Asianet Suvarna News Asianet Suvarna News

ಚೀನಾದ 5Gಯನ್ನು ಹಿಂದಿಕ್ಕಿದೆ ಈ ರಾಷ್ಟ್ರ!: 1 ಸೆಕೆಂಡ್ ನಲ್ಲಿ ಒಂದು ಮೂವಿ!

5G ಸೇವೆಯಲ್ಲಿ ಚೀನಾ, ಅಮೆರಿಕಾ ಹಾಗೂ ಜಪಾನ್ ರಾಷ್ಟ್ರಗಳು ಹಿಂದೆ| ರಾಷ್ಟ್ರೀಯ ಮಟ್ಟದಲ್ಲಿ 5ಜಿ ಸೇವೆ ಆರಂಭಿಸಿದ ಮೊದಲ ರಾಷ್ಟ್ರ!

South Korea launches world s first nationwide 5G mobile network
Author
Bangalore, First Published Apr 4, 2019, 5:27 PM IST

ಸಿಯೋಲ್[ಏ.04]: 5ನೇ ಪೀಳಿಗೆ ಮೊಬೈಲ್ ಸೇವೆ ಅಂದರೆ 5ಜಿ ಸೇವೆ ಆರಂಭಿಸುವ ರೇಸ್ ನಲ್ಲಿ ದಕ್ಷಿಣ ಕೊರಿಯಾ ಗೆದ್ದಿದೆ. ತಾವು ನಿರ್ಧಾರಿತ ಸಮಯಕ್ಕಿಂತ ಎರಡು ದಿನ ಮೊದಲೇ ಅಂದರೆ ಗುರುವಾರದಂದು ರಾಷ್ಟ್ರೀಯ ಮಟ್ಟದಲ್ಲಿ 5ಜಿ ಸೇವೆ ಆರಂಭಿಸಿದ್ದೇವೆ ಎಂದು ಇಲ್ಲಿನ ದೂರ ಸಂಪರ್ಕ ಕಂಪೆನಿಗಳು ತಿಳಿಸಿವೆ. ದಕ್ಷಿಣ ಕೊರಿಯಾದ ದೂರ ಸಂಪರ್ಕ ಸೇವೆ ಒದಗಿಸುವ SK ಟೆಲಿಕಾಂ, KT ಹಾಗೂ LG ಯೂಪ್ಲಸ್ ಈ ಟಾಪ್ 3 ಕಂಪೆನಿಗಳು ಬುಧವಾರದಂದು ರಾತ್ರಿ 11 ಗಂಟೆಗೆ 5G ಸೇವೆ ಆರಂಭಿಸಿವೆ. ಈ ಮೊದಲು ಏಪ್ರಿಲ್ 5ರಂದು 5G ಸೇವೆಗೆ ಮಾರ್ಪಾಡಾಗುವುದಾಗಿ ನಿರ್ಧರಿಸಲಾಗಿತ್ತು.

ಎಲ್ಲರಿಗಿಂತಲೂ ಮೊದಲು 5G ಸೇವೆ ಆರಂಭಿಸುವ ರೇಸ್ ನಲ್ಲಿ ದಕ್ಷಿಣ ಕೊರಿಯಾದೊಂದಿಗೆ ಅಮೆರಿಕಾ, ಚೀನಾ ಹಾಗೂ ಜಪಾನ್ ಪೈಪೋಟಿಯಲ್ಲಿದ್ದವು. ಆದರೀಗ ದಕ್ಷಿಣ ಕೊರಿಯಾ ಅವಧಿಗೂ ಮುನ್ನವೇ 5ಜಿ ಸೇವೆ ಆರಂಭಿಸಿರುವುದರಿಂದ ಅಮೆರಿಕಾದ ದೂರ ಸಂಪರ್ಕ ಕಂಪೆನಿ ವೆರಿಜಾನ್ ಮೇಲೆ 5ಜಿ ಆರಂಭಿಸಲು ಮತ್ತಷ್ಟು ಒತ್ತಡ ಬಿದ್ದಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.  

ಇದು 5ಜಿ ತಂತ್ರಜ್ಞಾನಕ್ಕೊಳಪಟ್ಟ ವಿಶ್ವದ ಮೊದಲ ಜಿಲ್ಲೆ!

ಬುಧವಾರದಂದು ನಡೆದ ಕಾರ್ಯಕ್ರಮವೊಂದಲ್ಲಿ ಅಮೆರಿಕಾದ ಕಂಪೆನಿ ವೆರಿಜಾನ್ ಶಿಕಾಗೋ ಹಾಗೂ ಮಿನಿಪೀಲಿಸ್ ನಗರಗಳಲ್ಲಿ 5ಜಿ ಆರಂಭಿಸಿದೆ. ಅಮೆರಿಕಾ ತಾನು ನಿರ್ಧರಿಸಿದ್ದ  ಸಮಯಕ್ಕಿಂತ ಒಂದು ವಾರದ ಮೊದಲೇ 2 ನಗರಗಳಲ್ಲಿ ಈ ಸೇವೆ ಆರಂಭಿಸಿದೆ ಎಂಬುವುದು ಗಮನಾರ್ಹ.

ದಕ್ಷಿಣ ಕೊರೊಯಾ ಈ ಸೇವೆ ಆರಂಭಿಸಿದೆಯಾದರೂ ಇಲ್ಲಿನ ಗ್ರಾಹಕರಿಗೆ ಏಪ್ರಿಲ್ 5ರಿಂದ ಈ ಸೇವೆ ಲಭ್ಯವಾಗಲಿವೆ. 5ಜಿ ಸೇವೆಯಿಂದ ಇಂಟರ್ನೆಟ್ ಸ್ಪೀಡ್ ಹೆಚ್ಚಾಗಲಿದೆ. 4ಜಿಗಿಂತ ಶೇ. 20ರಷ್ಟು ಹೆಚ್ಚು ಸ್ಪೀಡ್ ಹೊಂದಲಿದೆ. ಈ ಮೂಲಕ ಗ್ರಾಹಕರು ಕೇವಲ 1ಸೆಕೆಂಡ್ ನಲ್ಲಿ ಇಡೀ ಸಿನಿಮಾ ಡೌನ್ ಲೋಡ್ ಮಾಡಬಹುದು.

 

Follow Us:
Download App:
  • android
  • ios