#AirtelDown: ತಾಂತ್ರಿಕ ದೋಷದಿಂದಾಗಿ ದೇಶಾದ್ಯಂತ ಏರ್‌ಟೆಲ್ ಸೇವೆ ಸ್ಥಗಿತ: ಸ್ಪಷ್ಟನೆ ನೀಡಿದ ಟೆಲಿಕಾಂ!
ತಾಂತ್ರಿಕ ದೋಷದಿಂದಾಗಿ ಸೇವೆಯಲ್ಲಿ ಸ್ಥಗಿತ ಉಂಟಾಗಿದೆ ಎಂದು ಏರ್‌ಟೆಲ್ ಸ್ಪಷ್ಟಪಡಿಸಿದೆ. ಬೆಂಗಳೂರು, ಚೆನ್ನೈ, ಹೈದರಾಬಾದ್, ಮುಂಬೈ ಮತ್ತು ನವದೆಹಲಿ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿನ ಬಳಕೆದಾರರ ಮೇಲೆ ಸಮಸ್ಯೆಯು ಪರಿಣಾಮ ಬೀರಿದೆ.
Tech Desk: ಭಾರತದಾದ್ಯಂತ ಏರ್‌ಟೆಲ್ (Airtel) ಬಳಕೆದಾರರು ಶುಕ್ರವಾರ ಇಂಟರ್‌ನೆಟ್ ಸೇವೆಯಲ್ಲಿ ತೊಂದರೆ ಅನುಭವಿಸಿದ್ದು ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕಂಪನಿಗೆ ದೂರು ನೀಡಿದ್ದಾರೆ. ತಾಂತ್ರಿಕ ದೋಷದಿಂದಾಗಿ ಸೇವೆಯಲ್ಲಿ ಸ್ಥಗಿತ ಉಂಟಾಗಿದೆ ಎಂದು ಏರ್‌ಟೆಲ್ ಸ್ಪಷ್ಟಪಡಿಸಿದೆ. ಬಳಕೆದಾರರು ಆನ್‌ಲೈನ್‌ನಲ್ಲಿ ವರದಿ ಮಾಡಿದ ಸ್ವಲ್ಪ ಸಮಯದ ನಂತರ ಸಮಸ್ಯೆಯನ್ನು ಪರಿಹರಿಸಲಾಗಿದೆ. ಸೇವೆ ಸ್ಥಗಿತಗೊಂಡ ತಕ್ಷಣ, ಹಲವಾರು ಬಳಕೆದಾರರು ಸಾಮಾಜಿಕ ಮಾಧ್ಯಮದಲ್ಲಿ ಏರ್‌ಟೆಲ್ ಡೌನ್‌ಟೈಮ್ ಬಗ್ಗೆ ದೂರು ನೀಡಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿನ ಬಳಕೆದಾರರ ವರದಿಗಳ ಪ್ರಕಾರ, ಈ ಸಮಸ್ಯೆಯು ಟೆಲಿಕಾಂ ನೆಟ್‌ವರ್ಕ್‌ನಲ್ಲಿ ಬ್ರಾಡ್‌ಬ್ಯಾಂಡ್ ಮತ್ತು ಸೆಲ್ಯುಲಾರ್ ಬಳಕೆದಾರರ ಮೇಲೆ ಪರಿಣಾಮ ಬೀರಿದೆ. ಇಡೀ ದೇಶಾದ್ಯಂತ ಸೇವೆ ಮೇಲೆ ಪರಿಣಾಮವನ್ನು ವರದಿಗಳು ದಾಖಲಾಗಿರುವುದರಿಂದ ಇದು ನಿರ್ದಿಷ್ಟ ವಲಯಕ್ಕೆ ಸೀಮಿತವಾಗಿಲ್ಲ.
ಇದನ್ನೂ ಓದಿ: 15 OTT ಸೇವೆಗಳೊಂದಿಗೆ ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಪ್ರೀಮಿಯಂ ಬಿಡುಗಡೆ!
ಈ ಬಗ್ಗೆ ಸ್ಪಷ್ಟನೆ ನೀಡಿರುವ ಏರ್‌ಟೆಲ್ ದೋಷವನ್ನು ಸರಿಪಡಿಸಿದ ಸ್ವಲ್ಪ ಸಮಯದ ನಂತರ ಸೇವೆಗಳನ್ನು ಸಂಪೂರ್ಣವಾಗಿ ಮರುಸ್ಥಾಪಿಸಲಾಗಿದೆ ಎಂದು ಹೇಳಿದೆ. “ತಾಂತ್ರಿಕ ದೋಷದಿಂದಾಗಿ ಇಂದು ಬೆಳಗ್ಗೆ ನಮ್ಮ ಇಂಟರ್ನೆಟ್ ಸೇವೆಗಳು ಅಲ್ಪಾವಧಿಗೆ ಸ್ಥಗಿತಗೊಂಡಿವೆ. ಸೇವೆಗಳನ್ನು ಸಂಪೂರ್ಣವಾಗಿ ಮರುಸ್ಥಾಪಿಸಲಾಗಿದೆ. ನಮ್ಮ ಗ್ರಾಹಕರಿಗೆ ಉಂಟಾದ ಅನಾನುಕೂಲತೆಗೆ ನಾವು ತೀವ್ರವಾಗಿ ವಿಷಾದಿಸುತ್ತೇವೆ, ”ಎಂದು ಏರ್‌ಟೆಲ್ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದೆ.
ಇಂಟರ್‌ನೆಟ್ ಸೇವೆ ಸ್ಥಗಿತ ಕುರಿತು ಬಳಕೆದಾರರು ಟ್ವಿಟರ್ ಮೂಲಕ ತಮ್ಮ ದೂರುಗಳನ್ನು ನೀಡಿದಾದರೆ. ಈ ಸಮಸ್ಯೆಯು ಏರ್‌ಟೆಲ್ ಬ್ರಾಡ್‌ಬ್ಯಾಂಡ್ ಮತ್ತು ಮೊಬೈಲ್ ನೆಟ್‌ವರ್ಕ್‌ಗಳ ಮೇಲೆ ಪರಿಣಾಮ ಬೀರಿದೆ ಎಂದು ಬಳಕೆದಾರರ ವರದಿಗಳು ಸೂಚಿಸಿವೆ. ಏರ್‌ಟೆಲ್ ಆ್ಯಪ್ ಮತ್ತು ಕಸ್ಟಮರ್ ಕೇರ್ ಸೇವೆಯನ್ನು ಕೆಲವು ಬಳಕೆದಾರರಿಗೆ ಉಪಯೋಗಿಸಲು ಸಾಧ್ಯವಾಗಿಲ್ಲ. ಏರ್‌ಟೆಲ್ ಸ್ಥಗಿತಗೊಂಡ ಸ್ವಲ್ಪ ಸಮಯದ ನಂತರ, #AirtelDown ಟ್ವಿಟ್‌ನಲ್ಲಿ ಟ್ರೆಂಡ್ ಮಾಡಲು ಪ್ರಾರಂಭವಾಗಿದೆ.
DownDetector ನಲ್ಲಿ ಲಭ್ಯವಿರುವ ವಿವರಗಳ ಪ್ರಕಾರ, ಸಮಸ್ಯೆಯು ಸುಮಾರು 11 ಗಂಟೆಗೆ ಪ್ರಾರಂವಾಗಿದೆ. ಬೆಂಗಳೂರು, ಚೆನ್ನೈ, ಹೈದರಾಬಾದ್, ಮುಂಬೈ ಮತ್ತು ನವದೆಹಲಿ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿನ ಬಳಕೆದಾರರ ಮೇಲೆ ಸಮಸ್ಯೆಯು ಪರಿಣಾಮ ಬೀರಿದೆ ಎಂದು ಟ್ರ್ಯಾಕರ್ ಹೇಳಿದೆ