Asianet Suvarna News Asianet Suvarna News

Twitter ಸರ್ವರ್‌ನಲ್ಲಿ ದೋಷ: ಕೆಲ ಕಾಲ ಸೇವೆಯಲ್ಲಿ ವ್ಯತ್ಯಯ

ಪ್ರಮುಖ ಸಾಮಾಜಿಕ ಜಾಲತಾಣವಾದ ಟ್ವೀಟರ್‌ ಜಗತ್ತಿನಾದ್ಯಂತ ಕೆಲ ಕಾಲ ಸ್ಥಗಿತಗೊಂಡು ಬಳಿಕ ಸಹಜ ಸ್ಥಿತಿಗೆ ಮರಳಿದ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ಶುಕ್ರವಾರ ರಾತ್ರಿ 10:30ರ ವೇಳೆಗೆ ಟ್ವೀಟರ್‌ನಲ್ಲಿ ದೋಷ ಕಂಡುಬಂದಿತ್ತು. 

Twitter Server Down for Thousands of Users gvd
Author
Bangalore, First Published Feb 12, 2022, 1:30 AM IST | Last Updated Feb 12, 2022, 1:30 AM IST

ನವದೆಹಲಿ (ಫೆ.12): ಪ್ರಮುಖ ಸಾಮಾಜಿಕ ಜಾಲತಾಣವಾದ ಟ್ವೀಟರ್‌ (Twitter) ಜಗತ್ತಿನಾದ್ಯಂತ ಕೆಲ ಕಾಲ ಸ್ಥಗಿತಗೊಂಡು ಬಳಿಕ ಸಹಜ ಸ್ಥಿತಿಗೆ ಮರಳಿದ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ಶುಕ್ರವಾರ ರಾತ್ರಿ 10:30ರ ವೇಳೆಗೆ ಟ್ವೀಟರ್‌ನಲ್ಲಿ ದೋಷ ಕಂಡುಬಂದಿತ್ತು. 

ಟ್ವೀಟರ್‌ ಸರ್ವರ್‌ನಲ್ಲಿ ವ್ಯತ್ಯಯ ಉಂಟಾಗಿ ಭಾರತ, ಅಮೆರಿಕ ಸೇರಿದಂತೆ ಜಗತ್ತಿನ ಹಲವು ಭಾಗಗಳಲ್ಲಿ ಒಂದು ಗಂಟೆಗಳ ಕಾಲ ಟ್ವೀಟರ್‌ ಸೇವೆಯಲ್ಲಿ ವ್ಯತ್ಯಯ ಉಂಟಾಗಿತ್ತು. ವೆಬ್‌ಸೈಟ್‌ ಮತ್ತು ವಿವಿಧ ಸೇವೆಗಳ ಬಗ್ಗೆ ಗ್ರಾಹಕರಿಗೆ ಮಾಹಿತಿ ನೀಡುವ ಡೌನ್‌ ಡಿಟೆಕ್ಟರ್‌ (Down Detector) ಆನ್‌ಲೈನ್‌ ವೇದಿಕೆಯಲ್ಲಿ ಸುಮಾರು 48,000 ದೂರುಗಳು ದಾಖಲಾಗಿದ್ದು, ಟ್ವೀಟ್‌ (Tweet) ಮಾಡಲು ಮತ್ತು ರಿಟ್ವೀಟ್‌ (Retweet) ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಬಳಕೆದಾರರು ದೂರಿದ್ದರು. 

ಈ ಬೆನ್ನಲ್ಲೇ ಟ್ವೀಟರ್‌ ಸಂಸ್ಥೆ ಹೇಳಿಕೆಯೊಂದನ್ನು ಬಿಡುಗಡೆ ಮಾಡಿ, ‘ಟೈಮ್‌ಲೈನ್‌ಗಳನ್ನು ಲೋಡ್‌ ಮಾಡುವುದನ್ನು ಮತ್ತು ಟ್ವೀಟ್‌ ಪೋಸ್ಟ್‌ ಮಾಡುವುದನ್ನು ತಡೆಯುವ ತಾಂತ್ರಿಕ ದೋಷವನ್ನು ಸರಿಪಡಿಸಿದ್ದೇವೆ. ಈಗ ಟ್ವೀಟರ್‌ ಸಹಜ ಸ್ಥಿತಿಗೆ ಮರಳಿದೆ. ಅಡಚಣೆಗಾಗಿ ಕ್ಷಮಿಸಿ!’ ಎಂದು ಟ್ವೀಟ್‌ ಮಾಡಿತ್ತು.

OnePlus Nord CE 2 5G ಫೆ. 17ಕ್ಕೆ ಭಾರತದಲ್ಲಿ ಲಾಂಚ್: ಟ್ವೀಟರ್‌ನಲ್ಲಿ ಟೀಸರ್‌ ಬಿಡುಗಡೆ!

ಟ್ವೀಟರ್‌ಗೆ ಕೇಂದ್ರ ತರಾಟೆ: ‘ಭಾರತದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ(Social Media) ಹಾಗೂ ಜಾಲತಾಣಗಳಲ್ಲಿ(Internet) ಹರಿದಾಡುತ್ತಿರುವ ಸುಳ್ಳು ಸುದ್ದಿಗಳು(Fake News) ಜಾಗತಿಕ ಮಟ್ಟದಲ್ಲಿ ದೇಶಕ್ಕೆ ಕೆಟ್ಟಹೆಸರು ತರುತ್ತಿವೆ. ಆದರೆ ಇವನ್ನು ‘ನಕಲಿ ಸುದ್ದಿಗಳು’ ಎಂದು ಗುರುತಿಸಿ ತೆಗೆದುಹಾಕುವಂತೆ ಹೇಳಿದರೂ ಅದನ್ನು ಕಡೆಗಣಿಸಲಾಗುತ್ತಿದೆ’ ಎಂದು ಕೇಂದ್ರ ಸರ್ಕಾರವು ಗೂಗಲ್‌, ಟ್ವೀಟರ್‌, ಫೇಸ್‌ಬುಕ್‌ ಹಾಗೂ ಇತರ ಕೆಲವು ಸಾಮಾಜಿಕ ಮಾಧ್ಯಮಗಳನ್ನು ತರಾಟೆಗೆ ತೆಗೆದುಕೊಂಡಿದೆ. 

ಅಲ್ಲದೆ, ಸುಳ್ಳು ಸುದ್ದಿ ತಡೆಯದಿದ್ದರೆ ಕಠಿಣ ಕ್ರಮ ಜರುಗಿಸಲಾಗುತ್ತದೆ ಎಂದು ಎಚ್ಚರಿಸಲಾಗಿದೆ. ಈ ಸಂಬಂಧ ಸೋಮವಾರ ಈ ಸಾಮಾಜಿಕ ಮಾಧ್ಯಮಗಳು ಹಾಗೂ ಜಾಲತಾಣಗಳ ಅಧಿಕಾರಿಗಳ ಜತೆ ವರ್ಚುವಲ್‌ ಸಭೆ ನಡೆಸಿದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅಧಿಕಾರಿಗಳು, ಕಂಪನಿಗಳ ನಿರ್ಲಕ್ಷ್ಯವನ್ನು ಬಲವಾಗಿ ಟೀಕಿಸಿ, ಸುಳ್ಳು ಸುದ್ದಿಗಳನ್ನು ನಿಯಂತ್ರಿಸಬೇಕೆಂದು ಎಚ್ಚರಿಕೆ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ. 

‘ಕೂಡಲೇ ಸುಳ್ಳು ಸುದ್ದಿಗಳ ಪ್ರಸಾರವನ್ನು ತಡೆಹಿಡಿಯಬೇಕು. ಈ ಬಗ್ಗೆ ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಮುಂದಿನ ದಿನಗಳಲ್ಲಿ ತೆಗೆದುಕೊಳ್ಳುತ್ತದೆ. ಈಗಾಗಲೇ ಸಾಮಾಜಿಕ ಮಾಧ್ಯಮಗಳು ಹಾಗೂ ಜಾಲತಾಣಗಳಲ್ಲಿ ಇರಬೇಕಾದ ಅಂಶಗಳ ಬಗ್ಗೆ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಈ ನಿಯಮಗಳನ್ನು ಪಾಲಿಸದೇ ಇದ್ದರೆ, ಸರಿಯಾದ ಬೆಲೆ ತೆರಬೇಕಾಗುತ್ತದೆ’ ಎಂದು ಎಚ್ಚರಿಸಿದ್ದಾರೆ ಎಂದು ಅವು ಹೇಳಿವೆ. ಈ ಸಭೆಯಲ್ಲಿ ಭಾರೀ ಬಿಸಿಬಿಸಿ ಚರ್ಚೆ ನಡೆಯಿತು. ಇದು ಭಾರತ ಹಾಗೂ ಪಾಶ್ಚಾತ್ಯ ಸಾಮಾಜಿಕ ಮಾಧ್ಯಮಗಳ ನಡುವಿನ ತ್ವೇಷಮಯ ಸಂದರ್ಭದ ದ್ಯೋತಕದಂತಿತ್ತು. 

#AirtelDown: ತಾಂತ್ರಿಕ ದೋಷದಿಂದಾಗಿ ದೇಶಾದ್ಯಂತ ಏರ್‌ಟೆಲ್ ಸೇವೆ ಸ್ಥಗಿತ: ಸ್ಪಷ್ಟನೆ ನೀಡಿದ ಟೆಲಿಕಾಂ!

ಆದರೆ ಕ್ರಮ ಕೈಗೊಳ್ಳಲು ಯಾವುದೇ ಕಾಲಮಿತಿಯನ್ನು ಸರ್ಕಾರ ವಿಧಿಸಲಿಲ್ಲ ಎಂದು ಅವು ಸ್ಪಷ್ಟಪಡಿಸಿವೆ. ಇದರ ಬೆನ್ನಲ್ಲೇ, ‘ಸುಳ್ಳು ಮಾಹಿತಿಯ ಹರಡುವಿಕೆಯನ್ನು ತಡೆಯಲು ಕ್ರಮ ತೆಗೆದುಕೊಳ್ಳುವುದಾಗಿ ಜಾಲತಾಣ ಕಂಪನಿಗಳು ತಿಳಿಸಿದವು. ಆದರೆ ಯಾವ ಅಂಶಗಳನ್ನು ತೆಗೆದು ಹಾಕಬೇಕು ಎಂಬುದನ್ನು ನೇರವಾಗಿ ನಮಗೆ ತಿಳಿಸಿ. ಸಾರ್ವಜನಿಕವಾಗಿ(Public) ಹೇಳಬೇಡಿ. ಇದರಿಂದ ಸಮಸ್ಯೆ ಸುಸೂತ್ರವಾಗಿ ಪರಿಹಾರವಾಗುತ್ತದೆ ಕೋರಿದರು’ ಎಂದು ಮೂಲಗಳು ತಿಳಿಸಿವೆ.

Latest Videos
Follow Us:
Download App:
  • android
  • ios