ಮೊಬೈಲ್‌ಗಳು ಬಂದ ನಂತರ ವಾಚ್‌ಗಳ ಸ್ವರೂಪ ಬದಲಾಗಿದೆ. ಕೇವಲ ಸಮಯ ನೋಡಲು ಬಳಕೆಯಾಗುತ್ತಿದ್ದ ವಾಚ್‌ಗಳು ಬಹುಪಯೋಗಿ ಗ್ಯಾಜೆಟ್  ಆಗಿ ಪರಿವರ್ತೆನೆಯಾಗಿವೆ.

ಅಷ್ಟೇ ಅಲ್ಲ, ಸಮಯ ನೋಡೋದಕ್ಕಿಂತ ಹೆಚ್ಚು, ವಾಚ್‌ಗಳು ಈಗ ಸ್ಟೈಲ್‌ ಸ್ಟೇಟ್‌ಮೆಂಟ್‌ ಪ್ರಮುಖ ಭಾಗ ಕೂಡಾ ಆಗಿವೆ. ಆ ಕಾರಣ ವಾಚ್‌ ವೈವಿಧ್ಯತೆ ಹೆಚ್ಚುತ್ತಲೇ ಇದೆ. ವಾಚ್‌ಗಳಿಗೆ ಬೇಡಿಕೆ ಹೆಚ್ಚುತ್ತಲೇ ಇದೆ. 

ಇದನ್ನೂ ಓದಿ: ಜಿಯೋ ದೀಪಾವಳಿ ಉಡುಗೊರೆ; ಇಂಥಾ ಆಫರ್ ಯಾರ್ ಬಿಡ್ತಾರೆ!...

ಸದ್ಯಕ್ಕೀಗ ಹೊಸದಾಗಿ ಮಾರುಕಟ್ಟೆಯಲ್ಲಿರೋದು ಟೈಟಾನ್‌ನ ಎಡ್ಜ್‌ ಸರಣಿ ವಾಚ್‌ಗಳು. 4.4 ಎಂ.ಎಂನಷ್ಟು ತೆಳಗ್ಗಿನ ಸೆರಾಮಿಕ್‌ ವಾಚ್‌ ಇದು. 

ವೈಟ್‌ ವಾಚ್‌ನಲ್ಲಿ ರೋಸ್‌ ಗೋಲ್ಡ್‌ ಡಯಲ್‌ ಇದೆ. ಮ್ಯಾಟ್‌ ಫಿನಿಶಿಂಗ್‌ ಇಷ್ಟಪಡುವವರಿಗೆ ಸಮುದ್ರದ ಕಡು ನೀಲಿ ಬಣ್ಣದ ಅಟ್ಲಾಂಟಿಕ್‌ ಬ್ಲ್ಯೂ ವಾಚ್‌ ಇದೆ. 

ಎಲ್ಲಾ ಟೈಟಾನಿಕ್‌ ಮಳಿಗೆಗಳಲ್ಲಿ ಈ ವಾಚ್‌ ಲಭ್ಯವಿದೆ. ಇದರ ಬೆಲೆ 23,495 ರೂ. ಮಾತ್ರ.

(ಸಾಂದರ್ಭಿಕ ಚಿತ್ರ)