ಬನ್ನಿ ನ್ಯಾಶನಲ್ ಕಾಲೇಜಿಗೆ: ಸಾಕ್ಷಿಯಾಗಿ ವಿಜ್ಞಾನ ಉತ್ಸವದ ಮೋಜಿಗೆ!
ಡಿ.16(ಸೋಮವಾರ) ನ್ಯಾಶನಲ್ ಕಾಲೇಜಿನಲ್ಲಿ ವಿಜ್ಞಾನ ಉತ್ಸವ| ಬಿ.ವಿ.ಜಗದೀಶ್ ವಿಜ್ಞಾನ ಕೇಂದ್ರ, ನೆಹರು ತಾರಾಲಯದ ಸಹಭಾಗಿತ್ವ| `ಸೈನ್ಸ್ ಇನ್ ಆ್ಯಕ್ಷನ್’ ವಿಜ್ಞಾನ ಉತ್ಸವ ಉದ್ಘಾಟನಾ ಸಮಾರಂಭ| ಉತ್ಸವ ದ ಮಹತ್ವದ ಕುರಿತು ಮಾಹಿತಿ ನೀಡಿದ ಪ್ರೋ.ಎ.ಎಚ್.ರಾಮರಾವ್| ಡಿ.16 ರಿಂದ ಡಿ.18ರ ವರೆಗೆ ಒಟ್ಟು ಮೂರು ದಿನಗಳ ಕಾಲ ವಿಜ್ಞಾನ ಉತ್ಸವ| ವಿಜ್ಞಾನ ಉತ್ಸವ ಉದ್ಘಾಟಿಸಲಿರುವ ಎಸ್.ಎಸ್. ಅಯ್ಯಂಗಾರ್|
ಬೆಂಗಳೂರು(ಡಿ.15): ಬಿ.ವಿ.ಜಗದೀಶ್ ವಿಜ್ಞಾನ ಕೇಂದ್ರ ಮತ್ತು ಜವಾಹರಲಾಲ್ ನೆಹರು ತಾರಾಲಯದ ಸಹಭಾಗಿತ್ವದಲ್ಲಿ, ಇದೇ ಡಿ.16(ಸೋಮವಾರ) ಬೆಂಗಳೂರಿನ ಜಯನಗರದಲ್ಲಿರುವ ನ್ಯಾಶನಲ್ ಕಾಲೇಜಿನಲ್ಲಿ ಮೂರು ದಿನಗಳ ವಿಜ್ಞಾನ ಉತ್ಸವ, `ಸೈನ್ಸ್ ಇನ್ ಆ್ಯಕ್ಷನ್’ ಹಮ್ಮಿಕೊಳ್ಳಲಾಗಿದೆ.
ನೂರಾರು ಸಂವಾದಾತ್ಮಕ ವಿಜ್ಞಾನ ಮಾದರಿಗಳು ಮತ್ತು ಹ್ಯುಮನಾಯ್ಡ್, ಮೊಬೈಲ್ ತಾರಾಲಯ, 3 ಡಿ ಮುದ್ರಕ, ಇಸ್ರೋದ ಉಪಗ್ರಹಗಳ ಸ್ಕೇಲ್ಡ್ ಮಾದರಿಗಳ ಪ್ರದರ್ಶನ ಇರಲಿದೆ.
ಈ ಕುರಿತು ಮಾಹಿತಿ ನೀಡಿರುವ ರಾಷ್ಟ್ರೀಯ ಶಿಕ್ಷಣ ಸೊಸೈಟಿಯ ಅಧ್ಯಕ್ಷ ಪ್ರೋ.ಎ.ಎಚ್.ರಾಮರಾವ್, ಕಂಪ್ಯೂಟರ್ ಲ್ಯಾಬ್, ಎಲೆಕ್ಟ್ರಾನಿಕ್ಸ್ ಮತ್ತು ಐಒಟಿ ಲ್ಯಾಬ್‌ಗಳಲ್ಲಿನ ಅವರ್ ಕೋಡ್ ಮುಂತಾದವು ಉತ್ಸವದ ಪ್ರಮುಖ ಆಕರ್ಷಣೆಗಳು ಎಂದು ಹೇಳಿದರು.
ಗವಿ ಗಂಗಾಧರೇಶ್ವರ ಸೂರ್ಯ ಮಜ್ಜನ, ಬದಲಾಗತ್ತೆ ದಿನ: ಹೇಳತ್ತೆ ವಿಜ್ಞಾನ!
ಪದವಿ ಮತ್ತು ಸಂಶೋಧನಾ ಮಟ್ಟದ ವಿಜ್ಞಾನ ಪ್ರಯೋಗಾಲಯದ ಕುರಿತು ಜನರಲ್ಲಿ ಅರಿವು ಮೂಡಿಸುವ ಉದ್ದೇಶದೊಂದಿಗೆ ವಿಜ್ಞಾನ ಉತ್ಸವ ಹಮ್ಮಿಕೊಳ್ಳಲಾಗಿದೆ ಎಂದು ರಾಮರಾವ್ ಸ್ಪಷ್ಟಪಡಿಸಿದರು.
ಇನ್ನು ಉತ್ಸವದಲ್ಲಿ ಹವ್ಯಾಸಿ ಖಗೋಳ ಶಾಸ್ತ್ರಜ್ಞರು ಭಾಗವಹಿಸುವುದರಿಂದ ಖಗೋಳ ಕ್ಷೇತ್ರದ ಕುರಿತು ಜನರಲ್ಲಿ ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಪ್ರಯತ್ನ ಇದಾಗಿದೆ ಎಂದು ರಾಮರಾವ್ ಹೇಳಿದರು.
ಅಮೆರಿಕದ ಫ್ಲೋರಿಡಾ ಇಂಟರ್ನ್ಯಾಷನಲ್ ಯೂನಿವರ್ಸಿಟಿಯ ಸ್ಕೂಲ್ ಆಫ್ ಕಂಪ್ಯೂಟಿಂಗ್ ಮತ್ತು ಮಾಹಿತಿ ವಿಜ್ಞಾನ ವಿಭಾಗದ ನಿರ್ದೇಶಕ ಎಸ್.ಎಸ್. ಅಯ್ಯಂಗಾರ್ ವಿಜ್ಞಾನ ಉತ್ಸವವನ್ನು ಉದ್ಘಾಟಿಸಲಿದ್ದಾರೆ. ಉತ್ಸವವು ಡಿ.16 ರಿಂದ ಡಿ.18ರ ವರೆಗೆ ಒಟ್ಟು ಮೂರು ದಿನಗಳ ಕಾಲ ನಡೆಯಲಿದೆ.
ವಿಜ್ಞಾನ, ಅಧ್ಯಾತ್ಮ ಸ್ವತಂತ್ರ ಮತ್ತು ಪೂರಕ ಕ್ಷೇತ್ರಗಳು: ಡಾ. ಜಯಂತ್ ವ್ಯಾಸನಕೆರೆ!