ಫೋಟೋ ಮತ್ತು ವಿಡಿಯೋಗಳನ್ನು ಡಿಲೀಟ್ ಮಾಡಿದ ನಂತರವೂ ಫೋನ್ ಮೆಮೊರಿ ಫುಲ್ ಎಂದು ತೋರಿಸುತ್ತಿದ್ದರೆ, ಅದಕ್ಕೆ ಪರಿಹಾರವಿದೆ. ಗೂಗಲ್ ಕ್ರೋಮ್‌ನ ಸೈಟ್ ಸೆಟ್ಟಿಂಗ್ಸ್‌ನಲ್ಲಿ ಸಂಗ್ರಹವಾಗಿರುವ ಅನಗತ್ಯ ಡೇಟಾವನ್ನು ತೆಗೆದುಹಾಕುವ ಮೂಲಕ ಸ್ವಲ್ಪ ಜಾಗವನ್ನು ಪಡೆಯಬಹುದು. ಇಲ್ಲಿದೆ ಟಿಪ್ಸ್​

ಈಗಿನ ಬಹುತೇಕ ಫೋನ್​ಗಳಲ್ಲಿ ಮೆಮೊರಿ ಪವರ್​ ಜಾಸ್ತಿನೇ ಇರುತ್ತದೆ. ಇದರ ಹೊರತಾಗಿಯೂ ಹೋದ ಹೋದಲ್ಲಿ ಫೋಟೋ, ಸೆಲ್ಫಿ ಕ್ಲಿಕ್​ ಮಾಡಿಕೊಳ್ಳುವುದು, ವಿಡಿಯೋ ತೆಗೆಯುವ ಸ್ವಭಾವ ಇರುವವರಿಗೆ ಮೊಬೈಲ್​ ಫೋನ್​ನಲ್ಲಿ ಎಷ್ಟೇ ಮೆಮೋರಿ ಇದ್ದರೂ ಸಾಕಾಗುವುದಿಲ್ಲ. ಆ ಸಮಯದಲ್ಲಿ ಕೆಲವೊಮ್ಮೆ ಅನಗತ್ಯ ಎನ್ನಿಸಿರುವ ಫೋಟೋ, ವಿಡಿಯೋಗಳನ್ನು ಡಿಲೀಟ್​ ಮಾಡಿದರೂ ಮೆಮೊರಿ ಫುಲ್​ ಎಂದೇ ತೋರಿಸುತ್ತಿರುತ್ತದೆ. ಎಲ್ಲಿ, ಏನು ಮಾಡಿದರೂ ಒಂದು ಫೋಟೋ ಕ್ಲಿಕ್​ ಮಾಡುವ ಸಮಯದಲ್ಲಿಯೇ ಮತ್ತೆ memory full ಎಂದು ಬರುತ್ತದೆ. ಮೆಮೊರಿ ಎಲ್ಲಿ ತುಂಬಿರುತ್ತದೆ ಎಂದು ಹುಡುಕುವುದೇ ಕಷ್ಟ ಎಂದು ಎನ್ನಿಸುತ್ತದೆ.

ಈ ಟ್ರೀಕ್ಸ್​ ಫಾಲೋ ಮಾಡಿ

ಅಂಥ ಸಮಯದಲ್ಲಿ ನೀವು ಈ ಟ್ರಿಕ್ಸ್​ ಫಾಲೋ ಮಾಡಿದ್ರೆ ಮೆಮೊರಿ ಫುಲ್​ ಎನ್ನುವ ಸೂಚನೆ ಬರುವುದಿಲ್ಲ. ನೀವು ವಿಡಿಯೋ, ಫೋಟೋ ಎಲ್ಲವೂ ಡಿಲೀಟ್ ಮಾಡಿದ ಮೇಲೆ ಕೂಡ ಮೆಮೊರಿ ಎಲ್ಲಿ ಅಡಗಿ ಕುಳಿತಿದೆ ಎಂದು ಕಂಡು ಹಿಡಿಯಬೇಕು ಎಂದರೆ ನೀವು ಮಾಡಬೇಕಿರುವುದು ಇಷ್ಟು.

ಹಂತ ಹಂತದ ಮಾಹಿತಿ ಇಲ್ಲಿದೆ...

- ಮೊದಲಿಗೆ ಕ್ರೋಮ್​ಗೆ ಹೋಗಿ

- ಮೂರು ಡಾಟ್​​ ಮೇಲೆ ಕ್ಲಿಕ್​ ಮಾಡಿ

- ಅಲ್ಲಿ ಕಾಣಿಸುವ ಸೆಟ್ಟಿಂಗ್ಸ್​ ಮೇಲೆ ಕ್ಲಿಕ್​ ಮಾಡಿ

- ಕೆಳಭಾಗದಲ್ಲಿ ಸೈಟ್​ ಸೆಟ್ಟಿಂಗ್ಸ್​ (Site Settings) ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್​ ಮಾಡಿ.

- ಇಲ್ಲಿ ಅತ್ಯಂತ ಕೊನೆಯಲ್ಲಿ ಡಾಟಾ ಸ್ಟೋರ್ಡ್​​ (data stored) ಎನ್ನುವುದರ ಮೇಲೆ ಕ್ಲಿಕ್​ ಮಾಡಿ

- ಅಲ್ಲಿ ನೀವು ಗೂಗಲ್​ ಕ್ರೋಮ್​ನಲ್ಲಿ ಯಾವೆಲ್ಲಾ ವೆಬ್​ಸೈಟ್​ಗೆ ಹೋಗಿದ್ದೀರೋ ಅವುಗಳನ್ನು ಪರಿಶೀಲಿಸಬಹುದು. ಎಲ್ಲವೂ ಅನಗತ್ಯ ಎನ್ನಿಸಿದರೆ ಒಟ್ಟಾಗಿ ಎಲ್ಲವನ್ನೂ ಡಿಲೀಟ್​ ಮಾಡಿ. ಇಲ್ಲದೇ ಹೋದರೆ ಮುಂದೆ ಕಾಣಿಸುವ ಮೂರು ಡಾಟ್​ ಮೇಲೆ ಕ್ಲಿಕ್​ ಮಾಡಿ ನಿಮಗೆ ಬೇಡದೇ ಇರುವ ವೆಬ್​ಸೈಟ್​ ಲಿಂಕ್​ ಡಿಲೀಟ್​ ಮಾಡಬಹುದು.

- ಇದರಿಂದ ನಿಮಗೆ ಒಂದಿಷ್ಟು ಜಾಗವು ಮೊಬೈಲ್​ನಲ್ಲಿ ಸಿಗುತ್ತದೆ. ಇದರಲ್ಲಿ ಅತಿಯಾದ ಜಾಗವೇನೂ ಸಿಗುವುದಿಲ್ಲ. ಆದರೆ ಇಂಟರ್​ನಲ್​ ಆಗಿ ಸ್ಟಾಕ್​ ಆಗಿರುವ ಕೆಲಮಟ್ಟಿನ ಜಾಗವು ಸಿಗುವ ಹಿನ್ನೆಲೆಯಲ್ಲಿ, ಮೆಮೊರಿ ಫುಲ್​ ಎನ್ನುವುದು ತೋರಿಸುವುದಿಲ್ಲ. ಜೊತೆಗೆ, ಫೋನ್​ ಕೂಡ ಸ್ಪೀಡ್​ ಆಗಿ ವರ್ಕ್​​ ಆಗುತ್ತದೆ.