ರಿಲಯನ್ಸ್ ಜಿಯೋ ಅತೀ ಕಡಿಮೇ ಅವಧಿಯಲ್ಲಿ 10 ಕೋಟಿಗೂ ಅಧಿಕ ಗ್ರಾಹಕರನ್ನು ಹೊಂದುವ ಗುರಿ ಹೊಂದಲಾಗಿದೆ. ಇಂಟರ್'ನೆಟ್  ಬಳಕೆಗಾಗಿ ಪ್ರತಿ ತಿಂಗಳು 250 ಕೋಟಿ ರೂ. ವ್ಯಯ ಮಾಡಲಾಗುತ್ತಿದೆ. ದೇಶದಾದ್ಯಂತ ಜಿಯೋ 3100 ನಗರಗಳಲ್ಲಿ ಆಧಾರ್ ಆಧಾರಿತ ಸಿಮ್ ಆಕ್ಟಿವೇಷನ್ ಕೇಂದ್ರಗಳನ್ನು ಸ್ಥಾಪಿಸಿದೆ

ಮುಂಬೈ(ಅ.9): ಟೆಲಿಕಾಂ ಇತಿಹಾಸದಲ್ಲಿ ರಿಲಯನ್ಸ್ ಜಿಯೋ ಹೊಸ ದಾಖಲೆ ಬರೆದಿದೆ. ಕಾರ್ಯಚಾಲನೆ ಮಾಡಿದ ಒಂದೇ ತಿಂಗಳಲ್ಲಿ 1.60 ಕೋಟಿ ಗ್ರಾಹಕರು ರಿಜಿಯೋದ ಬಳಕೆದಾರರಾಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಟೆಲಿಕಾಂ ರಂಗದಲ್ಲಿ ಹೊಸ ಭರವಸೆಯೊಂದಿಗೆ ಒಂದು ತಿಂಗಳ ಹಿಂದೆ ಮಾರುಕಟ್ಟೆಗೆ ಕಾಲಿಟ್ಟ ರಿಜಿಯೋ ಗ್ರಾಹಕರಿಗೆ ಇಂಟರ್'ನೆಟ್ ಹಾಗೂ ದೂರವಾಣಿ ದರಗಳನ್ನು ಇತರ ಟೆಲಿಕಾಂ ಕಂಪನಿಗಳಿಗಿಂತ ಉಚಿಸ ಸೇವೆಗಳನ್ನು ಒಳಗೊಂಡು ಅತೀ ಕಡಿಮೆ ಬೆಲೆಯಲ್ಲಿ ಹಲವು ಅನುಕೂಲಗಳನ್ನು ನೀಡಿದೆ.

'ಭಾರತದಾದ್ಯಂತ ನಾವು ನಿರೀಕ್ಷೆಗೂ ಮೀರಿ ಪ್ರತಿಕ್ರಿಯೆ ಗಳಿಸಿದ್ದು, ಗ್ರಾಹಕರಿಗೆ ಅನುಕೂಲಗೊಳಿಸುವುದು ಹಾಗೂ ಹೆಚ್ಚು ಸಂತೃಪ್ತಿಗೊಳಿಸುವುದೆ ನಮ್ಮ ಪ್ರಮುಖ ಧ್ಯೇಯವಾಗಿದೆ. ಇಂಟರ್'ನೆಟ್ ಬಳಕೆಯಲ್ಲಿ ಪ್ರತಿಯೊಬ್ಬ ಭಾರತೀಯನು ಸಬಲೀಕರಣಗೊಳ್ಳಬೇಕು ಎಂಬುದೇ ನಮ್ಮ ಉದ್ದೇಶವಾಗಿದೆ' ಎಂದು ರಿಲಯನ್ಸ್ ಇಂಡಸ್ಟ್ರೀಸ್ ಸಂಸ್ಥೆಯ ಮುಖ್ಯಸ್ಥ ಮುಖೇಶ್ ಅಂಬಾನಿ ತಿಳಿಸಿದ್ದಾರೆ.

ರಿಲಯನ್ಸ್ ಜಿಯೋ ಅತೀ ಕಡಿಮೇ ಅವಧಿಯಲ್ಲಿ 10 ಕೋಟಿಗೂ ಅಧಿಕ ಗ್ರಾಹಕರನ್ನು ಹೊಂದುವ ಗುರಿ ಹೊಂದಲಾಗಿದೆ. ಇಂಟರ್'ನೆಟ್ ಬಳಕೆಗಾಗಿ ಪ್ರತಿ ತಿಂಗಳು 250 ಕೋಟಿ ರೂ. ವ್ಯಯ ಮಾಡಲಾಗುತ್ತಿದೆ. ದೇಶದಾದ್ಯಂತ ಜಿಯೋ 3100 ನಗರಗಳಲ್ಲಿ ಆಧಾರ್ ಆಧಾರಿತ ಸಿಮ್ ಆಕ್ಟಿವೇಷನ್ ಕೇಂದ್ರಗಳನ್ನು ಸ್ಥಾಪಿಸಿದೆ ಎಂದು ಅವರು ತಿಳಿಸಿದರು.

ಜಿಯೋ ಅತೀ ಕಡಿಮೆ ಬೆಲೆಯಲ್ಲಿ ಆಫರ್'ಗಳನ್ನು ಘೋಷಿಸಿದ ನಂತರ ಪ್ರಮುಖ ಟೆಲಿಕಾಂ ಕಂಪನಿಗಳಾದ ಏರ್'ಟೆಲ್, ವೊಡಾಫೋನ್, ಐಡಿಯಾ, ಬಿಎಸ್'ಎನ್'ಎಲ್ ಸೇರಿದಂತೆ ಪ್ರಮುಖ ಕಂಪನಿಗಳು ಹಲವು ಉಚಿತ ಆಫರ್'ಗಳನ್ನು ನೀಡಿವೆ.

ಏರ್'ಟೆಲ್ ಭಾರತದಲ್ಲಿ ಅತೀ ಹೆಚ್ಚು ಗ್ರಾಹಕರನ್ನು ಹೊಂದಿರುವ ಟೆಲಿಕಾಂ ಸಂಸ್ಥೆಯಾದರೆ ನಂತರದ ಸ್ಥಾನದಲ್ಲಿ ಐಡಿಯಾ ಹಾಗೂ ವೊಡಾಫೋನ್ ಕಂಪನಿಗಳಿವೆ.