ನವದೆಹಲಿ (ಮೇ  11)  ನಮ್ಮ ದೇಶದ ಸಂಶೋಧಕರು ಎಂಥದ್ದೇ ಸವಾಲಿನ ಸ್ಥಿತಿ ಎದುರಾದರೂ ಹೋರಾಟ ಮಾಡಿ  ಜಯ ಸಾಧಿಸುತ್ತಾರೆ. ಕೊರೋನಾ ವಿರುದ್ಧವೂ ದೇಶ ಗೆಲ್ಲಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ರಾಷ್ಟ್ರೀಯ ತಂತ್ರಜ್ಞಾನದ ದಿನದ ಅಂಗವಾಗಿ ಮೋದಿ ಒಂದಿಷ್ಟು ವಿಚಾರಗಳನ್ನು ಹಂಚಿಕೊಂಡರು. ದೇಶದ ವಿಜ್ಞಾನಿಗಳ ಕೊಡುಗೆ ಸ್ಮರಿಸಿದರು, ಶ್ಲಾಘಿಸಿದರು.

ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದ ಸಂದರ್ಭ 1998 ರ ಮೇ 11  ರಂದು ಪೋಖ್ರಾನ್ ನಲ್ಲಿ ಪರಮಾಣು ಪರೀಕ್ಷೆಯನ್ನು ದೇಶ  ನಡೆಸಿತ್ತು.  ಹಾಗಾಗಿ ಈ ದಿನವನ್ನು ರಾಷ್ಟ್ರೀಯ ತಂತ್ರಜ್ಞಾನ ದಿನವನ್ನಾಗಿ ಆಚರಣೆ ಮಾಡಿಕೊಂಡು ಬರಲಾಗಿದೆ.

ಭಾರತೀಯ ವಾಯುಪಡೆ ಶಕ್ತಿ ಪ್ರದರ್ಶನ ನೋಡಲೇಬೇಕು

ಕಠಿಣ ಪರಿಶ್ರಮದೊಂದಿಗೆ ದೇಶದ ಏಳಿಗೆಗೆ ಶ್ರಮಿಸುತ್ತಿರುವ ವಿಜ್ಞಾನಿಗಳಿಗೆ ವಂದಿಸುತ್ತೇನೆ ಎಂದು ಪ್ರಧಾನಿ ಹೇಳಿದ್ದಾರೆ. 1998 ರಲ್ಲಿ ಪೋಖ್ರಾನ್‌ನಲ್ಲಿ ನಡೆಸಿದ ಪರಮಾಣು ಪರೀಕ್ಷೆಗಳು ರಾಷ್ಟ್ರೀಯ ತಂತ್ರಜ್ಞಾನ ದಿನಾಚರಣೆ ಮಹತ್ವ ಸಾರಿಕೊಂಡು ಬಂದಿದೆ.  

ಭಾರತದ ಮಾಜಿ ರಾಷ್ಟ್ರಪತಿ, ಭಾರತರತ್ನ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಪರೀಕ್ಷೆಗಳ ನೇತೃತ್ವ ವಹಿಸಿದ್ದರು. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ), ಭಾಭಾ ಪರಮಾಣು ಸಂಶೋಧನಾ ಕೇಂದ್ರ (ಬಾರ್ಕ್), ಪರಮಾಣು ಖನಿಜಗಳ ನಿರ್ದೇಶನಾಲಯ ಮತ್ತು ಪರಿಶೋಧನೆ ಮತ್ತು ಸಂಶೋಧನೆ (ಎಎಮ್‌ಡಿಇಆರ್) ವಿಜ್ಞಾನಿಗಳ ಸಹಯೋಗದೊಂದಿಗೆ ಪೋಖ್ರಾನ್ ನಲ್ಲಿ ಪರೀಕ್ಷೆ ನಡೆದಿತ್ತು. ಭಾರತ ತನ್ನ ಬಳಿ ಅಣ್ವಸ್ತ್ರ ಇದೆ ಎಂಬ ಸಂದೇಶವನ್ನು ಇಡೀ ವಿಶ್ವಕ್ಕೆ ರವಾನಿಸಿತ್ತು.