ಜಿಯೋ ಗಿಗಾ ಫೈಬರ್ ಮೆಗಾ ಆಫರ್ ಪ್ರಕಟ!
4ಜಿ ಸೇವೆಯ ಮೂಲಕ ಟೆಲಿಕಾಂ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ್ದ ರಿಲಯನ್ಸ್ ಜಿಯೋ, ತನ್ನ ಬಹು ನಿರೀಕ್ಷಿತ ಜಿಯೋ ಗಿಗಾ ಫೈಬರ್ ಯೋಜನೆಯನ್ನು ಸೆ.5ರ ಗುರುವಾರದಿಂದ ಜಾರಿಗೊಳಿಸುತ್ತಿದೆ.
ಮುಂಬೈ [ಸೆ.05]: ಅಗ್ಗದ ದರದ 4ಜಿ ಸೇವೆಯ ಮೂಲಕ ಟೆಲಿಕಾಂ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ್ದ ರಿಲಯನ್ಸ್ ಜಿಯೋ, ತನ್ನ ಬಹು ನಿರೀಕ್ಷಿತ ಜಿಯೋ ಗಿಗಾ ಫೈಬರ್ ಯೋಜನೆಯನ್ನು ಸೆ.5ರ ಗುರುವಾರದಿಂದ ಜಾರಿಗೊಳಿಸುತ್ತಿದೆ. ಕೇಬಲ್ ಟೀವಿ, ಟೆಲಿಫೋನ್, ಬ್ರಾಡ್‌ಬ್ಯಾಂಡ್, ಇ ಕಾಮರ್ಸ್ ವೆಬ್ ವೇದಿಕೆ ಸೇರಿದಂತೆ ಹಲವು ಸೌಲಭ್ಯಗಳನ್ನು ಸೆಟ್‌ಟಾಪ್ ಬಾಕ್ಸ್ ಮೂಲಕವೇ ಒದಗಿಸುವ ಈ ಯೋಜನೆ, ಮುಂದಿನ ದಿನಗಳಲ್ಲಿ ದೇಶದ ಕೇಬಲ್ ಟೀವಿ, ಬ್ರ್ಯಾಡ್‌ಬ್ಯಾಂಡ್ ವಲಯದಲ್ಲಿ ಭಾರೀ ಕ್ರಾಂತಿಗೆ ಕಾರಣವಾಗಲಿದೆ ಎನ್ನಲಾಗಿದೆ.
ಅದರಲ್ಲೂ ಜಿಯೋ ಸೇವೆಯನ್ನು ಆರಂಭದಲ್ಲಿ ಉಚಿತವಾಗಿ ನೀಡಿ ಜನರನ್ನು ಭಾರೀ ಪ್ರಮಾಣದಲ್ಲಿ ಸೆಳೆದಂತೆ ಅಂದಾಜು 5000 ರು. ಬೆಲೆ ಬಾಳುವ ಸೆಟ್‌ಟಾಪ್ ಬಾಕ್ಸ್ ಅನ್ನು ಕಂಪನಿ, ಪ್ರತಿಯೊಬ್ಬ ಬ್ರಾಡ್‌ಬ್ಯಾಂಡ್ ಗ್ರಾಹಕರಿಗೆ ಉಚಿತವಾಗಿ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ಹೀಗಾಗಿ ಗುರುವಾರದ ಘೋಷಣೆ ಬಗ್ಗೆ ದೇಶಾದ್ಯಂತ ಭಾರೀ ಕುತೂಹಲ ಮೂಡಿದೆ.
ಕೆಲ ದಿನಗಳ ಹಿಂದೆ ನಡೆದ ರಿಲಯನ್ಸ್ ಇಂಡಸ್ಟ್ರೀಸ್‌ನ ವಾರ್ಷಿಕ ಮಹಾಸಭೆ ವೇಳೆ ಮಾತನಾಡಿದ್ದ ಕಂಪನಿಯ ಮುಖ್ಯಸ್ಥ ಮುಕೇಶ್ ಅಂಬಾನಿ, ಜಿಯೋ ಗಿಗಾ ಫೈಬರ್ ಬ್ರಾಂಡ್‌ಬ್ಯಾಂಡ್ ಸೇವೆ ಮಾಸಿಕ 700 ರು.ನಿಂದ ಆರಂಭವಾಗಲಿದ್ದು, 10,000 ರು. ವರೆಗೂ ಲಭ್ಯವಿದೆ. ಜಿಯೋದ ಗಿಗಾ ಫೈಬರ್ ಸೇವೆಯಲ್ಲಿ ವೇಗವು ಕನಿಷ್ಠ 100 ಎಂಬಿಪಿಎಸ್‌ನಿಂದ ಗರಿಷ್ಠ 1000 ಎಂಬಿಪಿಎಸ್‌ವರೆಗೂ ಇರಲಿದೆ. ಕನಿಷ್ಠ 100 ಎಂಬಿಪಿಎಸ್ ವೇಗದ ಬ್ರಾಡ್‌ಬ್ಯಾಂಡ್ ಇಂಟರ್‌ನೆಟ್ ಸೇವೆ ಲಭ್ಯವಾಲಿದೆ. ಅಲ್ಲದೇ ಟೀವಿಗಳಲ್ಲಿ ಅಲ್ಟಾ್ರಹೈಡೆಫನೀಷನ್ ಸೇವೆ, ವಾಯ್‌್ಸ ಆಕ್ಟಿವೇಟೆಡ್ ಅಸಿಸ್ಟೆನ್ಸ್, ವಚ್ರ್ಯುವಲ್ ರಿಯಾಲಿಟಿ ಗೇಮಿಂಗ್, ಡಿಜಿಟಲ್ ಶಾಪಿಂಗ್ ಮತ್ತು ಲ್ಯಾಂಡ್‌ಲೈನ್ ಸಂಪರ್ಕ ನೀಡಲಿದೆ. ಈ ಲ್ಯಾಂಡ್‌ಲೈನ್ ಮೂಲಕ ಜೀವಮಾನವಿಡಿ ಉಚಿತ ಕರೆ ಮಾಡಬಹುದಾಗಿದೆ ಎಂದು ಪ್ರಕಟಿಸಿದ್ದರು.
ಜೊತೆಗೆ ವಾರ್ಷಿಕ ಚಂದಾದಾರರಾದವರಿಗೆ ಎಚ್‌ಡಿ ಎಲ್‌ಇಡಿ ಟೀವಿ ಅಥವಾ 4ಕೆ. ಟೀವಿಯನ್ನು ಜಿಯೋ ಫೈಬರ್ ಉಚಿತವಾಗಿ ನೀಡಲಿದೆ ಎಂದು ತಿಳಿಸಿದ್ದರು. ಆದರೆ ಯಾವ ದರದ ಪ್ಯಾಕೇಜ್‌ಗೆ ಈ ಟೀವಿ ಸ್ಕೀಂ ಎಂಬುದನ್ನು ಹೇಳಿರಲಿಲ್ಲ. ಈ ಎಲ್ಲಾ ವಿಷಯಗಳು ಗುರುವಾರ ಪ್ರಕಟಗೊಳ್ಳಲಿದೆ.
ಏನೇನು ಸೇವೆಗಳು ಲಭ್ಯ? ಜೀವಮಾನವಿಡೀ ಉಚಿತ ಕರೆ ಸೌಲಭ್ಯ
ಜಿಯೋ ಫೈಬರ್ ಯೋಜನೆ ಅಡಿ ಮನೆಯ ಸ್ಥಿರ ದೂರವಾಣಿಯ ಮೂಲಕ ಭಾರತದ ಯಾವುದೇ ಭಾಗಕ್ಕೆ ಅಥವಾ ಯಾವುದೇ ಮೊಬೈಲ್‌ಗೆ ಉಚಿತವಾಗಿ ಕರೆ ಮಾಡಬಹುದಾಗಿದೆ.
500 ರು.ಗೆ ಅಂತಾರಾಷ್ಟೀಯ ಕರೆ
ಗಿಗಾ ಫೈಬರ್ ಜೊತೆ ಮಾಸಿಕ 500 ಪ್ಯಾಕ್ ಹಾಕಿಸಿಕೊಂಡರೆ ಅಮೆರಿಕ ಹಾಗೂ ಕೆನಡಾಕ್ಕೆ ಅನಿಯಮಿತ ಕರೆ ಮಾಡಬಹುದಾಗಿದೆ. ಜಿಯೋ ಫೈಬರ್ ಮೂಲಕ ಅಂತಾರಾಷ್ಟ್ರೀಯ ಕರೆಗೆ 1/5ರಷ್ಟುಅಥವಾ ಜಾಗತಿಕ ಕರೆದರದ 1/10ರಷ್ಟುಶುಲ್ಕ ವಿಧಿಸಲಾಗುತ್ತದೆ.
ಮನೆಯಲ್ಲೇ ಸಿನೆಮಾ ರಿಲೀಸ್!
ಜಿಯೋ ಇದೇ ಮೊದಲ ಬಾರಿಗೆ ಭಾರತದಲ್ಲಿ ಮನೆಯಲ್ಲೇ ಕುಳಿತು ಸಿನಿಮಾ ನೋಡುವ ಸೌಲಭ್ಯ ಕಲ್ಪಿಸಲಿದೆ. ಪ್ರೀಮಿಯಂ ಜಿಯೋ ಫೈಬರ್ ಗ್ರಾಹಕರು ತಮ್ಮ ಮನೆಯಲ್ಲೇ ಕುಳಿತು ಥಿಯೇಟರ್‌ನಲ್ಲಿ ಬಿಡುಗಡೆ ಆದ ಸಿನಿಮಾವನ್ನು ನೇರವಾಗಿ ವೀಕ್ಷಿಸಬಹುದಾಗಿದೆ. ‘ಜಿಯೊ ಫಸ್ಟ್ ಡೇ ಫಸ್ಟ್ ಶೋ’ 2020ರ ಮಧ್ಯಾವಧಿಯಲ್ಲಿ ಬಿಡುಗಡೆ ಆಗುವ ನಿರೀಕ್ಷೆ ಇದೆ.
ಉಚಿತ ಎಲ್‌ಇಡಿ ಟೀವಿ
ಜಿಯೋ ಫೈಬರ್ ಗ್ರಾಹಕರು ವಾರ್ಷಿಕ ಯೋಜನೆಯನ್ನು ಆಯ್ಕೆ ಮಾಡಿಕೊಂಡರೆ ಎಚ್‌ಡಿ ಹಾಗೂ 4ಕೆ. ಎಲ್‌ಇಡಿ ಟೀವಿ ಮತ್ತು 4ಕೆ. ಸೆಟ್‌ಟಾಪ್ ಬಾಕ್ಸ್ ಅನ್ನು ಉಚಿತವಾಗಿ ಪಡೆಯಲಿದ್ದಾರೆ.
ಜಿಯೋ ಪೋಸ್ಟ್‌ಪೇಡ್ ಪ್ಲಸ್
ಜಿಯೋ ಫೈಬರ್ ರೀತಿ ಜಿಯೋ ಪೋಸ್ಟ್‌ಪೇಡ್ ಪ್ಲಸ್ ಸೇವೆಯನ್ನು ಜಿಯೋ ಸೆ.5ರಿಂದ ಜಾರಿಗೊಳಿಸುತ್ತಿದೆ. ಜಿಯೋ ಸಿಮ್ ಖರೀದಿಸಲು ಬಯಸುವ ಜಿಯೋ ಫೈಬರ್ ಗ್ರಾಹಕರಿಗೆ ಈ ಸೇವೆ ಲಭ್ಯವಾಗಲಿದ್ದು, ಅಂತಾರಾಷ್ಟ್ರೀಯ ರೋಮಿಂಗ್ ಹಾಗೂ ಡೇಟಾ ಹಂಚಿಕೆಯ ಉಪಯೋಗ ಪಡೆಯಬಹುದಾಗಿದೆ.
ಸೆ.05ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ