Asianet Suvarna News Asianet Suvarna News

ಭಾರತದ ಅತಿದೊಡ್ಡ ಉದ್ಯಮ ರಿಲಯನ್ಸ್‌ ಕಂಪನಿ ತೆಕ್ಕೆಗೆ?

ಭಾರತದ ಬೃಹತ್ ಉದ್ಯಮ ಕ್ಷೇತ್ರವಾದ ರಿಲಾಯನ್ಸ್ ಇದೀಗ ಮತ್ತೊಂದು ಬೃಹತ್ ಉದ್ಯಮವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಸಜ್ಜಾಗಿದೆ. 

RIL Talks To Buy Top Cable Operator HathWay
Author
Bengaluru, First Published Oct 4, 2018, 12:31 PM IST

ಮುಂಬೈ: ಕೇಬಲ್‌ ಟೀವಿ ಮತ್ತು ಅಂತರ್ಜಾಲ ಕ್ಷೇತ್ರವನ್ನು ದೊಡ್ಡದಾಗಿ ಪ್ರವೇಶಿಸಲು ಸಜ್ಜಾಗಿರುವ ರಿಲಯನ್ಸ್‌, ಇದೀಗ ಭಾರತದ ಅತಿದೊಡ್ಡ ಕೇಬಲ್‌ ಆಪರೇಟರ್‌ ಹಾಥ್‌ವೇ ಖರೀದಿಸಲು ಮಾತುಕತೆ ನಡೆಸುತ್ತಿದೆ ಎಂದು ಹೇಳಲಾಗಿದೆ. 

ಈ ಮೂಲಕ ತನ್ನ ಬ್ರಾಡ್‌ ಬಾಂಡ್‌ ಸೇವೆಯಾಗಿರುವ ಗಿಗಾಫೈಬರ್‌ ಸ್ಪೀಡ್‌ ಅನ್ನು ದೊಡ್ಡ ಮಟ್ಟದಲ್ಲಿ ಮತ್ತಷ್ಟುಹೆಚ್ಚಿಸಲು ನಿರ್ಧರಿಸಿದೆ. ಈ ಬಗ್ಗೆ ಹ್ಯಾಥ್‌ವೇ ಮತ್ತು ರಿಲಯನ್ಸ್‌ ಸಂಸ್ಥೆಗಳು ಪ್ರತಿಕ್ರಿಯಿಸಲು ನಿರಾಕರಿಸಿವೆ. ಆದಾಗ್ಯೂ, ಹ್ಯಾಥ್‌ವೇ ಖರೀದಿಗೆ ರಿಲಯನ್ಸ್‌ ಮಾತುಕತೆ ನಡೆಸಿರುವುದು ಹೌದು ಎಂದು ಹೇಳುತ್ತವೆ ಮೂಲಗಳು. 

ಅಲ್ಲದೆ, ಕೇಬಲ್‌ ಟೀವಿ ಉದ್ಯಮದ ಮೇಲೆ ರಿಲಯನ್ಸ್‌ ಚಿತ್ತ ಹರಿಸಿರುವುದು ಇದೇ ಮೊದಲನೇ ಬಾರಿಯೇನಲ್ಲ. ಈ ಹಿಂದೆಯೂ ಡೆನ್‌ ನೆಟ್‌ವರ್ಕ್ ಅನ್ನು ರಿಲಯನ್ಸ್‌ ಖರೀದಿಸುವ ಸಾಧ್ಯತೆ ಬಗ್ಗೆ ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ವರದಿಯಾಗಿತ್ತು.

Follow Us:
Download App:
  • android
  • ios