ಮುಂಬೈ (ಅ.01): ದಸರಾ ಹಾಗೂ ದೀಪಾವಳಿ ಹಬ್ಬದ ಸಂದರ್ಭದಲ್ಲಿ, ಜಿಯೋಫೋನ್ ಕೇವಲ ₹699ರ ವಿಶೇಷ ಬೆಲೆಯಲ್ಲಿ ದೊರಕಲಿದೆ. ₹1,500ರ ಮೌಲ್ಯದ ಜಿಯೋ ಫೋನನ್ನು ಈ ಅವಧಿಯಲ್ಲಿ ಖರೀದಿಸಿದರೆ ಸುಮಾರು ₹800ರಷ್ಟು ಹಣ ಉಳಿತಾಯವಾಗಲಿದೆ.

ಇನ್ನೂ ವಿಶೇಷ ಏನಂದ್ರೆ, ಈ ಆಫರ್ ಪಡೆಯಲು ನೀವು ನಿಮ್ಮ ಹಳೆಯ ಫೋನನ್ನು ವಿನಿಮಯ ಮಾಡಬೇಕು ಎನ್ನುವಂತಹ ಯಾವ ನಿಬಂಧನೆಯೂ ಇಲ್ಲ!

ಇನ್ನೂ 2G ಜಾಲವನ್ನು ಬಳಸುತ್ತಿರುವ ಸುಮಾರು 35 ಕೋಟಿ ಭಾರತೀಯರ ಕೈಗೆ ಸ್ಮಾರ್ಟ್‌ಫೋನ್ ಈಗಲೂ ತಲುಪಿಲ್ಲ. ಅದಾಗ್ಯೂ ಕಡಿಮೆ ಗುಣಮಟ್ಟದ 2G ಡೇಟಾಕ್ಕೆ ಹೆಚ್ಚು ಶುಲ್ಕವನ್ನು ಅವರು ತೆರುತ್ತಿದ್ದಾರೆ. ಅವರಿಗೆ ಉಚಿತ ವಾಯ್ಸ್ ಕರೆಗಳ ಸೌಲಭ್ಯವೂ ಇಲ್ಲ, ಅಂತರಜಾಲವನ್ನು ಬಳಸುವ ಅವಕಾಶವೂ ಇಲ್ಲ. ಈ ಹಿನ್ನೆಲೆಯಲ್ಲಿ, ಜಿಯೋ ಇನ್ನೊಂದು ಮಹತ್ವದ ಹೆಜ್ಜೆ ಇಟ್ಟಿದ್ದು, ಜಿಯೋಫೋನ್ ದೀಪಾವಳಿ 2019 ಕೊಡುಗೆ ಎಂಬ ಹೆಸರಿನ ವಿಶೇಷ ಕೊಡುಗೆಯನ್ನು ಪ್ರಕಟಿಸಿದೆ.  

ಇದನ್ನೂ ಓದಿ: ವಿಶ್ವ ಕಾಪಾಡುವ ಹೊಸ ಪರಿ; ಇನ್ಫೋಸಿಸ್‌ ಮುಡಿಗೆ ಇನ್ನೊಂದು ಗರಿ...

ದೀಪಾವಳಿ 2019 ಕೊಡುಗೆಯ ಮೂಲಕ ಜಿಯೋಗೆ ಸೇರುವ ಜಿಯೋಫೋನ್ ಗ್ರಾಹಕರಿಗೆ ಜಿಯೋ ವತಿಯಿಂದ ₹700 ಮೌಲ್ಯದ ಡೇಟಾ ಲಾಭ ದೊರಕಲಿದೆ. ಗ್ರಾಹಕರು ಮಾಡುವ ಮೊದಲ 7 ರೀಚಾರ್ಜ್‌ಗಳಿಗೆ, ತಲಾ ₹99 ಮೌಲ್ಯದ ಡೇಟಾವನ್ನು ಜಿಯೋ ಹೆಚ್ಚುವರಿಯಾಗಿ ನೀಡಲಿದೆ.  

₹700 ಮೌಲ್ಯದ ಈ ಹೆಚ್ಚುವರಿ ಡೇಟಾದಿಂದ ಮನರಂಜನೆ, ಪಾವತಿಗಳು, ಇ-ಕಾಮರ್ಸ್, ಶಿಕ್ಷಣ, ಕಲಿಕೆ, ರೈಲು ಮತ್ತು ಬಸ್ ಬುಕಿಂಗ್, ಕೃತಕ ಬುದ್ಧಿಮತ್ತೆಯ (ಎಐ) ಆಪ್‌ಗಳು ಮತ್ತಿತರ ಅನೇಕ ಸವಲತ್ತುಗಳ ಹಿಂದೆಂದೂ ನೋಡಿರದ ಜಗತ್ತನ್ನು ಪ್ರವೇಶಿಸುವುದು ಜಿಯೋಫೋನ್ ಗ್ರಾಹಕರಿಗೆ ಸಾಧ್ಯವಾಗಲಿದೆ, ಎಂದು ಕಂಪನಿಯು ಹೇಳಿದೆ.  

"ಕೈಗೆಟುಕುವ ಬೆಲೆಯ ಅಂತರ್ಜಾಲದಿಂದ ಹಾಗೂ ಡಿಜಿಟಲ್ ಕ್ರಾಂತಿಯ ಫಲಗಳಿಂದ ಯಾವ ಭಾರತೀಯರೂ ವಂಚಿತರಾಗದಂತೆ ಜಿಯೋ ಖಾತರಿಪಡಿಸಲಿದೆ. 'ಜಿಯೋಫೋನ್ ದೀಪಾವಳಿ ಉಡುಗೊರೆ'ಯನ್ನು ನೀಡುವ ಮೂಲಕ, ಆರ್ಥಿಕ ಕೆಳಸ್ತರದಲ್ಲಿರುವ ಪ್ರತಿಯೊಬ್ಬ ಹೊಸ ವ್ಯಕ್ತಿಯನ್ನೂ ಅಂತರ್ಜಾಲದ ವ್ಯವಸ್ಥೆಗೆ ಕರೆತರುವ ಪ್ರಯತ್ನ ಇದಾಗಿದೆ, ಎಂದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷ ಹಾಗೂ ಕಾರ್ಯಕಾರಿ ನಿರ್ದೇಶಕ ಮುಖೇಶ್ ಅಂಬಾನಿ ಹೇಳಿದ್ದಾರೆ.