ವಿದ್ಯುತ್ ಚಾಲಿತ ಕಾರಿನ ವಿನ್ಯಾಸದ ನೂತನ ಸಾಧನೆ: ಶಿವಮೊಗ್ಗದ ಜೆಎನ್‌ಎನ್‌ಸಿಇ ವಿದ್ಯಾರ್ಥಿಗಳ ಕಮಾಲ್

ಮನಸ್ಸಿದ್ದರೆ ಮಾರ್ಗ ಹೀಗಂತ ಹೇಳಿದರೆ ಆಗಲ್ಲ ಮಾಡಿ ತೋರಿಸಬೇಕು, ಶಿವಮೊಗ್ಗ ನಗರದ ಪ್ರತಿಷ್ಠಿತ ರಾಷ್ಟ್ರೀಯ ಶಿಕ್ಷಣ ಸಮಿತಿಗೆ ಸೇರಿದ ಜೆಎಸ್‌ಎಸ್ ಕಾಲೇಜ್ ಆಫ್ ಇಂಜಿನಿಯರಿಂಗ್ (ಜೆಎನ್‌ಎನ್‌ಸಿಐ) ನಲ್ಲಿನ, ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳು  ಸಾಧನೆಯೊಂದನ್ನು ಮಾಡಿ ತೋರಿಸಿದ್ದಾರೆ. 

shivamogga jnnce college students altered an old petrol vehicle into an electric car gvd

ವರದಿ: ರಾಜೇಶ್, ಶಿವಮೊಗ್ಗ

ಶಿವಮೊಗ್ಗ (ಆ.05): ಮನಸ್ಸಿದ್ದರೆ ಮಾರ್ಗ ಹೀಗಂತ ಹೇಳಿದರೆ ಆಗಲ್ಲ ಮಾಡಿ ತೋರಿಸಬೇಕು, ಶಿವಮೊಗ್ಗ ನಗರದ ಪ್ರತಿಷ್ಠಿತ ರಾಷ್ಟ್ರೀಯ ಶಿಕ್ಷಣ ಸಮಿತಿಗೆ ಸೇರಿದ ಜೆಎಸ್‌ಎಸ್ ಕಾಲೇಜ್ ಆಫ್ ಇಂಜಿನಿಯರಿಂಗ್ (ಜೆಎನ್‌ಎನ್‌ಸಿಐ) ನಲ್ಲಿನ, ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳು  ಸಾಧನೆಯೊಂದನ್ನು ಮಾಡಿ ತೋರಿಸಿದ್ದಾರೆ. ಮೆಕಾನಿಕಲ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಎಸ್.ಜೆ.ಅಮಿತ್ ಕುಮಾರ್ ರವರ ಮಾರ್ಗದರ್ಶನದಲ್ಲಿ ಸಾತ್ವಿಕ್ ಜಿ, ಅಭಿಷೇಕ್ ಜೆವಿನ್ D1, ಕಾರ್ತಿಕ್ ಶೆಟ್ಟಿ, ಮತ್ತು ಮನೋಹರ್ ಎಚ್‌.ಎಸ್ ವಿದ್ಯಾರ್ಥಿಗಳ ತಂಡವು 2021-2022ರ ಶೈಕ್ಷಣಿಕ ವರ್ಷದಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್‌ ಜ್ಞಾನ ಮತ್ತು ಕೌಶಲ್ಯವನ್ನು ಬಳಸಿಕೊಂಡು ವಿದ್ಯುತ್‌ ಚಾಲಿತ ಕಾರನ್ನು ಅಭಿವೃದ್ಧಿಪಡಿಸಿದ್ದಾರೆ.

ವಿದ್ಯಾರ್ಥಿಗಳ ಈ ಶಂಡ ಹಳೆಯ ಇಂಧನ ಚಾಲಿತ ಕಾರನ್ನು ನವೀಕರಿಸಿ ಮೆಕಾನಿಕಲ್ ಇಂಜಿನಿಯರಿಂಗ್‌ನಲ್ಲಿ ಕಲಿತಂಥಹ ಜ್ಞಾನ ಹಾಗೂ ಕೌಶಲ್ಯಗಳನ್ನು ಬಳಸಿಕೊಂಡು, ನೂತನ ವಿದ್ಯುತ್ ಚಾಲಿತ ಕಾರನ್ನು ವಿನ್ಯಾಸಗೊಳಿಸಿ ಎಲ್ಲಾ ವರ್ಗದ ಜನರಲ್ಲಿ ಹೊಸ ಭರವಸೆಯನ್ನು ಮೂಡಿಸಿದ್ದಾರೆ. ವಿದ್ಯುತ್‌ ಚಾಲಿತ ಕಾರನ್ನು ವಿನ್ಯಾಸಗೊಳಿಸುವ ಈ ಹೊಸ ಸಾಧನೆಗಾಗಿ, ಜೆಎನ್‌ಎನ್‌ಸಿಇಯಲ್ಲಿ ಸ್ಥಾಪಿಸಲಾದ ನ್ಯೂಜೆನ್ ಐಇಡಿಸಿ (NewGen IEDC), ಭಾರತ ಸರ್ಕಾರದಿಂದ ರೂ.250 ಲಕ್ಷದ ಆರ್ಥಿಕ ಅನುದಾನವನ್ನು ನೀಡಲಾಗಿದೆ.

ಸ್ವಾತಂತ್ರ್ಯೋತ್ಸವ ಅಮೃತ ಮಹೋ​ತ್ಸ​ವ: ಗೌರ​ವ​ಧ​ನ ಮೀಸ​ಲು

ಈ ಎಲೆಕ್ಟ್ರಿಕ್‌ ಕಾರಿನಲ್ಲಿರುವ ಬ್ಯಾಟರಿಯನ್ನು 4 ರಿಂದ 5 ಗಂಟೆಗಳತನಕ ಚಾರ್ಜ್ ಮಾಡಿದರೆ ಸಾಕು ಸುಮಾರು 80 ರಿಂದ 90 ಕಿಲೋಮೀಟರ್ ಮೈಲೇಜ್‌ ನೀಡಲಿದೆ. ಮನೆಯಲ್ಲಿಯೇ ಬ್ಯಾಟರಿ ರಿಚಾರ್ಜ್ ಮಾಡಬಹುದಾಗಿದೆ. ಹಾಗೂ ಒಂದು ಸಲ ಸಂಪೂರ್ಣ ಬ್ಯಾಟರಿ ರಿಚಾರ್ಜ್ಮಾಡಲು, 4 ರಿಂದ 5 ಯೂನಿಟ್ ವಿದ್ಯುತ್ ಶಕ್ತಿ ಅಗತ್ಯವಿದೆ. ಇದಕ್ಕಾಗಿ ಗರಿಷ್ಠ 20 ರಿಂದ 30 ರುಪಾಯಿಗಳಾಗುತ್ತದೆ. ವಿದ್ಯಾರ್ಥಿಗಳು ತಮ್ಮ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿಯ ಸಮಯದಲ್ಲಿ ಕಲಿಸಿರತಕ್ಕಂತಹಾ ತಾಂತ್ರಿಕ ಕೌಶಲ್ಯದ ಜ್ಞಾನದೊಂದಿಗೆ ಎಲೆಕ್ಟ್ರಿಕ್ ಕಾರ್‌ಗೆ ಅಗತ್ಯವಿರುವ ಬಲ ಮತ್ತು ಶಕ್ತಿಯನ್ನು ಮೌಲ್ಯಮಾವನ ಮಾಡಿ ಸ್ಥಳೀಯ ಕಾರಿನ ಟ್ರಾನ್ಸಿಷನ್ ಡ್ರೈವ್ ಸಿಮ್ಮೊಂದಿಗೆ, ಹೊಸ ಸೂಕ್ತವಾದ ಎಲೆಕ್ಟ್ರಿಕ್ ಪ್ರೈಮ್ ಮೂವರನ್ನು ಸಂಯೋಜಿಸಿ ನವೀಕರಿಸಿದ್ದಾರೆ.

96 ಗ್ರಾಮ​ಗ​ಳಲ್ಲಿ BSNL ನೆಟ್‌​ವರ್ಕ್ ಸಮ​ಸ್ಯೆ: ಕೇಂದ್ರಕ್ಕೆ ಪಟ್ಟಿ

ಈ ಎಲೆಕ್ಟ್ರಿಕ್ ಕಾರ್ ನಾಲ್ಕು ಫಾರ್ವರ್ಡ್‌ ಪ್ರೊಪಲ್ಟನ್ ಗರ್ ಮೆಕ್ಯಾನಿಸಂನೊಂದಿಗೆ ಒಂದು ರಿವರ್ಸ್ ಪ್ರೊಪಲ್ಟನ್‌ ಗೇರ್‌ಗಳನ್ನು ಹೊಂದಿದೆ. ಈ ಎಲೆಕ್ಟ್ರಿಕ್‌ ಕಾರನ್ನು ಸವಾರಿ ಮಾಡುವಾಗ ಜನರು ಅದ್ಭುತ ಮತ್ತು ಆರಾಮದಾಯಕ ಅನುಭವವನ್ನು ಅನುಭವಿಸಿದರು. ಈ ಹಿಂದೆ 2019-20 ಹಾಗು 2020-21 ನೇ ಶೈಕ್ಷಣಿಕ ವರ್ಷಗಳಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗಾದ ಹಿರಿಯ ವಿದ್ಯಾರ್ಥಿಗಳ ಇತರ ಮೂರು ತಂಡಗಳು ಎಟೆಕ್ನಿಕ್ ಕ್ವಾಡ್ ಬೈಕ್ ಎಲೆಕ್ನಿಕ್ ಗೇರ್ಡ್ ಬೈಕ್ ಮತ್ತು ಎಲೆಕ್ಟ್ರಿಕ್ ಸ್ಕೂಟರ್ ವಾಹನಗಳನ್ನೂ ಸಹಾಯಕ ಪ್ರಾಧ್ಯಾಪಕರಾದ ಡಾ. ಎಸ್.ಜಿ ಅಮಿಶ್‌ ಕುಮಾರ್ ಅವರ ಮಾರ್ಗದರ್ಶನದಲ್ಲಿ ಅಭಿವೃದ್ಧಿಪಡಿಸಿ ಮೊದಲ ಹಾಗೂ ಎರಡನೇ ಮೈಲಿಗಲ್ಲಾಗಿ ಸಾಧಿಸಿ ತೋರಿಸಿದ್ದರು. ಪ್ರಸ್ತುತ 2021-23 ನೇ ಕಣಿಕ ವರ್ಷದಲ್ಲಿ ಈಗಿನ ಹೊಸ ತಂಡವು ಅಭಿವೃದ್ಧಿಪಡಿಸಿದ ವಿಚ್ಚು ಈ ಚಾಲಿತ ಕಾರಿನ ವಿನ್ಯಾಸದ ಈ ನೂತನ ಸಾಧನೆ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಮೂರನೇ ಮೈಲಿಗಲ್ಲನ್ನಾಗಿ ಮಾಡಿ ಸಾಧಿಸಿ ತೋರಿಸಿದ್ದಾರೆ.

Latest Videos
Follow Us:
Download App:
  • android
  • ios