Asianet Suvarna News Asianet Suvarna News

ವೋಡಾಫೋನ್ TurboNet 4G ಸೇವೆ ಆರಂಭ; ಈ ಸೌಲಭ್ಯ ಪಡೆದ ಮೊದಲ ನಗರ ಬೆಂಗಳೂರು!

ವೋಡಾಫೋನ್ ಐಡಿಯಾ ಲಿಮಿಟೆಡ್ ಕರ್ನಾಟಕದಲ್ಲಿ ಹೊಸ 4 ಜಿ ಸೇವೆ ಆರಂಭಿಸಿದೆ. ಟರ್ಬೋನೆಟ್ 4Gಸೇವೆಯಿಂದ 1.4 ಕೋಟಿ ಗ್ರಾಹಕರಿಗೆ ಅನೂಕೂಲವಾಗಲಿದೆ. ನೂತನ ಸೇವೆಯ ಪ್ರಯೋಜನವೇನು? ಇಲ್ಲಿದೆ ವಿವರ.

TurboNet 4G service launched by Vodafone Idea in Karnataka
Author
Bengaluru, First Published Sep 12, 2019, 8:20 PM IST

ಬೆಂಗಳೂರು(ಸೆ.12): ವೋಡಾಫೋನ್ ಹಾಗೂ ಐಡಿಯಾ ವಿಲೀನದ ಬಳಿಕ ಇದೀಗ ಹೊಸ ಸೇವೆಯನ್ನು ಆರಂಭಿಸಿದೆ. ಬೆಂಗಳೂರು ಈ ಸೌಲಭ್ಯ ಪಡೆಯುತ್ತಿರುವ ದೇಶದ ಮೊದಲ ನಗರ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಮೊದಲ ಹಂತದಲ್ಲಿ ಬೆಂಗಳೂರು ಸೇರಿದಂತೆ ಕರ್ನಾಟಕದ ಇತರ ನಗರಗಳಾದ ಮೈಸೂರು, ಮಂಗಳೂರು, ಬೆಳಗಾವಿ, ಹುಬ್ಬಳ್ಳಿ ಹಾಗೂ ದಾವಣಗೆರೆಯಲ್ಲಿ ಈ ಸೇವೆ ಲಭ್ಯವಾಗಲಿದೆ.

ಇದನ್ನೂ ಓದಿ: ಜಿಯೋ ಗಿಗಾ ಫೈಬರ್‌ ಮೆಗಾ ಆಫರ್‌ ಪ್ರಕಟ!

4G ಸೇವೆ ಬಳಸುತ್ತಿರುವ ಗ್ರಾಹಕರು ಇದೀಗ ಟರ್ಬೋನೆಟ್ 4Gಯಿಂದ ಯಾವುದೇ ತೊಡಕಿಲ್ಲದೆ ತ್ವರಿತ ಇಂಟರ್‌ನೆಟ್ ಸೇವೆಯನ್ನು ಬಳಿಸಿಕೊಳ್ಳಬಹುದು ಎಂದು ವೋಡಾಫೋನ್ ಐಡಿಯಾ ಹೇಳಿದೆ. ನೂತನ ಸೇವೆಯಿಂದ ಕರ್ನಾಟದ 1.4 ಕೋಟಿ ವೋಡಾಫೋನ್ ಐಡಿಯಾ ಗ್ರಾಹಕರಿಗೆ ನೆರವಾಗಲಿದೆ.

ಇದನ್ನೂ ಓದಿ: ಮೊಬೈಲ್ ಇಂಟರ್ನೆಟ್ ಸ್ಪೀಡ್: ಯಾರು ಮುಂದೆ? ಯಾರು ಹಿಂದೆ? ಇಲ್ಲಿದೆ ಲೇಟೆಸ್ಟ್ ವರದಿ

ಟರ್ಬೋನೆಟ್ 4G ಸೇವೆಯಿಂದ ಗ್ರಾಹಕರು ಅತೀ ವೇಗದಲ್ಲಿ ಡೌನ್‌ಲೋಡ್, ಅಪ್‌ಲೋಡ್, ನೆಟ್ ಸರ್ಚ್ ಸೇರಿದಂತೆ ಎಲ್ಲಾ ರೀತಿಯ ಡಾಟಾ ಬಳಕೆ ತ್ವರಿತಗತಿಯಲ್ಲಿ ಆಗಲಿದೆ.  ಇಷ್ಟೇ ಅಲ್ಲ ಸೇವೆ ಲಭ್ಯವಿರುವ ಯಾವುದೇ ಪ್ರದೇಶದಲ್ಲಿ ನೆಟ್ ಸಮಸ್ಯೆ ಎದುರಾಗುವುದಿಲ್ಲ ಎಂದು ವೋಡಾಫೋನ್ ಐಡಿಯಾ ಹೇಳಿದೆ.
 

Follow Us:
Download App:
  • android
  • ios