ಕೃತಕ ಬುದ್ಧಿಮತ್ತೆ ಮತ್ತು ರೋಬೋಟ್‌ಗಳು ಉದ್ಯೋಗಗಳನ್ನು ಕಸಿಯುತ್ತಿರುವ ಆತಂಕದ ನಡುವೆ, ಚೀನಾದಲ್ಲಿ ಯುವತಿಯೊಬ್ಬಳಿಗೆ ರೋಬೋಟ್ ಫುಡ್ ಡೆಲಿವರಿ ಮಾಡಿರುವ ವಿಡಿಯೋ ವೈರಲ್ ಆಗಿದೆ. ಈ ತಂತ್ರಜ್ಞಾನ ಭಾರತಕ್ಕೂ ಬಂದರೆ ಫುಡ್ ಡೆಲಿವರಿ ಉದ್ಯೋಗಗಳಿಗೆ ಕುತ್ತು ಬರುವ ಸಾಧ್ಯತೆಯನ್ನು ಈ ಲೇಖನ ವಿವರಿಸುತ್ತದೆ.

ಇದಾಗಲೇ ಎಲ್ಲಾ ಕ್ಷೇತ್ರಗಳಲ್ಲಿಯೂ ರೋಬೋಟ್​, ಕೃತಕ ಬುದ್ಧಿಮತ್ತೆ ಕಾಲಿಟ್ಟಾಗಿದೆ. ಇದರಿಂದ ಇದಾಗಲೇ ಲಕ್ಷ ಲಕ್ಷ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ. ಇನ್ನೂ ಹಲವಾರು ದೈತ್ಯ ಟೆಕ್​ ಕಂಪೆನಿಗಳು ಜನರ ಬದಲಿಗೆ ಎಐ ಬಳಕೆ ಮಾಡುತ್ತಿರುವ ಕಾರಣದಿಂದ ಸಾಫ್ಟ್​ವೇರ್​ ಎಂಜಿನಿಯರಿಂಗ್ ಕಲಿಯುತ್ತಿರುವವರಿಗೆ ಆತಂಕ ಶುರುವಾಗಿದೆ. ಕರ್ನಾಟಕದಲ್ಲಿಯೇ ಹೇಳುವುದಾದರೆ ಕೇವಲ 17 ಪರ್ಸೆಂಟ್​ ಸಾಫ್ಟ್​ವೇರ್​ ಎಂಜಿನಿಯರಿಂಗ್ ಕಲಿಯುತ್ತಿರುವವರಿಗೆ ಮಾತ್ರ ಉದ್ಯೋಗ ಸಿಗುತ್ತದೆ ಎಂದು ಈಚೆಗೆ ವರದಿ ಬಂದಿದೆ.

Add Asianetnews Kannada as a Preferred SourcegooglePreferred

ಅದು ಒಂದೆಡೆಯಾದರೆ ಇದಾಗಲೇ ಹೋಟೆಲ್​ಗಳಲ್ಲಿ ಆಹಾರ ಸರಬರಾಜು ಮಾಡಲು ರೋಬೋಟ್​ ಬಂದಾಗಿದೆ. ಬೆಂಗಳೂರಿನಲ್ಲಿಯೂ ಇದರ ಪ್ರಯೋಗ ನಡೆದಿದೆ. ಆದರೆ ಇದೀಗ ಶಾಕಿಂಗ್ ಎನ್ನುವಂತೆ ಫುಡ್​ ಡೆಲವರಿ ಬಾಯ್ಸ್​ ಕೆಲಸವನ್ನೂ ರೋಬೋಟ್​ ಕಸಿದುಕೊಳ್ಳತ್ತಾ ಎನ್ನುವ ಆತಂಕ ಎದುರಾಗಿದೆ. ಅದಕ್ಕೆ ಕಾರಣ ಯುವತಿಯೊಬ್ಬರು ಹಾಕಿರುವ ವಿಡಿಯೋ.

ಯುವತಿಯ ವಿಡಿಯೋ

ಇಂದು ಹೆಚ್ಚಿನವರಿಗೆ ಮನೆಯಲ್ಲಿಯೇ ತರಿಸಿಕೊಂಡು ತಿನ್ನುವ ಅಭ್ಯಾಸ. ವಯಸ್ಸಾದವರು ಕಷ್ಟಪಟ್ಟಾದರೂ ವಾಕಿಂಗ್​ ಮಾಡುತ್ತಾ ಇದ್ದರೆ, ಯುವಕ-ಯುವತಿಯರಿಗೆ ಹೋಟೆಲ್​ಗೂ ಹೋಗಲು ಬೋರ್​, ಮನೆಯಲ್ಲಿಯೂ ಅಡುಗೆ ಮಾಡಿಕೊಳ್ಳಲು ಆಗದ ಕೆಲಸ. ಆದ್ದರಿಂದ ಕುಳಿತಲ್ಲಿಯೇ ತರಿಸಿಕೊಂಡು ತಿನ್ನುವವರ ಸಂಖ್ಯೆ ಹೆಚ್ಚಾಗಿದ್ದರಂತೆ, ಇಂದು ಫುಡ್​ ಡೆಲವರಿಯನ್ನು ಸಹಸ್ರಾರು ಮಂದಿ ನಂಬಿದ್ದಾರೆ. ಅವರ ಉದ್ಯೋಗಕ್ಕೂ ಶೀಘ್ರದಲ್ಲಿಯೇ ಆತಂಕ ಎದುರಾಗಲಿದೆಯೇ ಎನ್ನುವ ಪ್ರಶ್ನೆ ಈ ವಿಡಿಯೋ ಹುಟ್ಟುಹಾಕಿದೆ.

ಮೆಕ್​ಡಾನಲ್ಸ್​ನಿಂದ ಆರ್ಡರ್​

ಇದರಲ್ಲಿ ಯುವತಿ ನಾನು ಮೆಕ್​ಡಾನಲ್ಸ್​ನಿಂದ ಫುಡ್​ ಆರ್ಡರ್​ ಮಾಡಿದ್ದೆ. ರೋಬೋಟ್ ಬಂದು ಕೊಡತ್ತೆ ಎಂದಿದ್ದಾರೆ. ನೋಡೋಣ ಹೇಗಿರತ್ತೆ ಎಂದು ಬಾಗಿಲು ತೆರೆದಾಗ ಬಾಗಿಲಿನ ಎದುರಿಗೆ ರೋಬೋಟ್​ ನಿಂತಿತ್ತು. ಅಲ್ಲಿ OTP ಹಾಕಿ ಒಂದು ಬಟನ್​ ಪ್ರೆಸ್​ ಮಾಡುತ್ತಿದ್ದಂತೆಯೇ ಆಕೆ ಆರ್ಡರ್​ ಮಾಡಿದ ಫುಡ್​ ಓಪನ್​ ಆಯಿತು. ಅದನ್ನು ತೆಗೆದುಕೊಂಡು, ಅಲ್ಲಿಯೇ ರೇಟಿಂಗ್ಸ್​ ಹಾಕಿದ ಯುವತಿ, ರೋಬೋಟ್​ಗೆ ಗುಡ್​ಬೈ ಹೇಳಿದ್ದಾರೆ.

ಶೀಘ್ರದಲ್ಲಿ ಭಾರತಕ್ಕೆ?

ಅಂದಹಾಗೆ ಕೊನೆಯಲ್ಲಿ ನಾನು ಇರುವುದು ಚೀನಾದಲ್ಲಿ ಎಂದು ಯುವತಿ ಹೇಳಿದ್ದಾರೆ. ಹಾಗೆಂದು ಇದು ಚೀನಾದಲ್ಲಿ ಆಗಿದ್ದಾ, ನಾವ್ಯಾಕೆ ತಲೆಕೆಡಿಸಿಕೊಳ್ಳಬೇಕು ಎನ್ನುವಂತಿಲ್ಲ. ಇಂಥ ಟೆಕ್ನಾಲಾಜಿಗಳು ಶೀಘ್ರದಲ್ಲಿ ಎಲ್ಲಾ ದೇಶಗಳಲ್ಲಿಯೂ ಹರಡುತ್ತದೆ. ಆದ್ದರಿಂದ ಭಾರತಕ್ಕೂ ಇದು ಶೀಘ್ರದಲ್ಲಿ ಕಾಲಿಟ್ಟರೆ ಅಚ್ಚರಿ ಏನಿಲ್ಲ. ವಿಡಿಯೋ ಇಲ್ಲಿದೆ ನೋಡಿ.

View post on Instagram