರಿಂದ 5,000 ಗಂಟೆಗೆ ಇಳಿಕೆಯಾಗಿದೆ.
ಆತ್ಮಹತ್ಯೆ ಯೋಚನೆ ಹೆಚ್ಚಳ: ಇನ್ನು ಸೇಪಿಯನ್ ಲ್ಯಾಬ್‌ಗಳ ವರದಿಯಲ್ಲಿ ಭಯಾನಕ ಸಂಗತಿಯೊಂದ ತಿಳಿದುಬಂದಿದೆ. ಹೆಚ್ಚು ಸ್ಮಾರ್ಟ್‌ಫೋನ್ ಬಳಸುವವರು ಆತ್ಮಹತ್ಯೆಯ ಬಗ್ಗೆ ಯೋಚಿಸಲು ಪ್ರಾರಂಭಿಸುತ್ತಾರೆ ಎಂದು ಈ ಸಂಶೋಧನೆಯ ವಿಜ್ಞಾನಿಗಳು ತಿಳಿಸಿದ್ದಾರೆ. ಇದರಿಂದ ಜನರಲ್ಲಿ ಸ್ಮಾರ್ಟ್‌ಫೋನ್‌ಗಳ ಬಳಕೆ ತುಂಬಾ ಹೆಚ್ಚಾಗಿದೆ ಎಂದು ತಾರಾ ತ್ಯಾಗರಾಜನ್ ಹೇಳುತ್ತಾರೆ.
ಸ್ಮಾರ್ಟ್‌ಫೋನ್‌ಗಳ ಬಳಕೆ ತುಂಬಾ ಹೆಚ್ಚಾಗಿರುವುದರಿಂದ ಜನರು ಪರಸ್ಪರ ಮಾತನಾಡುವುದನ್ನು ಮರೆತಿದ್ದಾರೆ ಎಂದು ವಿಜ್ಞಾನಿಗಳ ಅಭಿಪ್ರಾಯ. ಜನರು ಪರಸ್ಪರ ಭೇಟಿಯಾಗಲು ಸಾಧ್ಯವಾಗದಿದ್ದಾಗ, ಮುಖದ ಅಭಿವ್ಯಕ್ತಿಗಳನ್ನು ಅರ್ಥ ಮಾಡಿಕೊಳ್ಳಲು, ದೇಹದ ಅಭಿವ್ಯಕ್ತಿಗಳನ್ನು ಅರ್ಥಮಾಡಿಕೊಳ್ಳಲು, ಜನರ ಭಾವನೆಗಳಿಗೆ ಗಮನ ಕೊಡಲು ಮತ್ತು ನಿಜ ಜೀವನದಲ್ಲಿ ಸಮಸ್ಯೆಗಳನ್ನು ಪರಿಹರಿಸಲು ಅವರಿಗೆ ಸಾಧ್ಯವಾಗುವುದಿಲ್ಲ. ಹೀಗಾಗಿ ಅವರಿಗೆ ಸಮಾಜದೊಂದಿಗೆ ಸಂಪರ್ಕ ಹೊಂದಲು ಸಾಧ್ಯವಾಗುತ್ತಿಲ್ಲ ಮತ್ತು ನಂತರ ಅವರ ಮನಸ್ಸಿನಲ್ಲಿ ಆತ್ಮಹತ್ಯೆಯಂತಹ ಆಲೋಚನೆಗಳು ಬರುತ್ತವೆ ಎಂದು ವರದಿ ಹೇಳಿದೆ.
ಇದನ್ನೂ ಓದಿ: ಈ ಕೆಲಸದಲ್ಲಿ ಐಫೋನ್‌ಗಿಂತ ಆ್ಯಂಡ್ರಾಯ್ಡ್ ಬಳಕೆದಾರರೇ ಬೆಸ್ಟ್ ಅನ್ನುತ್ತೆ ಈ ಇಂಟರಸ್ಟಿಂಗ್ ಅಧ್ಯಯನ
ಅಲ್ಲದೇ ಸಂಶೋಧನೆಯು ಒಟ್ಟು 34 ದೇಶಗಳಿಂದ ಡೇಟಾವನ್ನು ಸಂಗ್ರಹಿಸಿದೆ ಮತ್ತು 2010 ರಿಂದ ಸ್ಮಾರ್ಟ್‌ಫೋನ್‌ಗಳ ಮೇಲೆ ಜನರ ಅವಲಂಬನೆ ಪ್ರಾರಂಭವಾಗಿರುವುದು ಕಂಡುಬಂದಿದೆ. ಹೀಗಾಗಿ ಸ್ಮಾರ್ಟ್‌ಫೋನ್‌ಗಳಿಗೆ ದಾಸರಾಗದಿರುವುದಂತೆ ನೋಡಿಕೊಳ್ಳುವುದು ಅತ್ಯವಶ್ಯ. ಅಲ್ಲದೇ ಎಷ್ಟು ಗಂಟೆಗಳ ಕಾಲ ಸ್ಮಾರ್ಟ್‌ಫೋನ್ ಬಳಸಬೇಕೆ ಎಂದು ನಿರ್ಧರಿಸುವುದು ಅತ್ಯಗತ್ಯ.