ಚೀನಾದಲ್ಲಿ ಹಣಕ್ಕಾಗಿ ಕೃತಕ ಬುದ್ಧಿಮತ್ತೆಗೆ (AI) ಮುಖವನ್ನು ಬಾಡಿಗೆಗೆ ನೀಡುವ ಅಪಾಯಕಾರಿ ಪ್ರವೃತ್ತಿ ಹೆಚ್ಚಾಗುತ್ತಿದೆ. ಭಾರತೀಯರು ಬ್ಯಾಂಕಿಂಗ್ ಮತ್ತು ಮೊಬೈಲ್ ಸುರಕ್ಷತೆಗೆ ಫೇಸ್ ರೆಕಗ್ನಿಷನ್ ಬಳಸುವುದರಿಂದ, ಹಣದ ಆಸೆಗೆ ಮುಖವನ್ನು ಮಾರಿಕೊಂಡರೆ ಸೈಬರ್ ವಂಚನೆಗೆ ತುತ್ತಾಗುವ ಸಾಧ್ಯತೆ ಇದೆ.

ಇಂದು ಜಾಗತಿಕವಾಗಿ ಕೃತಕ ಬುದ್ಧಿಮತ್ತೆ(AI) ತಂತ್ರಜ್ಞಾನ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಒಂದು ಕಡೆ ಐಟಿ ಉದ್ಯೋಗ ಸೇರಿ ಎಲ್ಲ ಕ್ಷೇತ್ರಗಳನ್ನ ಮಾನವ ಹುದ್ದೆಗಳನ್ನು ಅಪೋಶನ ತೆಗೆದುಕೊಳ್ಳುತ್ತಿದ್ದರೆ ಇನ್ನೊಂದೆ ಇದೇ ಎಐ ಹಣ ಗಳಿಕೆಯ ಹೊಸ ಹೊಸ ಮಾರ್ಗಗಳನ್ನು ಸೃಷ್ಟಿಸುತ್ತಿದೆ. ಇಂದು ಎಐ ಸಾಮಾನ್ಯ ಜನರು ಆದಾಯದ ಮೂಲವನ್ನಾಗಿ ಮಾಡಿಕೊಂಡಿದ್ದಾರೆ.

ವಾಟ್ಸಪ್, ಯುಟ್ಯೂಬ್, ಇನ್‌ಸ್ಟಾಗ್ರಾಂಗಳಲ್ಲಿ ಕಾಂಟೆಂಟ್ ಕ್ರಿಯೆಟಿಂಗ್‌ನಿಂದ ಹಿಡಿದು ವಿಡಿಯೋ ಎಡಿಟಿಂಗ್, ಗ್ರಾಫಿಕ್ಸ್, ವಿಎಫ್‌ಎಕ್ಸ್ ಎಲ್ಲವೂ ಎಐನಿಂದಲೇ ಉಚಿತವಾಗಿ ಪಡೆದು ಸೋಷಿಯಲ್ ಮೀಡಿಯಾಗಳಿಂದ ಹಣ ಗಳಿಸುತ್ತಿದ್ದಾರೆ ಆದರೆ ಇದು ಹಳೆಯದಾಯಿತು. ಹೊಸ ಸುದ್ದಿ ಏನೆಂದರೆ ಇದೀಗ ಎಐಗೆ ನಿಮ್ಮ ಮುಖವನ್ನೇ ಮಾರಿಕೊಂಡು ಹಣ ಗಳಿಸಬಹುದು!

ಚೀನಾದಲ್ಲಿ ಎಐಗೆ ಮುಖವನ್ನ ಮಾರುವ ಮೂಲಕ ಹಣ ಗಳಿಸುತ್ತಾರೆ!

ಹೌದು ಇಂತಹದ್ದೊಂದು ಅವಕಾಶ ತೆರೆದುಕೊಂಡಿದ್ದು ಡಿಜಿಟಲ್ ಫ್ಲಾಟ್‌ಫಾರ್ಮ್‌ಗಳಲ್ಲಿ ಮುಖಗಳನ್ನೇ ಬಾಡಿಗೆ ಪಡೆಯುವ, ಅಥವಾ ಬಾಡಿಗೆ ಕೊಡುವ ಮೂಲಕ ಹಣ ಗಳಿಸುತ್ತಿರುವ ವಿಶಿಷ್ಟ ಅಲ್ಲಲ್ಲ ವಿಚಿತ್ರ ಅಪಾಯಕಾರಿ ಪ್ರವೃತ್ತಿ ಚೀನಾದಲ್ಲಿ ಹೆಚ್ಚಾಗುತ್ತಿದೆ. AI ನಿಂದ ರಚಿಸಿದ ವಿಡಿಯೋ ಗೇಮ್‌ಗಳು, ಜಾಹೀರಾತುಗಳು, ಚಿಕ್ಕ ಮೊಬೈಲ್ ಸಿರೀಸ್‌ನಲ್ಲಿ ತಮ್ಮ ಮುಖಗಳನ್ನು ಬಳಸುವುದಕ್ಕೆ ಅನುಮತಿ ಕೊಡುವ ಮೂಲಕ ಚೀನಿ ಜನರು ₹1,500 ರಿಂದ ₹65,000 ವರೆಗೆ ಸುಲಭವಾಗಿ ಗಳಿಸುತ್ತಿದ್ದಾರೆ. ಆದರೂ ಇದು ಸುರಕ್ಷಿತವಲ್ಲ. ಭಾರತದಲ್ಲಿ ಇಂಥ ಮೂಲದಿಂದ ಹಣ ಗಳಿಕೆ ಸಹವಾಸ ಬೇಡವೇ ಬೇಡ. ಏಕೆಂದರೆ ಭಾರತೀಯರು ಬ್ಯಾಂಕಿಂಗ್, ಮೊಬೈಲ್ ಸುರಕ್ಷತೆಗಾಗಿ ಫೇಸ್‌ ರೆಕಗ್ನಿಶೇನ್ ಆಗಿ ಮುಖವನ್ನೇ ಬಳಸಲಾಗುತ್ತಿದೆ. ಹೀಗಿರುವಾಗ ಹಣದ ಅಮಿಷೆಗೆ ಮುಖವನ್ನೇ ಮಾರಿಕೊಂಡರೆ ಬ್ಯಾಂಕ್ ಖಾತೆ, ನಿಮ್ಮ ಮೊಬೈಲ್ ಎಷ್ಟು ಸೇಫ್

ಮುಖದ ಚಹರೆ ಬಾಡಿಗೆ ಕೊಟ್ಟು ಹಣ ಗಳಿಸಿ ಎಂಬ ಜಾಹೀರಾತುಗಳು ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿರುವುದರಿಂದ ಜನರು ಹಣದ ಆಸೆಗೆ ಫೇಸ್‌ ಬಾಡಿಗೆ ಕೊಟ್ಟರೆ ಏನಾಗುತ್ತೆ? ನಿಮ್ಮ ಮುಖವನ್ನೇ ಬಳಸಿಕೊಂಡು ಕ್ರಿಮಿನಲ್‌ಗಳು, ಸೈಬರ್ ಅಪರಾಧಿಗಳು ನಿಮ್ಮ ಗುರುತು ಬಳಸಿಕೊಂಡು ಕಳ್ಳತನ, ಕಾಪಿರೈಟ್ ಉಲ್ಲಂಘನೆ, ಆಂತರಿಕ ಅಥವಾ ಗೌಪ್ಯತೆ ಬೆದರಿಕೆಗಳಿಗೆ ಬಳಸಿಕೊಂಡು ಸಮಸ್ಯೆ ನಿಮಗೆ ತಂದಿಕ್ಕಬಹುದು.

ಮುಖ(Face) ಯಾವುದಕ್ಕೆ ಬಳಕೆಯಾಗುತ್ತದೆ?

AI ಗೆ ಮುಖದ ಚಹರೆ ತೆಗೆದು ಬಾಡಿಗೆ ರೀತಿ ಕೊಡುವುದರಿಂದ ಅಂತಹ ಮುಖಗಳನ್ನು ಬಳಸಿಕೊಂಡು ಎರಡು ಮೂರು ನಿಮಿಷಗಳ ಕಿರುಚಿತ್ರ ತಯಾರಿಸುತ್ತಾರೆ. ಇತ್ತೀಚೆಗೆ ಚೀನಾದಲ್ಲಿ ಮೈಕ್ರೋ ಡ್ರಾಮಾಗಳ ಕ್ರೇಜ್ ಹೆಚ್ಚಾಗುತ್ತಿದೆ. 2026 ರ ಮೊದಲ ತ್ರೈಮಾಸಿಕದಲ್ಲಿ ಬಿಡುಗಡೆಯಾದ ಅಂಕಿಅಂಶ ನೋಡುವುದಾದರೆ, ಸರಿಸುಮಾರು 128,000 ಮೈಕ್ರೋಡ್ರಾಮಾಗಳಲ್ಲಿ 95 ಪ್ರತಿಶತಕ್ಕಿಂತ ಹೆಚ್ಚಿನವು AI ತಂತ್ರಜ್ಞಾನವನ್ನು ಬಳಸಿ ರಚಿಸಲ್ಪಟ್ಟಿವೆ. ಈ ಡಿಜಿಟಲ್ ಸಿರೀಸ್ ನಿರ್ಮಾಪಕರು ಆಕರ್ಷಕ ಮುಖಗಳಿಂದ ಹಿಡಿದು ವೃದ್ಧರು ಮತ್ತು ಸಾಮಾನ್ಯ ಜನರವರೆಗೆ ಪ್ರಮುಖ ಪಾತ್ರಗಳಿಗೆ ವೈವಿಧ್ಯಮಯ ಲುಕ್ ತೋರಿಸಲು ಬಯಸುತ್ತಾರೆ. AI ವೀಡಿಯೊಗಳಿಗೆ ನೀವು ನಟಿಸಬೇಕಾಗಿಲ್ಲ. ಕೇವಲ ನಿಮ್ಮ ಮುಖದ ಫೋಟೋ ಕೊಟ್ಟರೆ ಸಾಕು, ನೀವೇ ಹೀರೋ. ಕೇವಲ ನೀವು ಕೊಟ್ಟ ಫೋಟೋ ಬಳಸಿ ಮೈಕ್ರೋ ಡ್ರಾಮಾ ರಚಿಸುತ್ತಾರೆ. ಹಾಗಾಂತ ನಿಮ್ಮ ಫೇಸ್‌ ಅದಕ್ಕಷ್ಟೇ ಮಾತ್ರ ಬಳಕೆಯಾಗುತ್ತದೆ ಎಂಬ ಗ್ಯಾರಂಟಿ ಇಲ್ಲ. ಈಗ ಭಾರತೀಯರ ದೃಷ್ಟಿಕೋನದಲ್ಲಿ ನೋಡಿದರೆ, ಭಾರತೀಯರು ಬ್ಯಾಂಕ್ ಖಾತೆ ತೆಗೆಯಲು, ಹಣಕಾಸು, ಮೊಬೈಲ್ ಸುರಕ್ಷತೆಗೆ ಫೇಸ್‌ ರಿಕಗ್ನಿಷನ್ ಆಗಿರುತ್ತದೆ. ಹೀಗಿರುವಾಗ ನೀವು ಹಣಕ್ಕಾಗಿ ಫೇಸ್ ಮಾರಾಟ ಮಾಡಿದರೆ ಬ್ಯಾಂಕ್ ಖಾತೆ, ಮೊಬೈಲ್ ಎಷ್ಟು ಸೇಫ್? ನಿಮ್ಮ ಮುಖವನ್ನು ಫೇಸ್‌ ರಿಕಗ್ನಿಷನ್ ಆಗಿ ಬಳಸಿಕೊಂಡು ಬ್ಯಾಂಕ್ ಖಾತೆಯನ್ನ ತೆರೆದು ಹಣ ಲಪಟಾಯಿಸಿದರೆ? ಮೊಬೈಲ್ ಆನ್‌ಲಾಕ್ ಮಾಡಿ ಒಳಹೊಕ್ಕರೆ? ಈಗ ಸೈಬರ್ ಕ್ರಿಮಿನಲ್‌ಗಳಿಗೆ ಯಾವುದೂ ಅಸಾಧ್ಯವಾಗಿ ಉಳಿದಿಲ್ಲ.

ಮುಖ ಮಾರಾಟ ಪ್ರಕ್ರಿಯೆ ಹೇಗೆ ನಡೆಯುತ್ತೆ?

ಈ ಮುಖ ಬಾಡಿಗೆ ಕೊಡುವ ಆಕ್ಟ್-ಐಡಿಯಂತಹ ವಿಶೇಷ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ನಡೆಯುತ್ತದೆ. ಭಾಗವಹಿಸುವವರು ಮೊದಲು ಸ್ಟುಡಿಯೋಗೆ ಭೇಟಿ ನೀಡುತ್ತಾರೆ. ನಂತರ ವಿವಿಧ ಕೋನಗಳಿಂದ ಅವರ ಫೋಟೋಗಳನ್ನು ತೆಗೆದುಕೊಳ್ಳುತ್ತಾರೆ. Content Creators ನಂತರ ಅವರ ಅಗತ್ಯಗಳಿಗೆ ಸರಿಹೊಂದುವಂತೆ ವಯಸ್ಸು, ಲಿಂಗ ಮತ್ತು ಮುಖದ ವೈಶಿಷ್ಟ್ಯಗಳ ಆಧಾರದ ಮೇಲೆ ಚಿತ್ರಗಳನ್ನು ಶಾರ್ಟ್‌ಲಿಸ್ಟ್ ಮಾಡುತ್ತಾರೆ. ಆಯ್ಕೆ ಮಾಡಿದ ನಂತರ ವ್ಯಕ್ತಿಯ ಒಪ್ಪಿಗೆಯೊಂದಿಗೆ ಡಿಜಿಟಲ್ ಮುಖದ ಮಾದರಿಯನ್ನು ರಚಿಸಲಾಗುತ್ತದೆ ನಂತರ ಅದನ್ನು AI ಜಾಹೀರಾತುಗಳು, ಕಿರುಚಿತ್ರಗಳು ಮತ್ತು ಗೇಮಿಂಗ್‌ನಲ್ಲಿ ಬಳಸಲಾಗುತ್ತದೆ.

ಸಾಮಾನ್ಯ ಜನರಿಗೆ ದುಡ್ಡು ಗಳಿಸುವ ಹೊಸ ಮಾರ್ಗ

ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ನೋಂದಾಯಿಸಿಕೊಳ್ಳುವ ಚೀನಾದ ಯುವಕರು, ಮಾಡೆಲ್‌ಗಳು ಮತ್ತು ಸಾಮಾನ್ಯ ನಾಗರಿಕರಿಗೆ, ಈ ವಿಧಾನವು ಮನೆಯಿಂದಲೇ ಹಣ ಗಳಿಸುವ ಒಂದು ಮಾರ್ಗವಾಗಿದೆ. ಆರಂಭಿಕ ಹಂತದಲ್ಲಿ ನೂರಾರು ಜನರು ಈಗಾಗಲೇ ತಮ್ಮ ಫೋಟೋಗಳನ್ನು ವಾಣಿಜ್ಯ ಉದ್ದೇಶ ಬಳಕೆಗಾಗಿ ಪರವಾನಗಿ ನೀಡಲು ಒಪ್ಪಿಕೊಂಡಿದ್ದಾರೆ. AI-powered content ಗೆ ಭಾರಿ ಬೇಡಿಕೆ ಇರುವುದರಿಂದ, 2026 ರ ವೇಳೆಗೆ ಪ್ಲಾಟ್‌ಫಾರಂ ಸೇರುವವರ ಸಂಖ್ಯೆಯು ಅಪಾಯಕಾರಿಯಾಗಿ ಹೆಚ್ಚುತ್ತಿದೆ. ಈ ರೀತಿ ಹಣ ಗಳಿಸುವುದು ಸುಲಭವಾಗಿ ಕಂಡ್ರೂ ಅದರ ಹಿಂದಿನ ಕಾನೂನು ಮತ್ತು ನೈತಿಕ ಅಪಾಯಗಳು ಅಷ್ಟೇ ಅಪಾಯಕಾರಿಯಾಗಿವೆ.

ಹಣಕ್ಕಾಗಿ ಎಐಗೆ ಫೇಸ್‌ ಮಾರಾಟ ಮಾಡಿದ್ರೆ ಏನಾಗುತ್ತೆ?

ಈ ಹೊಸ ಬ್ಯುಸಿನೆಸ್‌ನ ಅತ್ಯಂತ ಅಪಾಯಕಾರಿ ಸಂಗತಿ ಎಂದರೆ ಅನೇಕ AI ಕಂಪನಿಗಳು ಅನುಮತಿಯಿಲ್ಲದೆ ಜನರ ಮುಖಗಳನ್ನು ಬಳಸಲು ಪ್ರಾರಂಭಿಸಿವೆ. ಇತ್ತೀಚೆಗೆ ಚೀನಾದಲ್ಲಿ AI ಸಿರೀಸ್ Social media influencer ಗಳ ಮುಖಗಳನ್ನು ಬಳಸಿಕೊಂಡು ಲಕ್ಷಾಂತರ ವೀಕ್ಷಣೆಗಳನ್ನು ಗಳಿಸಿದ ಪ್ರಕರಣಗಳು ಬೆಳಕಿಗೆ ಬಂದಿವೆ. ವಿವಾದವಾಗುತ್ತಿದ್ದಂತೆ ಬೈಟ್‌ಡ್ಯಾನ್ಸ್‌ನಂತಹ ಪ್ರಮುಖ ಕಂಪನಿಗಳು ತಮ್ಮ ಪ್ಲಾಟ್‌ಫಾರ್ಮ್‌ಗಳಿಂದ 85,000 ಕ್ಕೂ ಹೆಚ್ಚು ಅನಧಿಕೃತ AI ವೀಡಿಯೊಗಳನ್ನು ತೆಗೆದುಹಾಕಬೇಕಾಯಿತು. ಯಾರೊಬ್ಬರ ಧ್ವನಿ ಅಥವಾ ಮುಖದ ಅನಧಿಕೃತ AI ಪ್ರತಿಗಳನ್ನು ರಚಿಸುವುದು ಪ್ರಮುಖ ಸೈಬರ್ ಬೆದರಿಕೆಯಾಗಿ ಮಾರ್ಪಟ್ಟಿದೆ, ಇದು ಸಾಮಾನ್ಯ ಜನರ ಸೋಷಿಯಲ್ ಇಮೇಜ್ ಅನ್ನು ಕ್ಷಣಾರ್ಧದಲ್ಲಿ ಹಾನಿಗೊಳಿಸುತ್ತದೆ.

ಈ ವ್ಯವಹಾರ ದೊಡ್ಡ ಅಪಾಯ ಯಾವುದು?

ಈ ವ್ಯವಹಾರದಲ್ಲಿನ ದೊಡ್ಡ ಅಪಾಯವೆಂದರೆ ಪ್ರೈವೆಸಿ ಪಾಲಿಸಿ ಅಸ್ಪಷ್ಟವಾಗಿರುತ್ತವೆ. ಹೀಗೆ ಹಣಕ್ಕಾಗಿ ಮುಖ ಮಾರಾಟ ಮಾಡುವ ಜನರಿಗೆ ತಮ್ಮ ಮುಖವನ್ನು ಯಾರು, ಎಲ್ಲಿ, ಯಾವ ದೇಶದಲ್ಲಿ ಯಾವ ರೀತಿಯ ಉದ್ದೇಶಕ್ಕಾಗಿ ಬಳಸುತ್ತಾರೆ ಎಂಬುದರ ಬಗ್ಗೆ ಯಾವುದೇ ಕಲ್ಪನೆ ಇರುವುದಿಲ್ಲ. ಪ್ರೈವೆಸಿ, ಫೋಟೋ ಕಾಪಿರೈಟ್ ಗಳು ಈ ಗಂಭೀರ ಉಲ್ಲಂಘನೆಯು ನ್ಯಾಯಾಲಯಗಳಲ್ಲಿ ಮೊಕದ್ದಮೆಗಳ ಸಂಖ್ಯೆಯೂ ಹೆಚ್ಚಾಗ್ತಿದೆ. ಕಳೆದ ಮೂರು ವರ್ಷಗಳಲ್ಲಿ ಚೀನಾದ ಗುವಾಂಗ್‌ಝೌ ಇಂಟರ್ನೆಟ್ ನ್ಯಾಯಾಲಯವು ಸುಮಾರು 700 AI- ಸಂಬಂಧಿತ ಚಿತ್ರ ಮತ್ತು ಫೇಸ್ ಕಳ್ಳತನ ಪ್ರಕರಣಗಳನ್ನು ಆಲಿಸಿದೆ, ಇದು ಎಐ ಗೆ ಮುಖ ಮಾರಾಟ ಮಾಡುವುದು ಎಷ್ಟು ಅಪಾಯಕಾರಿ ಎಂಬುದನ್ನು ತೋರಿಸುತ್ತದೆ.