ಬೆಂಗಳೂರು (ಜು.30): ಕಳೆದ ತ್ರೈಮಾಸಿಕ ಅವಧಿಯಲ್ಲಿ ಭಾರತದಲ್ಲಿ ಸ್ಮಾರ್ಟ್‌ಫೋನ್ ಮಾರಾಟ ಕೊಂಚ ಕಡಿಮೆಯಾಗಿದೆ ಎಂದು ಮಾರುಕಟ್ಟೆ ಅಧ್ಯಯನ ಸಂಸ್ಥೆಯ ವರದಿಯೊಂದು ಹೇಳಿದೆ.

2018ರ ಎರಡನೇ ತ್ರೈಮಾಸಿಕ ಅವಧಿಯಲ್ಲಿ (ಏಪ್ರಿಲ್ -ಜೂನ್) 33.1 ಮಿಲಿಯನ್ ಸ್ಮಾರ್ಟ್‌ಫೋನ್‌ಗಳು ಶಿಪ್ಪಿಂಗ್ ಆಗಿದ್ದುವು. ಅದಕ್ಕೆ ಹೋಲಿಸಿದಾಗ, ಈ ಬಾರಿ ಅದೇ ಅವಧಿಯಲ್ಲಿ ಆ ಸಂಖ್ಯೆ 33 ಮಿಲಿಯನ್‌ಗೆ ಸೀಮಿತವಾಗಿದೆ, ಎಂದು ಮಾರುಕಟ್ಟೆ ಅಧ್ಯಯನ ಸಂಸ್ಥೆ ಕ್ಯಾನಲಿಸ್ ಹೇಳಿದೆ.

ಸ್ಮಾರ್ಟ್‌ಫೋನ್ ಶಿಪ್‌ಮೆಂಟ್‌ನಲ್ಲಿ 0.5 ಶೇ. ಕುಸಿತ ಕಂಡುಬಂದಿದ್ದು, ಭಾರತೀಯ ಸ್ಮಾರ್ಟ್‌ಫೋನ್ ಬಳಕೆದಾರರು ತಮ್ಮ ಫೋನ್‌ಗಳನ್ನು ಅಪ್ಗ್ರೇಡ್ ಮಾಡಿಲ್ಲ ಎಂದಿದೆ.

ಇದನ್ನೂ ಓದಿ | ಒಂದು ಕೈ ನೋಡೇ ಬಿಡೋಣ... WhatsAppಗೆ ಸೆಡ್ಡುಹೊಡೆಯಲು BSNL ಹೊಸ ಪ್ರಯೋಗ!

ಅಧ್ಯಯನದ ಪ್ರಕಾರ ಚೀನಾದ ಮೊಬೈಲ್ ದ್ಯೆತ್ಯ ಶ್ಯೋಮಿ ಎಂದಿನಂತೆ ಮುಂಚೂಣಿಯಲ್ಲಿದೆ. ಮೇಲೆ ಉಲ್ಲೇಖಿಸಿದ ಅವಧಿಯಲ್ಲಿ, ಶ್ಯೋಮಿಯು 10.3 ಮಿಲಿಯನ್ (31%) ಯೂನಿಟ್‌ಗಳನ್ನು ಶಿಪ್‌ಮೆಂಟ್ ಮಾಡಿದೆ. ಕಳೆದ 8 ತ್ರೈಮಾಸಿಕ ಅವಧಿಯಿಂದ ಶ್ಯೋಮಿ ಮುನ್ನಡೆ ಕಾಯ್ದುಕೊಂಡು ಬಂದಿರುವುದು ಇನ್ನೊಂದು ವಿಶೇಷ.

ದಕ್ಷಿಣ ಕೊರಿಯಾದ ಸ್ಯಾಮ್ಸಂಗ್ ಕಂಪನಿಯು ಎರಡನೇ ಸ್ಥಾನದಲ್ಲಿದ್ದು, 7.3 ಮಿಲಿಯನ್ (22%) ಯೂನಿಟ್‌ಗಳನ್ನು ಶಿಪ್ಪಿಂಗ್ ಮಾಡಿದೆ.

ಈ ಅವಧಿಯಲ್ಲಿ ವಿವೋ 5.8 ಮಿಲಿಯನ್ (18%) ಯೂನಿಟ್‌ಗಳನ್ನು ಶಿಪ್ಪಿಂಗ್ ಮಾಡಿದ್ದರೆ, ಒಪ್ಪೋ 3 ಮಿಲಿಯನ್ (9%), ಮತ್ತು ರಿಯಲ್‌ಮಿ 2.7 ಮಿಲಿಯನ್ (8%) ಮಾಡಿ 5ನೇ ಸ್ಥಾನದಲ್ಲಿದೆ.