ಈಗ ವೈರ್‌ ಇರುವ ಇಯರ್‌ಫೋನ್‌ಗಳಿಗೆ ಡಿಮ್ಯಾಂಡ್‌ ಕಡಿಮೆ. ಏನಿದ್ದರೂ ವೈರ್‌ಲೆಸ್‌ ಇಯರ್‌ಫೋನ್‌ಗಳ ಕಾಲ. ಇಂಥಾ ಸಂದರ್ಭದಲ್ಲಿ ಸ್ಕಲ್‌ಕ್ಯಾಂಡಿ ಕಂಪನಿ ಜಿಬ್‌ ಪ್ಲಸ್‌ ವೈರ್‌ಲೆಸ್‌ ಇಯರ್‌ ಫೋನ್‌ ಅನ್ನು ದೇಶಕ್ಕೆ ಅರ್ಪಿಸಿದೆ. 

ನೋಡೋಕೆ ಚೆನ್ನಾಗಿದೆ. ಕತ್ತಿನ ಸುತ್ತ ಧರಿಸಿಕೊಂಡರೆ ಆರಾಮಾಗಿರುತ್ತದೆ. ಇಯರ್‌ಬಡ್‌ ಕರೆಕ್ಟಾಗಿ ಕಿವಿಯಲ್ಲಿ ಕೂರುತ್ತದೆ. ಲೆಫ್ಟ್‌ ಸೈಡಲ್ಲಿ ವಾಲ್ಯುಂ ಜಾಸ್ತಿ, ಕಮ್ಮಿ ಮಾಡುವುದಕ್ಕೆ ಬಟನ್‌ಗಳಿವೆ. ಒಮ್ಮೆ ಬ್ಲೂಟೂಥ್‌ ಕನೆಕ್ಟ್ ಮಾಡಿಕೊಂಡು ಕಿವಿಗೆ ಧರಿಸಿದರೆ ಸಿರಿ ಅಥವಾ ಗೂಗಲ್‌ ಅಸಿಸ್ಟೆಂಟ್‌ ಇದ್ದರೆ ಫೋನ್‌ ಕಿಸೆಯಿಂದ ಆಗಾಗ ಆಚೆ ತೆಗೆಯುವ ಅಗತ್ಯವಿಲ್ಲ. ಅಷ್ಟು ಪಕ್ಕಾ ಈ ಇಯರ್‌ಫೋನು.

ಸಿನಿಮಾ ನೋಡಲು ಈ ಇಯರ್‌ಫೋನು ಮಜಾ ಕೊಡುತ್ತದೆ. ನೀವು ಎಷ್ಟು ವಾಲ್ಯುಂ ಇಟ್ಟರೆ ನಿಮ್ಮ ಕಿವಿಗೆ ಒಳ್ಳೆಯದು ಎಂಬ ಸಲಹೆಯನ್ನೂ ಜಿಬ್‌ ಪ್ಲಸ್‌ ನೀಡುತ್ತದೆ. ಹಾಗಾಗಿ ಸೇಫ್‌ ಅನ್ನುವಷ್ಟು ವ್ಯಾಲ್ಯುಂ ಇಟ್ಟುಕೊಳ್ಳಬಹುದು. 

ಇದನ್ನೂ ಓದಿ | ಲಗ್ಗೆ ಇಟ್ಟ ಹೊಸ ಆ್ಯಪಲ್ ಐ-ಫೋನ್: ವಿಡಿಯೋದಲ್ಲಿ ಮಾಹಿತಿಯ ಆಗರ

ಈ ಇಯರ್‌ಫೋನಿನ ಒಂದೇ ಒಂದು ಸಮಸ್ಯೆ ಎಂದರೆ ಟ್ರಾಫಿಕ್ಕಿನಲ್ಲಿ ಫೋನ್‌ ಬಂದರೆ ಒಂದೋ ನಿಮಗೆ ಸರಿಯಾಗಿ ವಾಯ್ಸ್ ಕೇಳಿಸುವುದಿಲ್ಲ, ಇಲ್ಲವೇ ನಿಮಗೆ ಫೋನ್‌ ಮಾಡಿದವರಿಗೆ ಧ್ವನಿ ಕೇಳಿಸಲ್ಲ. ಅದೊಂದು ಸ್ವಲ್ಪ ನಿರಾಶೆ ಉಂಟು ಮಾಡುತ್ತದೆ. ಅಲ್ಲದೇ ಬೇರೆ ವೈರ್‌ಲೆಸ್‌ ಇಯರ್‌ಬಡ್‌ಗಳಲ್ಲಿ ಇರುವಂತೆ ಇಲ್ಲಿ ಅಯಸ್ಕಾಂತ ಇಲ್ಲ. ನಡೆಯುವಾಗ ಅತ್ತಿತ್ತ ಅಲ್ಲಾಡುತ್ತಿರುತ್ತದೆ.

ಒಮ್ಮೆ ಬ್ಯಾಟರಿ ಚಾರ್ಜ್ ಮಾಡಿದರೆ ನಿರಂತರವಾಗಿ ಆರು ಗಂಟೆಗಳ ಕಾಲ ಈ ಇಯರ್‌ಫೋನ್‌ ಬಳಸಬಹುದು. ಫೋನ್‌ ಮಾತ್ರ ಬಳಸುವುದಾದರೆ ಬ್ಯಾಟರಿ ಒಂದು ದಿನ ಆರಾಮಾಗಿ ಬರುತ್ತದೆ. ಇದರ ಫೀಚರ್‌ ಮತ್ತು ಸೌಂಡ್‌ ನೋಡಿದರೆ ಇದರ ಬೆಲೆ ಸ್ವಲ್ಪ ಜಾಸ್ತಿಯಾಯಿತೇನೋ ಅನ್ನಿಸಬಹುದು. ಹಾಗಾಗಿ ಇದರ ಮೂಲ ಬೆಲೆ ರು. 2499 ಇದ್ದರೂ ಅಮೆಜಾನ್‌ನಲ್ಲಿ ಮಾತ್ರ ರು.1988ಕ್ಕೆ ದೊರೆಯುತ್ತಿದೆ.